ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್-ಕೊಲ್ಲಾಪುರ ವಿಶೇಷ ರೈಲು ಮುಂದುವರಿಕೆ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೈದರಾಬಾದ್-ಕೊಲ್ಲಾಪುರ-ಹೈದರಾಬಾದ್ (ನಂ. 07143/07144) ವಿಶೇಷ ಎಕ್ಸ್‌ಪ್ರೆಸ್ ರೈಲು (ವಾರಕ್ಕೆ ನಾಲ್ಕು ಬಾರಿ) ಸಂಚಾರವನ್ನು ಅಕ್ಟೋಬರ್ 12ರವರೆಗೆ ಮುಂದುವರಿಸಲು ನೈರುತ್ಯ ರೈಲ್ವೆ ವಲಯ ಕಚೇರಿ ನಿರ್ಧರಿಸಿದೆ.

ಪ್ರತಿ ಮಂಗಳವಾರ, ಬುಧವಾರ, ಶನಿವಾರ ಹಾಗೂ ಭಾನುವಾರ ದಿನಗಳಂದು ಈ ರೈಲು ಸಂಚರಿಸುತ್ತದೆ. ರಾತ್ರಿ 11.10ಕ್ಕೆ ಹೈದರಾಬಾದ್‌ನಿಂದ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ ಯಾದಗಿರಿ (ಬೆಳಿಗ್ಗೆ 3.29), ನಾರಾಯಣಪೇಟೆ ರಸ್ತೆ (ಬೆ 3.49), ರಾಯಚೂರು (ಬೆ 4.54), ಗುಂತಕಲ್ (ಬೆ 7.49), ಬಳ್ಳಾರಿ (ಬೆ. 8.54), ತೋರಣಗಲ್ಲು (ಬೆ. 9.36), ಹೊಸಪೇಟೆ (ಬೆ 10.24), ಕೊಪ್ಪಳ (ಬೆ 11.04), ಗದಗ (ಮಧ್ಯಾಹ್ನ 12.01), ಹುಬ್ಬಳ್ಳಿ (ಮ 1.59), ಧಾರವಾಡ (ಮ 2.34), ಲೋಂಡಾ (ಸಂಜೆ 4.14), ಬೆಳಗಾವಿ (ಸಂಜೆ 5.30), ಘಟಪ್ರಭಾ (ರಾತ್ರಿ 7.29), ರಾಯಬಾಗ (ರಾ 7.59), ಮೀರಜ್ (ರಾ 9.20) ಮೂಲಕ  ರಾತ್ರಿ 10.45ಕ್ಕೆ ಕೊಲ್ಲಾಪುರ ನಿಲ್ದಾಣವನ್ನು ಸೇರಲಿದೆ.

ಕೊಲ್ಲಾಪುರದಿಂದ ವಾಪಸು ಈ ರೈಲು ಪ್ರತಿ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ದಿನಗಳಲ್ಲಿ ಬೆಳಿಗ್ಗೆ 7.30ಕ್ಕೆ ಹೊರಡಲಿದೆ. ಮೀರಜ್ (ಬೆ 8.30), ರಾಯಬಾಗ (ಬೆ 9.48), ಘಟಪ್ರಭಾ (ಬೆ 10.33), ಬೆಳಗಾವಿ (ಬೆ 11.55), ಲೋಂಡಾ (ಮಧ್ಯಾಹ್ನ 1.18), ಧಾರವಾಡ (ಮ 3.05), ಹುಬ್ಬಳ್ಳಿ (ಸಂಜೆ 4.05), ಗದಗ (ಸ 5.23), ಕೊಪ್ಪಳ (ಸ 6.28), ಹೊಸಪೇಟೆ (ರಾತ್ರಿ 7.03), ತೋರಣಗಲ್ಲು (ರಾ 7.43), ಬಳ್ಳಾರಿ (ರಾ 9.30), ರಾಯಚೂರು (ರಾ 11.38), ನಾರಾಯಣ ಪೇಟೆ ರಸ್ತೆ (ಮಧ್ಯರಾತ್ರಿ 12.20), ಯಾದಗಿರಿ (ಮರುದಿನ ಬೆಳಿಗ್ಗೆ 1.38) ಮೂಲಕ ಬೆಳಿಗ್ಗೆ 6.45ಕ್ಕೆ ಹೈದರಾಬಾದ್ ನಿಲ್ದಾಣವನ್ನು ಸೇರುವುದು ಎಂದು ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT