ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕಾ ಪದ್ಧತಿ ತರಬೇತಿ ಶಿಬಿರ

Last Updated 20 ಸೆಪ್ಟೆಂಬರ್ 2013, 9:40 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಮೆಟ್ಟಿನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಧರ್ಮಸ್ಥಳ ಗ್ರಾಮಾ­ಭಿವೃದ್ದಿ ಯೋಜನೆ ಹಾಗೂ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಗುತ್ತಿಗಾರು ಇವರ ಸಹಯೋಗ­ದೊಂದಿಗೆ ಸುಧಾರಿತ ಹೈನುಗಾರಿಕಾ ಪದ್ದತಿಗಳ ಮಾಹಿತಿ ತರಬೇತಿ ಕಾರ್ಯಾಗಾರವು ರಾಜ ದೈವ ಮತ್ತು ಪುರುಷದೈವ ದೈವಸ್ಥಾನದ ಸಭಾಂಗಣದಲ್ಲಿ  ಇತ್ತೀಚೆಗೆ ನಡೆಯಿತು.

ಹಾಲು ಉತಾ್ಪದಕರ ಸಂಘದ ಅಧ್ಯಕ್ಷೆ ಮಾಲತಿ ಕಾಳಿಕಾಪ್ರಸಾದ್ ಮುಂಡೋಡಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸರೋಜಿನಿ ಗಂಗಯ್ಯ ಉದಾ್ಘಟಿ­ಸಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿ ಯುವರಾಜ್ ಜೈನ್ ಮತ್ತು ಗ್ರಾ.ಪಂ ಸದಸ್ಯ ದಿವಾಕರ ಮುಂಡೋಡಿ ದೇವಚಳ್ಳ, ಲಯನೆಸ್ ಕ್ಲಬ್ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ  ರಾಘವಗೌಡ ಪಲ್ಲತ್ತಡ್ಕ( ಮಿಲ್ಕ್ ಮಾಸ್ಟರ್) ಇವರು ಹಾಲು ಕರೆಯುವ ಯಂತ್ರದ ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಹಾಗೂ ಸ್ವಂತ ಅನುಭವಗಳನ್ನು ಹಂಚಿಕೊಂಡರು. ಪಶು ವೈದ್ಯಾಧಿ­ಕಾರಿ ಡಾ.ಕೇಶವ ಸುಳ್ಳಿ, ಸಮತೋಲನ ಆಹಾರ ಪದ್ದತಿ ರಾಸುಗಳ ಆರೈಕೆ ಬಗ್ಗೆ ವಿವರಿಸಿದರು.

ಸರೋಜಿನಿ ಗಂಗಯ್ಯರವರು ತೋಟದಲ್ಲಿ ಬೆಳೆಸಿದ 25 ತೆಂಗಿನ ಗಿಡಗಳನ್ನು ಉಚಿತವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಗೋಬರ್ ಗ್ಯಾಸ್, ಅಜೋಲಾ ಚಾಪ್ ಕಟ್ಟರ್, ಸ್ಲರಿ ಟ್ಯಾಂಕ್ ಇವುಗಳ ಬಗ್ಗೆ ಪ್ರಾತ್ಯಕ್ಷಿತೆಯನ್ನು ಕಾಳಿಕಾಪ್ರಸಾದ್ ಮುಂಡೋಡಿ ಅವರ ಮನೆಯಲ್ಲಿ ನಡೆಯಿತು. ಕಡ್ಯ ತಿಮ್ಮಪ್ಪ ಗೌಡ ಕಂದ್ರಪ್ಪಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT