ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗ್ರಹಕ್ಕೆ ಪುರಾವೆ: ಬ್ರೆಜಿಲ್ ವಿಜ್ಞಾನಿ ವಾದ

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸೌರವ್ಯೆಹದ ಅಂಚಿನಲ್ಲಿ, ಪ್ಲೂಟೊ ಗ್ರಹದ ಆಚೆ ಭೂಮಿಗಿಂತ ನಾಲ್ಕು ಪಟ್ಟು ದೊಡ್ಡದಿರುವ ಮತ್ತೊಂದು ಗ್ರಹ ಸುತ್ತುತ್ತಿರುವ ಬಗ್ಗೆ ಹೊಸ ಪುರಾವೆ ದೊರೆತಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

`ಸಾಕಷ್ಟು ದೂರ ಇರುವ ಈ ಗ್ರಹವನ್ನು ಭೂಮಿ ಆಧಾರಿತ ದೂರದರ್ಶಕಗಳಿಂದ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ~ ಎಂದು ಬ್ರೆಜಿಲ್‌ನ ಪ್ರಖ್ಯಾತ ಖಗೋಳ ವಿಜ್ಞಾನಿ ರಾಡ್ನಿ ಗೋಮ್ಸ ತಿಳಿಸಿದ್ದಾರೆ.

ಅಮೆರಿಕದ ಖಗೋಳ ವಿಜ್ಞಾನ ಸಂಸ್ಥೆಯ ಸಭೆಯಲ್ಲಿ ಗೋಮ್ಸ ಹೊಸ ಗ್ರಹದ ಅಸ್ತಿತ್ವ ಕುರಿತು ಕಂಪ್ಯೂಟರ್ ಮಾದರಿಗಳನ್ನು ಸಹ ಪ್ರದರ್ಶಿಸಿದ್ದಾರೆ. ಸಭೆಯಲ್ಲಿ ಕೆಲವರು ಈ ವಾದ ಪುರಸ್ಕರಿಸಲು ಇನ್ನೂ ಪ್ರಬಲ ಪುರಾವೆ ಕಲೆಹಾಕುವುದು ಅಗತ್ಯವಿದೆ, ಕಾಲ್ಪನಿಕ ಗ್ರಹವನ್ನು ನಿಜ ಗ್ರಹ ಎಂದು ಹೇಗೆ ಒಪ್ಪಿಕೊಳ್ಳುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT