ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗ್ರಾಹಕ ದರ ಶ್ರೇಣಿ 18ರಂದು ಪ್ರಕಟ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕ ತತ್ತರಿಸಿರುವ ಹಿನ್ನೆಲೆಯಲ್ಲಿ ಹೊಸ ಗ್ರಾಹಕ ದರ ಶ್ರೇಣಿಯನ್ನು ಫೆಬ್ರುವರಿ 18ರಂದು ಪ್ರಕಟಿಸವುದಾಗಿ ಸರ್ಕಾರ ಹೇಳಿದೆ.

ನಗರ, ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಿಗೆ ಪ್ರತ್ಯೇಕ ದರ ಶ್ರೇಣಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.  ಇದು ಮುಂದಿನ ಒಂದು ವರ್ಷಗಳ ಕಾಲ ಜಾರಿಯಲ್ಲಿರಲಿದೆ. ಪ್ರಮುಖ ಐದು ಸರಕು ಗುಂಪುಗಳಾದ ಆಹಾರ, ಪಾನೀಯ, ತಂಬಾಕು, ಇಂಧನ, ಗೃಹ, ಪಾದರಕ್ಷೆ, ಬಟ್ಟೆಗಳಿಗೆ ಪರಿಷ್ಕೃತ ದರ ಅನ್ವಯಿಸಲಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ದರ ಶ್ರೇಣಿ ಜಾರಿಗೊಳ್ಳಲಿದೆ. 

ಇದರ ಜತೆಗೆ ಸರ್ಕಾರ ನಾಲ್ಕು ಗ್ರಾಹಕ ದರ ಸೂಚ್ಯಂಕ (ಸಿಪಿಐ) ಪ್ರಕಟಿಸಿದೆ. ಕೈಗಾರಿಕಾ, ಕೃಷಿ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಮತ್ತು ನಗರ ಪ್ರದೇಶದ ಉದ್ಯೋಗಿಗಳಿಗಾಗಿ ಗ್ರಾಹಕ ಸೂಚ್ಯಂಕ ದರ ನಿಗದಿಪಡಿಸಲಾಗಿದೆ.

‘ಸದ್ಯ ಜಾರಿಯಲ್ಲಿರುವ ಗ್ರಾಹಕ ದರ ಶ್ರೇಣಿಯಲ್ಲಿ ಹಲವು ನ್ಯೂನತೆಗಳಿವೆ. ಇದು ದೇಶದಲ್ಲಿರುವ ಒಟ್ಟಾರೆ ನೈಜ ದರ ವ್ಯತ್ಯಾಸವನ್ನು ಬಿಂಬಿಸುತ್ತಿಲ್ಲ’ ಎಂದು ಹಿರಿಯ ಅಂಕಿಅಂಶ ತಜ್ಞ ಟಿ.ಸಿ.ಎ ಅನಂತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT