ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಕ್ಷ: ಸುಲಭದ ಮಾತಲ್ಲ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಣ್ಣಾ ಹಜಾರೆ ತಂಡದ ಕೆಲವು ಸದಸ್ಯರು ಕೇಜ್ರಿವಾಲ್ ನೇತೃತ್ವದಲ್ಲಿ ಹೊಸ ರಾಜಕೀಯ ಪಕ್ಷ ರಚನೆಗೆ ಚಾಲನೆ ನೀಡಿದ್ದಾರೆ.

ದೇಶದಲ್ಲಿ ತಾರಕಕ್ಕೇರಿದ ಭ್ರಷ್ಟಾಚಾರ ಯಾವ ರೂಪದಲ್ಲಿಯೂ ಇರಬಹುದು. ಆದರೆ ಭ್ರಷ್ಟರಲ್ಲದ, ಅದಕ್ಕೆ ಬಲಿಪಶುಗಳಷ್ಟೇ ಆಗಿರುವ ಬಹುಸಂಖ್ಯೆಯ ಜನರೂ, ಪರಿಶುದ್ಧ ವ್ಯಕ್ತಿತ್ವದ ಉತ್ತಮ ನಾಯಕರಾಗಬಲ್ಲ ಜನರೂ ಇರುವುದಂತೂ ಸತ್ಯ. ಆದರೆ ಅಂತಹ ಪಕ್ಷವೊಂದು ಅವರನ್ನೆಲ್ಲಾ ತಲುಪಿ ದೇಶದ ಆಡಳಿತ ಚುಕ್ಕಾಣಿ ಹಿಡಿಯಬೇಕೆಂದರೆ ಅದು ಅಷ್ಟೇನೂ ಸುಲಭದ ಮಾತಲ್ಲ.

ಇಂದಿನ ವ್ಯವಸ್ಥೆಯೊಳಗೆ ಶುದ್ಧ ಚರಿತ್ರೆಯ, ಬುದ್ಧಿವಂತನೂ ಜ್ಞಾನಿಯೂ ಆದವನೊಬ್ಬ ಹಣದ ಹೊಳೆ ಹರಿಸದೆ, ಸುಳ್ಳು ಭರವಸೆ ನೀಡದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಾಗಲೀ, ಗೆದ್ದು ಬರುವುದಾಗಲೀ ಸಾಧ್ಯವಿಲ್ಲ ಎಂಬುದು ಎಲ್ಲರೂ ಒಪ್ಪಿಕೊಂಡ ವಿಷಯ, ಆದರೂ ರಾಜಕೀಯ ಅವ್ಯವಸ್ಥೆ ತಾರಕಕ್ಕೇರಿರುವ ಈ ಸನ್ನಿವೇಶದಲ್ಲಿ ಜನರ ಮನಸ್ಸು ಬದಲಾಗಬಹುದು.

 -ಕೆ. ಶ್ರೀನಿವಾಸಮೂರ್ತಿ, ಶೃಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT