ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಠ್ಯಕ್ರಮ ಈಗ ಬೇಡ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಪಿ.ಯು.ಸಿ. ತರಗತಿಗಳಿಗೆ ಕೇಂದ್ರೀಯ ಪಠ್ಯ ಕ್ರಮ ಜಾರಿಗೆ ತರುವುದಾಗಿ ಸರ್ಕಾರ ಹೇಳಿದೆ. ಇದಕ್ಕೆ ಕೇಂದ್ರ ಸರ್ಕಾರದ ಒತ್ತಾಯವೂ ಇದೆ ಎಂಬ ವರದಿ ಪ್ರಕಟವಾಗಿದೆ.(ಪ್ರ. ವಾ. ಡಿ. 24 ಪುಟ 4) ಇದಕ್ಕೆ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು ಪ್ರತಿಕ್ರಿಯೆ ನೀಡಿ ಈ ಪಠ್ಯ ಕ್ರಮ ಜಾರಿಗೆ ಈಗಲೇ ತರುವುದು ಬೇಡ. ಕನಿಷ್ಟ ಮೂರು ವರ್ಷ ಕಾಲಾವಕಾಶಬೇಕು ಎಂದು ಹೇಳಿದ್ದಾರೆ. ಅವರ ನಿಲುವು ಶ್ಲಾಘನೀಯ.

ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳದೆ ಹೊಸ ಪಠ್ಯಕ್ರಮ ಜಾರಿಗೆ ತರುವುದು ಬೇಡ. ಏಕೆಂದರೆ, ಪಿ.ಯು.ಸಿ.ಗೆ ಈಗ ಇರುವ ಪಠ್ಯಗಳನ್ನು, ಸಿ.ಬಿ.ಎಸ್.ಸಿ. ಮಟ್ಟಕ್ಕೆ ಏರಿಸಿ, ಹೊಸ ಸಿಲಬಸ್ ರೂಪಿಸಬೇಕು. ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಭೋದಕರಿಗೆ ಹೊಸ ಸಿಲಬಸ್‌ನಂತೆ ಬೋಧಿಸಲು ಅಗತ್ಯ ತರಬೇತಿಗಳ ಅವಶ್ಯಕತೆ ಇದೆ.

ಗ್ರಾಮಾಂತರ ಪ್ರದೇಶಗಳ ಜೂನಿಯರ್ ಕಾಲೇಜುಗಳಲ್ಲಿ ಈಗಲೇ ಉಪನ್ಯಾಸಕರ ಕೊರತೆ ಇದೆ. ಈ ಕುರಿತು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗುತ್ತಲೇ ಇವೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರ ಆದ್ಯತೆ ನೀಡಬೇಕು. ಸಿದ್ಧತೆಗಳನ್ನು ಮಾಡಿಕೊಂಡು  2015ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT