ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮುಖಗಳಿಗೆ ಮತದಾರ ಮಣೆ

Last Updated 7 ಜನವರಿ 2014, 6:26 IST
ಅಕ್ಷರ ಗಾತ್ರ

ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಒಬ್ಬ ಹಾಲಿ ನಿರ್ದೇಶಕರು ಹಾಗೂ ಮೂವರು ಹೊಸ ಮುಖಗಳಿಗೆ ಮತದಾರರು ಮಣೆ ಹಾಕಿದ್ದಾರೆ.

ಜಿಲ್ಲೆಯಿಂದ ನಾಲ್ವರು ನಿರ್ದೇಶಕರ ಸ್ಥಾನಕ್ಕೆ ಸೋಮವಾರ ನಡೆದ ಮತ ಎಣಿಕೆಯ ನಂತರ ಡಾ.ಬಿ.ಸಿ. ಬೊಮ್ಮಯ್ಯ, ಡಾ.ಬಿ. ಶಿವಲಿಂಗಯ್ಯ ಡಿ.ಎನ್‌. ಬೆಟ್ಟೇಗೌಡ ಹಾಗೂ ಎಚ್‌್.ಎಂ. ನಾರಾಯಣಮೂರ್ತಿ ಆಯ್ಕೆಯಾಗಿದ್ದಾರೆ.
ಒಟ್ಟು 336 ಮತಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ಪಿ. ಶಶಿಧರ್‌್ ಘೋಷಿಸಿದರು.

ಒಕ್ಕಲಿಗರ ಸಂಘಕ್ಕೆ ಸತತ ಆರು ಬಾರಿ ಆಯ್ಕೆಯಾಗಿದ್ದ ಮಾಜಿ ಶಾಸಕ ಎಂ. ಶ್ರೀನಿವಾಸ್‌್ ಹಾಗೂ ವಿಧಾನ ಪರಿಷತ್‌್ ಸದಸ್ಯ ಬಿ. ರಾಮಕೃಷ್ಣ ಸೋಲನ್ನಪ್ಪಿದ್ದಾರೆ. ಇವರ ಸಿಂಡಿಕೇಟಿನಲ್ಲಿ ಗುರುತಿಸಿಕೊಂಡಿದ್ದ ನೆಲ್ಲಿಗೆರೆ ಬಾಲು ಅವರೂ ಸೋತಿದ್ದಾರೆ.
ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ಡಾ.ಬಿ.ಸಿ. ಬೊಮ್ಮಯ್ಯ,    ಎಚ್‌್.ಎಂ. ನಾರಾಯಣಮೂರ್ತಿ ಅವರನ್ನು ಈ ಬಾರಿ ಮತದಾರರು ಕೈ ಹಿಡಿದಿದ್ದಾರೆ.

ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ಡಾ.ಬಿ.ಸಿ. ಬೊಮ್ಮಯ್ಯ ಅವರಿಗೆ ಕೊನೆಗೂ ವಿಜಯಲಕ್ಷ್ಮಿ ಒಲಿದಳು. ಆ ಸುತ್ತಿನಲ್ಲಿ ಎರಡನೇ ಸ್ಥಾನದಲ್ಲಿ ಮಾಜಿ ಶಾಸಕ   ಎಂ. ಶ್ರೀನಿವಾಸ್‌ ಅವರು ಕೊನೆಯ ಸುತ್ತಿನ ವೇಳೆಗೆ ಐದನೇ ಸ್ಥಾನಕ್ಕೆ ಕುಸಿದಿದ್ದರು.

ಮೊದಲೇ ಸುತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದ   ಡಾ.ಬಿ. ಶಿವಲಿಂಗಯ್ಯ ಅವರು ಕೊನೆಯ ಸುತ್ತಿನ ವೇಳೆಗೆ ನಾಲ್ಕನೇ ಸ್ಥಾನ ಗಿಟ್ಟಿಸುವ ಮೂಲಕ ಆಯ್ಕೆಯಾಗಿದ್ದಾರೆ.

ಮತ ಎಣಿಕೆ ಕೇಂದ್ರ: ಬೆಳಿಗ್ಗೆ 8 ಗಂಟೆಯ ವೇಳೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. 9 ಗಂಟೆಯ ವೇಳೆಗೆ ಮತ ಎಣಿಕೆ ಕೇಂದ್ರದ ಹೊರಗಡೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಸಂಜೆ 7.30ಕ್ಕೆ ಫಲಿತಾಂಶವನ್ನು ಚುನಾವಣಾಧಿಕಾರಿ ಘೋಷಿಸುವವರೆಗೂ ಮತ ಕೇಂದ್ರದ ಆವರಣದಿಂದ ಹೊರಗಡೆ ಹೋಗಿರಲಿಲ್ಲ.

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿಯನ್ನೂ ವಿತರಿಸಿದರು.

ಗೆಲುವು ಸಾಧಿಸಿದ ಅಭ್ಯರ್ಥಿಗಳ ಮತಗಳ ವಿವರ: ಡಿ.ಎನ್‌. ಬೆಟ್ಟೇಗೌಡ (16,374), ಡಾ.ಬಿ.ಸಿ. ಬೊಮ್ಮಯ್ಯ (15,161), ಎಚ್‌\.ಎಂ. ನಾರಾಯಣಮೂರ್ತಿ (14,824), ಡಾ.ಬಿ. ಶಿವಲಿಂಗಯ್ಯ (14,026).

ಸೋಲನುಭವಿಸಿದ ಅಭ್ಯರ್ಥಿಗಳ ಮತಗಳ ವಿವರ: ಟಿ.ಟಿ. ಅನುಸೂಯ (1,919), ಸಿ.ಜಿ. ಕುಮಾರಗೌಡ (ಲಕ್ಕಪ್ಪ) (2,387), ಕೆ.ವಿ. ಕುಮಾರ್‌ (1,229), ಎಲ್‌ ಕೃಷ್ಣ (1,155), ಜಿ.ಬಿ. ಕೃಷ್ಣ (1,624), ಕೆಬಿಎಸ್‌್ ಗಿರೀಶ್‌್ (1,072), ಮೂಡ್ಯ ಚಂದ್ರಶೇಖರ್‌್ (8,201), ಬಿ.ಎನ್‌. ತಿರುಮಲೇಗೌಡ (225), ಸಿ.ಎಂ. ದ್ಯಾವಪ್ಪ (524), ಬಿ.ಎಚ್‌್. ನಾಗಣ್ಣ (1,573), ಎ. ನಾಗರಾಜು (318), ನೆಲ್ಲಿಗೆರೆ ಬಾಲು (9,795), ಬೆಟ್ಟೇಗೌಡ (1173), ಎಚ್‌್.ಬಿ. ಬಂದಿಗೌಡ (1274), ಪಿ.ಎನ್‌್್. ಯತೀಶ್‌್ ಬಾಬು (1,773), ಜಿ.ಎಂ. ರವೀಂದ್ರ (1,113), ಬಿ. ರಾಮಕೃಷ್ಣ (8,451) ಡಾ.ಎಂ.ಎಸ್‌್್. ಲೋಕೇಶ್‌ಬಾಬು (9,302 ), ಟಿ. ವರಪ್ರಸಾದ್‌ (472 ), ಎಂ.ಶ್ರೀನಿವಾಸ್‌್ (11,976).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT