ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೂಪ ಪಡೆದ ನೈಟ್‌ರೈಡಸ್ ತಂಡ ವಾಟ್ಮೋರ್ ಸಂತಸ

Last Updated 13 ಜನವರಿ 2011, 14:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೊಸ ರೂಪ ಪಡೆದುಕೊಂಡಿರುವ ಕೋಲ್ಕತ್ತ ನೈಟ್‌ರೈಡರ್ಸ್ ತಂಡದ ಬಗ್ಗೆ ಕೋಚ್ ಡೇವ್ ವಾಟ್ಮೋರ್ ಸಂತಸ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಕೊಂಡುಕೊಂಡಿರುವ ದೇಶಿ ಹಾಗೂ ವಿದೇಶಿ ಆಟಗಾರರು ತಂಡದ ಹೊಂದಾಣಿಕೆಗೆ ಸೂಕ್ತವಾಗುವಂಥವರು ಎಂದು ಹೇಳಿರುವ ವಾಟ್ಮೋರ್ ಅವರು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಕೊಳ್ಳದಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಶಾರೂಖ್ ಖಾನ್ ಒಡೆತನದ ತಂಡವು ಆಟಗಾರರ ಹರಾಜಿನಲ್ಲಿ ‘ದಾದಾ’ ಕಡೆಗೆ ತಿರುಗಿಯೂ ನೋಡದಿರುವ ಕುರಿತು ಖಾಸಗಿ ಚಾನಲ್‌ವೊಂದರ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ‘ವೈಯಕ್ತಿಕವಾಗಿ ಹೇಳುವುದಕ್ಕೆ ಅಭಿಪ್ರಾಯಗಳಿವೆ. ಆದರೆ ಅವುಗಳನ್ನು ನಾನು ಮನದಲ್ಲಿಯೇ ಇಟ್ಟುಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ.

ಕಳೆದ ವರ್ಷ ನೈಟ್‌ರೈಡರ್ಸ್ ಪರವಾಗಿ ಅತಿಹೆಚ್ಚು ರನ್‌ಗಳನ್ನು ಗಳಿಸಿದ ಸೌರವ್ ಅವರ ಪ್ರಾಥಮಿಕ ಬೆಲೆಯು ಅಂದಾಜು ರೂ. 1.89 ಕೋಟಿ ಆಗಿತ್ತು. ಆ ಮೊತ್ತಕ್ಕೂ ಯಾವುದೇ ಫ್ರಾಂಚೈಸಿಗಳು ಕೊಳ್ಳಲಿಲ್ಲ ಎನ್ನುವುದು ಅಚ್ಚರಿ. ಪಶ್ಚಿಮ ಬಂಗಾಳದ ಕ್ರಿಕೆಟ್ ಪ್ರಿಯರ ಭಾರಿ ಒತ್ತಡವಿದ್ದರೂ, ಗಂಗೂಲಿಯನ್ನು ನೈಟ್‌ರೈಡರ್ಸ್‌ೂಳ್ಳಲಿಲ್ಲ ಎನ್ನುವುದಂತೂ ಬೆರಗುಗೊಳ್ಳುವಂತೆ ಮಾಡಿದ್ದು ಸಹಜ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT