ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೂಪ ಪಡೆಯುತ್ತಿದೆ ಕಡಲತೀರ

Last Updated 6 ಫೆಬ್ರುವರಿ 2012, 7:30 IST
ಅಕ್ಷರ ಗಾತ್ರ

ಕಾರವಾರ: ನಗರದ ಟ್ಯಾಗೋರ ಕಡಲ ತೀರ, ಅಲ್ಲಿರುವ ಪ್ರವಾಸಿ ಸ್ಥಳ, ಉದ್ಯಾನ ಮತ್ತು ತೀರವನ್ನು ಅಭಿ ವೃದ್ಧಿಪಡಿಸಲು ನಗರಸಭೆ ಕೊನೆಗೂ ಆಸಕ್ತಿ ತಳೆದಿದೆ.

ನಿರ್ವಹಣೆ ಇಲ್ಲದೆ ಸೊರಗಿ ಹೋಗಿದ್ದ ಸೌಲಭ್ಯಗಳು ಈಗ ಹೊಸ ರೂಪು ಪಡೆದುಕೊಳ್ಳಲಿವೆ. ಉದ್ಯಾನದಲ್ಲಿ ಗಿಡಗಳನ್ನು ಹಾಕಿ ಆಕರ್ಷಣೆಯನ್ನು ಹೆಚ್ಚಿಸುವುದು. ಅಗತ್ಯವಿರುವಲ್ಲಿ ಇಂಟರ್‌ಲಾಕ್ ಬಳಸುವುದು. ಕಾರಂಜಿಗಳ ದುರಸ್ತಿ ಅಲ್ಲದೇ ಜಿಲ್ಲೆಯ ಕಲೆ ಮತ್ತು ಐತಿಹಾಸಿಕ ಮಹತ್ವ ಗಳನ್ನು ತಿಳಿಸುವ ಮಾದರಿಗಳನ್ನು ನಿರ್ಮಿಸಲು ನಗರಸಭೆ ಮುಂದಾಗಿದೆ.

ರಾಷ್ಟ್ರೀಯ ಹೆದ್ದಾರಿ-17ಕ್ಕೆ ಅಂಟಿ ಕೊಂಡೇ ಟ್ಯಾಗೋರ ಕಡಲತೀರವಿರು ವುದರಿಂದ ವಾಹಗಳ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿರಲಿಲ್ಲ. ಹೆದ್ದಾರಿ ಇನ್ನೊಂದು ಬದಿಯಲ್ಲಿ ಎಲ್ಲಿಬೇಕೆಂದ ರಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆ ದಾಟಬೇಕಿತ್ತು. ಹೀಗೆ ರಸ್ತೆ ದಾಟುವ ಸಂದರ್ಭದಲ್ಲಿ ಸಣ್ಣಪುಟ್ಟ ಅಪಘಾತ ಸಂಭವಿಸಿದ ಪ್ರಕರಣಗಳು ಸಾಕಷ್ಟಿವೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಪಾರ್ಕಿಗ್ ವ್ಯವಸ್ಥೆ ನಿರ್ಮಿಸಲಾಗು ತ್ತಿದೆ.

ಯುದ್ಧೌನೌಕೆ ವಸ್ತು ಸಂಗ್ರಹಾಲ ಯದ ಪ್ರವೇಶಧ್ವಾರದಿಂದ ದುರಸ್ತಿ ಕಾರ್ಯಗಳನ್ನು ನಗರಸಭೆಗೆ ಕೈಗೆತ್ತಿ ಕೊಂಡಿದೆ. ವಸ್ತು ಸಂಗ್ರಹಾಲಯದ ಆವರಣಗೋಡೆಗೆ ಸುಣ್ಣಬಣ್ಣ ಮಾಡಿ ಹೊಸ ನಾಮಫಲಕಗಳನ್ನು ಅಳವಡಿ ಸುವುದು, ಗೇಟ್‌ಗಳ ದುರಸ್ತಿ, ಎಲ್ಲಿ ಬೇಕೆಂದರಲ್ಲಿ ಬೆಳೆದಿರುವ ಗಿಡ- ಕಂಟಿಗಳನ್ನು ತೆಗೆದು ಸ್ವಚ್ಛ ಮಾಡಿ ಸಂಗ್ರಹಾಲಯದ ಸುತ್ತಲೂ ಉತ್ತಮ ಪರಿಸರ ಸೃಷ್ಟಿ ಮಾಡುವ ಕಾರ್ಯ ಅಲ್ಲಿ ನಡೆಯುತ್ತಿದೆ. ವಸ್ತು ಸಂಗ್ರಹಾ ಲಯದ ಆವರಣದಲ್ಲಿರುವ ಬಾರ್ಡ್‌ರ್ ಪ್ಲಾಂಟ್ ಮತ್ತು ಲಾನ್‌ಗಳು ನೀರಿನಲ್ಲದೆ ಒಣಗಿಹೋಗಿದ್ದು ಅವು ಗಳಿಗೆ ನೀರುಣಿಸುವ ಕಾರ್ಯ ಪ್ರಗತಿ ಯಲ್ಲಿದೆ.

ವಸ್ತು ಸಂಗ್ರಹಾಲಯದ ಉದ್ಯಾನ ದಲ್ಲಿ ಸಣ್ಣ ವೇದಿಕೆಯೊಂದನ್ನು ನಿರ್ಮಿಸಿ ಅಲ್ಲಿ ಎಲ್‌ಸಿಡಿ         ಪ್ರಾಜೆಕ್ಟ್ ಗಳನ್ನಿಟ್ಟು ವಾಯು, ನೌಕಾ ಮತ್ತು ಭೂಸೇನೆಗಳ ಕಾರ್ಯಾಚರಣೆ ಮತ್ತು ಯುದ್ಧಗಳ ವಿವರಣೆಗಳನ್ನು ಪ್ರವಾಸಿಗರಿಗೆ ತೋರಿಸುವ ಮತ್ತು ನೌಕೆಯ ಹಿಂಭಾಗದಲ್ಲಿ ದೊಡ್ಡ ಗುಂಡಿಯಿರುವ ಸ್ಥಳ ಮರಳು ತುಂಬಿ ನೆಲಸಮತಟ್ಟು ಮಾಡುವ ಕಾರ್ಯ ನಗರಸಭೆ ಯೋಜನೆಯೊಳಗೆ ಸೇರಿದ ಯುದ್ಧನೌಕೆ ಆವರಣದಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸುವ ಹಾಗೂ ಚರಂಡಿ ಹೂಳು ತೆಗೆಯುವ ಕಾರ್ಯಕ್ಕೂ ನಗರಸಭೆ ಮುಂದಾಗಿದೆ.

ಕಡತೀರದಲ್ಲಿರುವ ಮಯೂರ ವರ್ಮ ವೇದಿಕೆ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಶೇ 80ರಷ್ಟು ಕಾಮ ಗಾರಿ ಮುಗಿದಿದೆ. ಗ್ರೀನ್ ರೂಮ್ ನಿರ್ಮಾಣ ಮತ್ತು ಜನರೇಟರ್ ಅಳವಡಿಸುವ ಕಾರ್ಯ ಬಾಕಿಯಿದೆ. ತೀರದಲ್ಲಿರುವ ದೀಪಗಳ ಬದಲಾಗಿ ಮತ್ತಷ್ಟು ದೀಪಗಳನ್ನು ಹಾಕಿ ಕಡಲ ತೀರ ಇನ್ನಷ್ಟು ಸುಂದರಾಗಿ ಕಾಣು ವಂತೆ ಮಾಡು ಇಚ್ಛೆ ನಗರಸಭೆ ಹೊಂದಿದೆ.

ಆರ್.ಟಿ.ಓ ಕಚೇರಿ ಎದುರಿಗಿರುವ ಸಂಗೀತ ಕಾರಂಜಿ ನವೀಕರಣ ಕಾರ್ಯವನ್ನು ಭಾರತೀಯ ಅಣು ವಿದ್ಯುತ್ ನಿಗಮ ಕೈಗೊಂಡಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಅದನ್ನೂ ನಗರಸಭೆ ವ್ಯಾಪ್ತಿಗೆ ಪಡೆ ಯುವ ಬಗ್ಗೆ ವಿಚಾರ ಮಾಡಲಾಗು ವುದು ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಗಣಪತಿ  ಉಳ್ವೇಕರ್.

`ಕಡಲತೀರದಲ್ಲಿರುವ ಸೌಲಭ್ಯ ಗಳಲ್ಲಿ ಯಾವುದೂ ಸರಿಯಾಗಿ ನಿರ್ವ ಹಣೆ ಆಗುತ್ತಿರಲಿಲ್ಲ. ಇಲ್ಲಿರುವ ಎಲ್ಲ ಸೌಲಭ್ಯಗಳನ್ನು ದುರಸ್ತಿ ಮಾಡಿ ಅದರೊಂದಿಗೆ ಅವುಗಳ ಗುಣಮಟ್ಟ ವನ್ನು ಹೆಚ್ಚಿಸಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ವಾಟರ್‌ಸ್ಫೋರ್ಟ್ಸ್ ಸೌಲಭ್ಯವನ್ನೂ ಇಲ್ಲಿ ಅಭಿವೃದ್ಧಿಪಡಿಸಲು ಯೋಚನೆ ಮಾಡಲಾಗುವುದು. ಕಾರವಾರಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುವುದೇ ನಮ್ಮ ಗುರಿ~ ಎನ್ನುತ್ತಾರೆ ಪೌರಾಯುಕ್ತ ಡಾ. ಉದಯಕುಮಾರ ಶೆಟ್ಟಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT