ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ ಹೊಸ ಗಿಡ; ವಿನೂತನ ಆಚರಣೆ

Last Updated 3 ಜನವರಿ 2014, 11:08 IST
ಅಕ್ಷರ ಗಾತ್ರ

ಗುಡಿಬಂಡೆ: ನೂತನ ವರ್ಷದಲ್ಲಿ ಎಲ್ಲರೂ ಒಂದೊಂದು ಗಿಡ ನೆಡುವ ಪ್ರತಿಜ್ಞೆ ಮಾಡಬೇಕು ಎಂದು ಗುಂಪು­ಮರದ ಆನಂದ್ ಮನವಿ ಮಾಡಿದರು.
ಪಟ್ಟಣದ ವಿನಾಯಕ ನಗರದಲ್ಲಿ ಮಂಗಳವಾರ ರಾತ್ರಿ ಆಯೋಜಿಸ­ಲಾ­ಗಿದ್ದ ಹೊಸ ವರ್ಷ ಆಚರಣೆ ಕಾರ್ಯ­ಕ್ರಮದಲ್ಲಿ ಮನೆ ಮನೆಗೂ ಗಿಡ ಕೊಡುವ ಮೂಲಕ ಹೊಸ ಸಂಪ್ರ­ದಾಯಕ್ಕೆ ನಾಂದಿ ಹಾಡಿದರು.

ಇದೇ ವೇಳೆ ವಿನಾಯಕ ನಗರದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಿತು. 27ಕ್ಕೂ ಹೆಚ್ಚು ಮಹಿಳೆ­ಯರು ಪಾಲ್ಗೊಂಡಿದ್ದರು. ಧನಲಕ್ಷ್ಮಿ (ಪ್ರಥಮ), ಭಾರತಿ (ದ್ವಿತೀಯ), ಸುನೀತಾ (ತೃತೀಯ) ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಗಿಡಗಳನ್ನು ವಿತರಿಸಲಾಯಿತು. ಪಟ್ಟಣ ಪಂಚಾಯತಿ ಸದಸ್ಯ ದ್ವಾರಕಿನಾಥ ನಾಯ್ದು ಮಾತನಾಡಿದರು.

ಪ.ಪಂ. ಮುಖ್ಯಾಧಿಕಾರಿ ಶ್ರೀರಾಮ­ರೆಡ್ಡಿ, ಸದಸ್ಯ ರಾಜಣ್ಣ, ಟಿಪ್ಪುಸುಲ್ತಾನ್ ಸಂಘಟನೆಯ ಶಾಬೂಲ್ ಹಸೇನ್, ವಿನಾಯಕ ನಗರದ ಯುವ ಮುಖಂಡರಾದ ಅನಂತು, ಇಂದ್ರ­ಕುಮಾರ್ ಸಿಂಗ್, ರಘುರಾಮ್, ಸಿದ್ದೇಶ್, ಹರಿಕೃಷ್ಣ, ರಾಮಾಂಜಿನಪ್ಪ, ಲೋಕೇಶ್, ಚಂದ್ರಕುಮಾರ್ ಸಿಂಗ್ ಮತ್ತು ಪರಿಸರ ಸಂರಕ್ಷಣಾ ವೇದಿಕೆಯ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT