ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಗ್ರಾ.ಪಂ. ಮೀಸಲಾತಿ ಪ್ರಕಟ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ 26 ಗ್ರಾ.ಪಂ.ಗಳಿಗೆ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಮಹಿಳೆಯರಿಗೆ ಶೇ 50ಕ್ಕೂ ಹೆಚ್ಚು ಸ್ಥಾನಗಳನ್ನು ಮೀಸಲಿಟ್ಟಿದ್ದು 26 ಪಂಚಾಯ್ತಿಗಳ ಪೈಕಿ 14 ಅಧ್ಯಕ್ಷ ಸ್ಥಾನ ಮಹಿಳೆಯರ ಪಾಲಾಗಿದೆ. 

ಗ್ರಾ.ಪಂ.ಗಳ ಅಧ್ಯಕ್ಷ ಸ್ಥಾನದ ವಿವರ: ಬೈಲನರಸಾಪುರ-ಹಿಂದುಳಿದ ವರ್ಗ ಬಿ ಮಹಿಳೆ, ದೇವನಗುಂದಿ- ಪ.ಜಾ.ಮಹಿಳೆ, ದೊಡ್ಡಗಟ್ಟಿಗನಬ್ಬೆ-ಸಾಮಾನ್ಯ ಮಹಿಳೆ, ದೊಡ್ಡಹುಲ್ಲೂರು-ಪ.ಜಾ.ಮಹಿಳೆ, ದೊಡ್ಡರಳಗೆರೆ-ಹಿಂದುಳಿದ ವರ್ಗ ಎ ಮಹಿಳೆ, ಗಣಗಲೂರು-ಸಾಮಾನ್ಯ ಮಹಿಳೆ, ಗಿಡ್ಡಪ್ಪನಹಳ್ಳಿ-ಪ.ಜಾ.ಮಹಿಳೆ, ಜಡಿಗೇನಹಳ್ಳಿ-ಸಾಮಾನ್ಯ ಮಹಿಳೆ, ಕಲ್ಕುಂಟೆ ಅಗ್ರಹಾರ-ಸಾಮಾನ್ಯ ಮಹಿಳೆ, ಕಂಬಳೀಪುರ- ಪ.ಪಂಗಡ ಮಹಿಳೆ, ಖಾಜಿಹೊಸಹಳ್ಳಿ-ಹಿಂದುಳಿದ ವರ್ಗ ಎ.ಮಹಿಳೆ, ಕುಂಬಳಹಳ್ಳಿ-ಸಾಮಾನ್ಯ ಮಹಿಳೆ, ಲಕ್ಕೋಂಡಹಳ್ಳಿ-ಪ.ಜಾತಿ ಮಹಿಳೆ, ನಂದಗುಡಿ-ಸಾಮಾನ್ಯ ಮಹಿಳೆ, ಓರೋಹಳ್ಳಿ- ಸಾಮಾನ್ಯ ಮಹಿಳೆ, ಅನುಗೊಂಡನಹಳ್ಳಿ-ಹಿಂದುಳಿದ ವರ್ಗ ಸಾಮಾನ್ಯ, ದೊಡ್ಡನಲ್ಲಾಳ-ಸಾಮಾನ್ಯ, ಇಟ್ಟಸಂದ್ರ-ಹಿಂದುಳಿದ ವರ್ಗ ಸಾಮಾನ್ಯ, ಮುಗಬಾಳ-ಸಾಮಾನ್ಯ, ಮುತ್ಸಂದ್ರ-ಸಾಮಾನ್ಯ, ನೆಲವಾಗಿಲು-ಪ.ಜಾತಿ ಸಾಮಾನ್ಯ, ಸಮೇತನಹಳ್ಳಿ-ಸಾಮಾನ್ಯ, ಶಿವನಾಪುರ-ಸಾಮಾನ್ಯ, ಸೂಲಿಬೆಲೆ-ಪ.ಜಾ.ಸಾಮಾನ್ಯ, ತಾವರೆಕೆರೆ-ಸಾಮಾನ್ಯ, ವಾಗಟ-ಪ.ಜಾ.ಸಾಮಾನ್ಯ.

ಕ್ವಾಲಿಸ್ ಕಳವು ಯತ್ನ- ಬಂಧನ
ಹೊಸಕೋಟೆ: ಕಳವು
ಮಾಡಿದ ಬಿಳಿ ಬಣ್ಣದ ಕ್ವಾಲಿಸ್ ವಾಹನವೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನನ್ನು ಹೊಸಕೋಟೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಹೆಗಡೆ ನಗರದ ನಿವಾಸಿ, ಆಟೋ ಚಾಲಕ ಹುಸೇನ್ (22) ಬಂಧಿತ ಆರೋಪಿ. ಇಲ್ಲಿಗೆ ಸಮೀಪದ ಮೈಲಾಪುರ ಗೇಟ್ ಬಳಿ ವಾಹನವನ್ನು ಮಾರಾಟ ಮಾಡಲು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT