ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಮುಖಗಳಿಗೊಂದು ವೇದಿಕೆ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಟ ಸುದೀಪ್ www.filmytales.com ವೆಬ್‌ಸೈಟ್ ಉದ್ಘಾಟಿಸಿದರು. `ಚಿತ್ರರಂಗ, ನಾಟಕರಂಗ, ಕಿರುತೆರೆ ಹಾಗೂ ಮಾಡೆಲಿಂಗ್ ಕ್ಷೇತ್ರಗಳಿಗೆ ಹೊಸ ಪ್ರತಿಭೆಗಳು, ಹೊಸ ಮುಖಗಳ ಅಗತ್ಯವಿದೆ. ವೆಬ್‌ಸೈಟ್ ಮೂಲಕ ಆ ಹೊಸ ಪ್ರತಿಭೆಗಳು ಹಾಗೂ ಚಿತ್ರೋದ್ಯಮದ ಬೇಡಿಕೆಗೆ ಸೇತುವೆಯಾಗಿ ಕಾರ್ಯನಿರ್ವಹಿಸುವೆವು~ ಎಂದು ಜಿ.ಅರವಿಂದ್ ವೆಬ್‌ಸೈಟ್ ಕುರಿತು ಹೇಳಿದರು.

ಮೊದಲ ತಿಂಗಳು ವೆಬ್‌ಸೈಟ್‌ಗೆ ಉಚಿತವಾಗಿ ನೋಂದಣಿ ಇರುತ್ತದೆ. ಎಲ್ಲಾ ಕಲಾ ಪ್ರಕಾರದ ಕಲಾವಿದರು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಯಿತು. ಕಿರುತೆರೆ ಕಲಾವಿದೆ ಹಂಸ, ರಾಮಕೃಷ್ಣ ಕರತೂರಿ, ಶ್ರಿನಿವಾಸ್ ಜೋಗಿ, ಸುನೀಲ್ ಪುರಾಣಿಕ್, ಶ್ರಿಕಾಂತ್ ಹೆಬ್ಳೀಕರ್, ಭವ್ಯಕಲಾ, ಸಂದೀಪ್‌ವಿಜಯ್ ಸಿಂಗ್, ನಿರ್ದೇಶಕರಾದ ಕಲಾಗಂಗೋತ್ರಿ ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.  
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT