ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂಸ್ಟೇಗಳಿಗೆ ಪೊಲೀಸ್ ಅನುಮತಿ ಕಡ್ಡಾಯ

Last Updated 8 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಆದರಾತಿಥ್ಯ ನೀಡಲು ರಚಿತಗೊಂಡಿರುವ ಹೋಂಸ್ಟೇಗಳು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲೇಬೇಕೆನ್ನುವ ಹೊಸ ಕಾನೂನು ರೂಪಿಸಲು ಸರ್ಕಾರ ಚಿಂತನೆ ನಡೆಸಿದ್ದು, ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿರುವ ಅನಧಿಕೃತ ಹೋಂಸ್ಟೇಗಳಿಗೆ ಬಿಸಿತಟ್ಟಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿಯೇ ಈ ನಿಯಮವು ಕಾನೂನಾಗಿ ಹೊರ ಬರಲಿದೆ. ತದನಂತರ ಅನಧಿಕೃತ ಹೋಂಸ್ಟೇಗಳಿಗೆ ಒಂದಿಷ್ಟು ಕಡಿವಾಣ ಬೀಳುವ ಸಾಧ್ಯತೆ ಇದೆ.

ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಪ್ರಚಾರ ಮಾಡುವ ಉದ್ದೇಶದಿಂದ ಪ್ರವಾ ಸೋದ್ಯಮ ಇಲಾಖೆಯು ಹೋಂಸ್ಟೇಗೆ  ಪ್ರೋತ್ಸಾಹ ನೀಡಿತು. ಇದರೊಂದಿಗೆ ಯಾವುದೇ ರೀತಿಯ ಸೇವಾ ಶುಲ್ಕ, ವಾಣಿಜ್ಯ ಕರ, ಇತ್ಯಾದಿಗಳಿಂದಲೂ ವಿನಾಯಿತಿ ನೀಡಲಾಯಿತು.
ಇದರ ಪ್ರಯೋಜನ ಪಡೆದ ಬಹಳಷ್ಟು ಜನ ಸ್ಥಳೀಯರು ಹೋಂಸ್ಟೇಗಳನ್ನು ನಿರ್ಮಿಸುವತ್ತ ಒಲವು ಬೆಳೆಸಿಕೊಂಡರು. ಆದರೆ, ಇತ್ತೀಚೆಗೆ ಮಂಗಳೂರಿನ ಹೋಂಸ್ಟೇ ಒಂದರ ಮೇಲೆ ನಡೆದ ದಾಳಿಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಹೋಂಸ್ಟೇಗಳ ಮೇಲೆ ಕೆಲವು ನಿಯಮ ಗಳನ್ನು ಕಠಿಣಗೊಳಿಸಲು ಮುಂದಾಗಿದೆ.

ಇದರ ಅಂಗವಾಗಿ ಹೋಂಸ್ಟೇಗಳನ್ನು ಮಾಡಲು ಬಯಸು ವವರು ಪೊಲೀಸ್ ಇಲಾಖೆ ಯಿಂದಲೂ ಅನುಮತಿ ಪಡೆಯ ಲೇಬೇಕೆನ್ನುವ ಕಾನೂನು ರೂಪಿಸಲು ಹೊರಟಿದೆ. 

ಸದ್ಯಕ್ಕೆ ಹೋಂಸ್ಟೇಗಳನ್ನು ಮಾಡಲು ಸ್ಥಳೀಯ ಸಂಸ್ಥೆಗಳಿಂದ ಹಾಗೂ ಪ್ರವಾಸೋದ್ಯಮ ಇಲಾಖೆ ಯಿಂದ ಮಾತ್ರ ಅನುಮತಿ ಪತ್ರ ಪಡೆಯಬೇಕಾಗಿದೆ. ಹೀಗೆ ನೋಂದಣಿ ಮಾಡಿಕೊಂಡ ಹೋಂಸ್ಟೇಗಳ ಸಂಖ್ಯೆ ಮಡಿಕೇರಿಯಲ್ಲಿ ಕೇವಲ 288ಮಾತ್ರ. ಒಂದು ಅಂದಾಜಿನ ಪ್ರಕಾರ ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳು ಅನಧಿಕೃತವಾಗಿ ನಡೆಯುತ್ತಿವೆ.

ಅನಧಿಕೃತವಾಗಿರುವ ಹೋಂಸ್ಟೇ ಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ಕ್ರಮಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ನಗರಸಭೆಯ ಅಧಿಕಾರಿಗಳು ಪ್ರಯತ್ನ ಮಾಡಿದರೂ ಹೋಂಸ್ಟೇ ಪಾಲಿಸಿಯಲ್ಲಿ ನೀಡಲಾದ ಸಡಿಲಿಕೆಯಿಂದಾಗಿ ಸಫಲ ವಾಗಲಿಲ್ಲ.

ಹಲವು ಹೋಂಸ್ಟೇಗಳಿಗೆ ನೇರವಾಗಿ ದೂರವಾಣಿ ಮಾಡಿ, ನೋಂದಾಯಿ ಸುವಂತೆ ಅಧಿಕಾರಿಗಳು ಗೋಗರೆ ದರೂ ಪ್ರಯೋಜನವಾಗಲಿಲ್ಲ. ಸ್ಥಳೀ ಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ ರೂ ಫಲಪ್ರದವಾಗಲಿಲ್ಲ. ಇಂತಹ ಎಲ್ಲ ಸಮಸ್ಯೆಗಳಿಗೂ ಈಗ ಉತ್ತರ ಕಂಡುಕೊಳ್ಳುವ ಸಮಯ ಬಂದಿದೆ.

ಪ್ರವಾಸೋದ್ಯಮ ಇಲಾಖೆಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಕೊಂಡ ಹೋಂಸ್ಟೇಗಳ ಬಗ್ಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಇದರಿಂದ ಹೋಂಸ್ಟೇ ಮಾಲೀಕರಿಗೂ ಸಹ ಲಾಭ ದಾಯಕ ವಾಗುತ್ತದೆ.

ಹೋಂಸ್ಟೇ ನೋಂದಣಿ ಬಗ್ಗೆ ವಿವರಣೆ ಬಯಸುವವರು ಮಡಿಕೇರಿಯ ಸ್ಟುವರ್ಟ್ ಹಿಲ್ ಬಳಿ ಇರುವ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು (ದೂ. ಸಂಖ್ಯೆ- 08272 228580) ಸಂಪರ್ಕಿಸ ಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT