ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರ ಕೈ ಶುದ್ಧವಿರಲಿ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಸ್ವಿಸ್ ಬ್ಯಾಂಕಿನಲ್ಲಿ ಅಪಾರ ಪ್ರಮಾಣದಲ್ಲಿ ಭಾರತೀಯರ ಕಪ್ಪುಹಣ ಇದೆ ಎಂದು ಹೋರಾಟ ನಡೆಸುತ್ತಾ ಅದನ್ನು ಭಾರತಕ್ಕೆ ವಾಪಸ್ ತರಬೇಕೆನ್ನುವ ಉದ್ದೇಶ ಹೊಂದಿರುವ ಎಲ್ಲ ಹೋರಾಟಗಾರರ ಪ್ರಾಮಾಣಿಕ ಪ್ರಯತ್ನಕ್ಕೆ ಅಭಿನಂದನೆಗಳು.

ದೇಶದಲ್ಲಿ ಭ್ರಷ್ಟಾಚಾರ ನಿಜಕ್ಕೂ ತೊಲಗಲೇ ಬೇಕು. ಇದರಿಂದಾಗಿ ದೇಶದ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಸಾಗಿರುವುದಿಲ್ಲ ಮತ್ತು ಸರ್ಕಾರದ ಪ್ರಾಯೋಜಕತ್ವದ ಯೋಜನೆಗಳು ಮತ್ತು ಅನುದಾನಗಳು ತಲುಪಬೇಕಾದವರಿಗೆ ಪೂರ್ಣವಾಗಿ ತಲುಪಿರುವುದಿಲ್ಲ.

ಈಗ ಬಾಬಾ ರಾಮ್‌ದೇವ್‌ರವರು ಮತ್ತು ಅನೇಕ ಪ್ರತಿಷ್ಠಿತ ಮಠಾಧಿಪತಿಗಳು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ನಡೆಸಿ ದೇಶವನ್ನು ರಕ್ಷಿಸುವ ಮಾತನ್ನಾಡುತ್ತಿದ್ದಾರೆ. ಇವರುಗಳೂ ಸಹ ಒಂದು ಪಕ್ಷದ ಮತ್ತು ಕೇಂದ್ರ ಸರ್ಕಾರದ ವಿರುದ್ಧವೇ ತಮ್ಮ ಗುರಿಯನ್ನಾಗಿಸಿಕೊಂಡಂತಿದೆ.

ಇವರುಗಳು ನಿಜಕ್ಕೂ ನಿಷ್ಪಕ್ಷಪಾತವಾದ ನಿಲುವು ಉಳ್ಳವರಾದರೆ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅನೇಕ ರಾಜ್ಯಗಳ ಅನ್ಯ ಪಕ್ಷದ ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಿ ಎನ್ನುವ ಅಂಶವನ್ನು ತಮ್ಮ ಹೋರಾಟದಲ್ಲಿ ಸೇರಿಸಿಕೊಳ್ಳಲಿ.

ಇದೇ ರೀತಿಯಲ್ಲಿ ಬಾಬಾ ರಾಮ್‌ದೇವ್‌ರವರ ಆದಿಯಾಗಿ ರವಿಶಂಕರ್ ಗುರೂಜಿ , ಪೇಜಾವರ ಸ್ವಾಮೀಜಿಯವರಿರಬಹುದು ಮತ್ತು ಇತರೆ ಸಂಘಟನೆಗಳ ವ್ಯಕ್ತಿಗಳು ಎಲ್ಲರೂ ಸಹ ತಮ್ಮ ಸಂಸ್ಥೆಗಳ ಮತ್ತು ತಮ್ಮ ವೈಯಕ್ತಿಕ ಸ್ಥಿರಾಸ್ತಿ, ಬ್ಯಾಂಕಿನ ಖಾತೆಗಳಲ್ಲಿರುವ ಹಣದ ಮೊತ್ತ, ಆದಾಯದ ಮೂಲ, ಇವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ವೆಬ್‌ಸೈಟ್‌ಗಳ ಮೂಲಕ ದೇಶದ ಜನತೆಯ ಗಮನಕ್ಕೆ ತಂದರೆ ಹೋರಾಟಗಾರರ ಬಗ್ಗೆ ಮತ್ತಷ್ಟು ಗೌರವ ಹೆಚ್ಚುತ್ತದೆ.

ದೇಶವನ್ನು ಕಾಡುತ್ತಿರುವುದು ಭ್ರಷ್ಟಾಚಾರ ಪ್ರಮುಖ ಸಮಸ್ಯೆಯಾದರೂ ಇದನ್ನು ಹೊರತುಪಡಿಸಿ, ನಿರುದ್ಯೋಗ, ರೈತರ ಸಮಸ್ಯೆ, ಮೂಲಭೂತ ಸೌಕರ್ಯ ಸೌಲಭ್ಯಗಳ ಸಮಸ್ಯೆ, ಜಾತಿಯ ವ್ಯವಸ್ಥೆ, ಕೋಮು ವಿಷಮತೆ ಎಲ್ಲವೂ ಜನರ ಬದುಕನ್ನು ನುಂಗಿ ನೀರು ಕುಡಿಯುತ್ತಿವೆ.

ಭ್ರಷ್ಟಾಚಾರದ ವಿರುದ್ಧ ಹೋರಾಟವೆಂದರೆ, ಒಂದು ಧರ್ಮದ ಅಥವಾ ಒಂದು ಪಕ್ಷದ ಅಥವಾ ಒಂದು ಸರ್ಕಾರದ ವಿರುದ್ಧವಲ್ಲ. ಜೆ.ಪಿ.ರವರು ಹೇಳಿದ ರೀತಿಯಲ್ಲಿ ಸರ್ಕಾರಗಳು ಬದಲಾದರೆ ಸಾಲದು, ಆಳುವ ಜನರ ಮನಸ್ಸುಗಳು ಬದಲಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT