ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಸ್ನಿ ಬದುಕು- ತಿರುವು

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಹೋಸ್ನಿ ಮುಬಾರಕ್ ಯಾರು?
ಮುಹಮ್ಮದ್ ಹೋಸ್ನಿ ಸಯ್ಯಿದ್ ಮುಬಾರಕ್ ಈಜಿಪ್ಟ್‌ನ ಮಾಜಿ ಅಧ್ಯಕ್ಷ. 1928, ಮೇ 4ರಲ್ಲಿ ಅವರು ಮೊನುಫಿಯಾ ಪ್ರಾಂತ್ಯದ ಕಾಫಿರ್-ಎಲ್-ಮೆಸೆಲ್ಹಾ ಎಂಬ ಹಳ್ಳಿಯಲ್ಲಿ ಹುಟ್ಟಿದ್ದು. ಶಾಲಾ ಕಲಿಕೆಯ ನಂತರ ಪೈಲಟ್ ತರಬೇತಿ ಪಡೆದರು.
 
25 ವರ್ಷ ವಾಯುಪಡೆಯಲ್ಲಿ ಕೆಲಸ ಮಾಡಿದರು. 1973ರಲ್ಲಿ ಏರ್ ಚೀಫ್ ಮಾರ್ಷಲ್‌ಆಗಿ ಬಡ್ತಿ ಸಿಕ್ಕಿತು. 1975ರಲ್ಲಿ ಈಜಿಪ್ಟ್ ರಿಪಬ್ಲಿಕ್‌ನ ಅಧ್ಯಕ್ಷ ಎಲ್ ಸಾದತ್, ಹೋಸ್ನಿಯನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಅವರು ಈಜಿಪ್ಟ್‌ನ ಅಧ್ಯಕ್ಷರಾದದ್ದು ಯಾವಾಗ?
ಅಕ್ಟೋಬರ್ 14, 1981ರಲ್ಲಿ ಸಾದತ್ ಹತ್ಯೆಯಾಯಿತು. ಆಗ ಮುಬಾರಕ್‌ಗೆ ಅಧ್ಯಕ್ಷ ಗಾದಿ ಸಿಕ್ಕಿದ್ದು. ಅಲ್ಲಿಂದ 2011ರವರೆಗೆ 29 ವರ್ಷ ಮುಬಾಕರ್ ಕುರ್ಚಿ ಬಿಡಲೇ ಇಲ್ಲ. ಈಜಿಪ್ಟ್‌ನ ಇತಿಹಾಸದಲ್ಲೇ ಅಷ್ಟು ಸುದೀರ್ಘ ಅವಧಿಯವರೆಗೆ ಯಾರೂ ಅಧ್ಯಕ್ಷರಾಗಿರಲಿಲ್ಲ.

1981ರಲ್ಲಿ ಮುಬಾಕರ್ ಎಮರ್ಜೆನ್ಸಿ ಘೋಷಿಸಿ ಸರ್ಕಾರಕ್ಕೆ ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ಕೊಟ್ಟರು. ನಾಗರಿಕರ ಮೂಲ ಸ್ವಾತಂತ್ರ್ಯವನ್ನೇ ಹರಣ ಮಾಡಿದ ಘಟನೆಯಿದು. ಇತ್ತೀಚಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ಬೇಕೆಂದು ಈಜಿಪ್ಟ್‌ನಲ್ಲಿ ಚಳವಳಿಗಳು ತೀವ್ರಗೊಂಡಿದ್ದವು.

ಜನವರಿ 2011ರಲ್ಲಿ ಆದದ್ದೇನು?
ಜನವರಿ 25ರಂದು ದೇಶದ ವಿವಿಧೆಡೆ ಮುಬಾರಕ್ ಆಡಳಿತ ಕೊನೆಗಾಣಿಸುವಂತೆ ಒತ್ತಾಯಿಸಿ ಹಿಂಸಾತ್ಮಕ ಪ್ರತಿಭಟನೆಗಳು ಶುರುವಾದವು. 18 ದಿನ ನಡೆದ ಪ್ರತಿಭಟನೆಗಳಿಂದಾಗಿ ಮುಬಾರಕ್ ಫೆಬ್ರುವರಿ 11ರಂದು ರಾಜೀನಾಮೆ ನೀಡಿದರು.

ಅವರು ಭಾರತಕ್ಕೆ ಬಂದಿದ್ದರೇ?
ಎರಡು ಸಲ ಬಂದಿದ್ದರು. 1983ರಲ್ಲಿ ಅಲಿಪ್ತ ಚಳವಳಿಯ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದರು. ನವೆಂಬರ್ 2008ರಲ್ಲಿ ಆರ್ಥಿಕ ಸಂಬಂಧ ಸುಧಾರಿಸುವ ಸಲುವಾಗಿ ಭಾರತದ ಜೊತೆ ಮಾತುಕತೆ ನಡೆಸಲು ಬಂದಿದ್ದರು. ಅಂತರ್‌ರಾಷ್ಟ್ರೀಯ ಜ್ಞಾನಕ್ಕಾಗಿ ನೀಡುವ ಜವಾಹರಲಾಲ್ ನೆಹರು ಪ್ರಶಸ್ತಿಗೂ ಮುಬಾಕರ್ 1995ರಲ್ಲಿ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT