ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೌರಾ- ಮೈಸೂರು ವಿಶೇಷ ರೈಲು ಸಂಚಾರ ಮುಂದುವರಿಕೆ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಹೌರಾ- ಮೈಸೂರು- ಹೌರಾ (ನಂ. 08003/08004) ಸೂಪರ್‌ಫಾಸ್ಟ್ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮುಂದುವರಿಸಲಾಗಿದೆ.

ಇದೇ 16ರಿಂದ ನ. 18ರವರೆಗೆ ಪ್ರತಿ ಶುಕ್ರವಾರ ಸಂಜೆ 4.10ಕ್ಕೆ ಹೌರಾದಿಂದ ಹೊರಡುವ ಈ ರೈಲು, ಭಾನುವಾರ ಬೆಳಿಗ್ಗೆ 5ಕ್ಕೆ ಮೈಸೂರು ತಲುಪಲಿದೆ. ಖರಗ್‌ಪುರ, ಭದ್ರಕ್, ಕಟಕ್, ಭುವನೇಶ್ವರ, ಬ್ರಹ್ಮಪುರ, ವಿಜಯನಗರ, ವಿಶಾಖಪಟ್ಟಣ, ರಾಜಮುಂಡ್ರಿ, ವಿಜಯವಾಡ, ಬಂಗಾರಪೇಟೆ, ಕೃಷ್ಣರಾಜಪುರ, ಬೆಂಗಳೂರು ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಇದೇ 19ರಿಂದ ನ. 21ರವರೆಗೆ ಮೈಸೂರಿನಿಂದ ಪ್ರತಿ ಭಾನುವಾರ ಮಧ್ಯರಾತ್ರಿ 12.30ಕ್ಕೆ ಹೊರಡುವ ರೈಲು ಮಂಗಳವಾರ ಮಧ್ಯಾಹ್ನ 2.50ಕ್ಕೆ ಹೌರಾ ನಿಲ್ದಾಣ ತಲುಪಲಿದೆ. ಒಟ್ಟಾರೆ ಹತ್ತು ಸಲ ಈ ರೈಲು ಸಂಚರಿಸಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT