ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಂಡ್‌ಬಾಲ್: ಚಿತ್ರದುರ್ಗಕ್ಕೆ ಪ್ರಶಸ್ತಿ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಿತ್ರದುರ್ಗ ತಂಡವು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಬುಧವಾರ ಕೊನೆಗೊಂಡ ಬೆಂಗಳೂರು ವಿಭಾಗ ಮಟ್ಟದ ಪ್ರೌಢಶಾಲೆಗಳ 17 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ ಹ್ಯಾಂಡ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

ಚಿತ್ರದುರ್ಗ ತಂಡ 27-15 ಗೋಲುಗಳಿಂದ ಬೆಂಗಳೂರು ಉತ್ತರ ತಂಡದ ವಿರುದ್ಧ ಗೆದ್ದು ಈ ಸಾಧನೆ ಮಾಡಿದೆ. ವಿಜಯಿ ತಂಡದ ಮಹಮ್ಮದ್ ಶಹೀದ್ 13, ದೀಪಕ್ 4, ಮದಿನಿ 4, ಮುತ್ತಾ 3 ಹಾಗೂ ಭರತ್ 3 ಗೋಲು ಗಳಿಸಿದರು.

17 ವರ್ಷ ವಯಸ್ಸಿನೊಳಗಿನವರ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡವು ದಾವಣಗೆರೆ ತಂಡದ ವಿರುದ್ಧ 4-3 ಗೋಲುಗಳಿಂದ ಜಯ ಗಳಿಸಿದೆ.

ಹಿರಿಯ ಪ್ರಾಥಮಿಕ ಶಾಲಾ ಮಟ್ಟದ 14 ವರ್ಷದ ವಯಸ್ಸಿನೊಳಗಿನವರ ಬಾಲಕರ ವಿಭಾಗದಲ್ಲಿ          ಚಿತ್ರದುರ್ಗ ತಂಡವು ದಾವಣಗೆರೆ ವಿರುದ್ಧ 10-3 ಗೋಲುಗಳಿಂದ ಗೆಲುವು ಸಾಧಿಸಿದೆ.

14 ವರ್ಷ ವಯಸ್ಸಿನೊಳಗಿನವರ ಬಾಲಕಿಯರ ವಿಭಾಗದಲ್ಲಿ ದಾವಣಗೆರೆ ತಂಡವು ಮಧುಗಿರಿ ವಿರುದ್ಧ 3-2 ಗೋಲುಗಳಿಂದ ಜಯ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT