ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಂಡ್‌ಸೆಟ್ ಮಾರಾಟ, ರಫ್ತು ಹೆಚ್ಚಳ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಪ್ರಪಂಚದಲ್ಲಿಯೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೂರವಾಣಿ  ಮಾರುಕಟ್ಟೆ ಭಾರತ. ಪ್ರಸಕ್ತ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ  ದೇಶದಲ್ಲಿ ಒಟ್ಟು 5.02 ಕೋಟಿ ಮೊಬೈಲ್  ಹ್ಯಾಂಡ್‌ಸೆಟ್ ಮಾರಾಟವಾಗಿವೆ ಎಂದು ಸೈಬರ್ ಮೀಡಿಯ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

2011ರ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಹ್ಯಾಂಡ್‌ಸೆಟ್ ಮಾರಾಟ ಶೇ 9.1ರಷ್ಟು ಪ್ರಗತಿ ಕಂಡಿದೆ.  ಈ ಬಾರಿಯೂ ಶೇ 23ರಷ್ಟು ಮಾರುಕಟ್ಟೆ ಪಾಲಿನೊಂದಿಗೆ `ನೋಕಿಯಾ~ ಮುಂಚೂಣಿಯಲ್ಲಿದೆ. ಶೇ 14 ಮತ್ತು ಶೇ 5.8ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸ್ಯಾಮ್ಸಂಗ್ ಮತ್ತು ಮೈಕ್ರೊಮ್ಯಾಕ್ಸ್ ನಂತರದ ಸ್ಥಾನಗಳಲ್ಲಿವೆ.

ಜನವರಿ-ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ಗಳೇ 27 ಲಕ್ಷದಷ್ಟು ಮಾರಾಟವಾಗಿವೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ 40.04ರಷ್ಟು ಸಿಂಹಪಾಲನ್ನು ಸ್ಯಾಮ್ಸಂಗ್ ಪಡೆದುಕೊಂಡಿದೆ. ಶೇ 25.5ರಷ್ಟು ಪಾಲು ಹೊಂದಿರುವ ನೋಕಿಯಾ ಮತ್ತು ಶೇ 12.3ರಷ್ಟು ಪಾಲಿನೊಂದಿಗೆ `ರಿಸರ್ಚ್ ಇನ್ ಮೂಷನ್~(ಆರ್‌ಐಎಂ) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 

2012ರ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ರೂ 7,500ರಿಂದ ರೂ 27000 ನಡುವಿನ ದರ ಶ್ರೇಣಿಯ 7 ಹೊಸ ಹ್ಯಾಂಡ್‌ಸೆಟ್‌ಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್‌ಫೋನ್‌ಗಳ ಮಾರಾಟ ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದೆ. ಜತೆಗೆ `ಡ್ಯುಯಲ್ ಸಿಮ್~ ಮೊಬೈಲ್‌ಗಳ ಬೇಡಿಕೆಯೂ ಹೆಚ್ಚಳವಾಗಿದೆ. `ಡ್ಯುಯಲ್ ಸಿಮ್~ ಹ್ಯಾಂಡ್‌ಸೆಟ್‌ಗಳು ಶೇ 67.7ರಷ್ಟು  ರಫ್ತಾಗಿರುವುದು ವಿಶೇಷ.

2012ರ ಮೊದಲ ತ್ರೈಮಾಸಿಕದಲ್ಲಿ ಮೂರನೆಯ ತಲೆಮಾರಿನ ತರಂಗಾಂತರ ಸೌಲಭ್ಯ (3ಜಿ) ಹೊಂದಿರುವ 47 ಲಕ್ಷ ಹ್ಯಾಂಡ್‌ಸೆಟ್ ರಫ್ತು ಮಾಡಲಾಗಿದೆ ಎಂದು ಈ ಅಧ್ಯಯನ ಹೇಳಿದೆ.

ಪ್ರಪಂಚದಲ್ಲಿಯೇ ಅತಿ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿರುವ ಎರಡನೇ ದೇಶ ಭಾರತ. ಸದ್ಯ ದೇಶದಲ್ಲಿ 91.90 ಕೋಟಿ ಮೊಬೈಲ್‌ಫೋನ್ ಚಂದಾದಾರರಿದ್ದಾರೆ. 75ಕ್ಕೂ ಹೆಚ್ಚು ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಗಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT