ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲತೆ ಮರೆತು ಬದುಕು ಕಟ್ಟಿಕೊಳ್ಳಿ’

Last Updated 21 ಡಿಸೆಂಬರ್ 2013, 9:18 IST
ಅಕ್ಷರ ಗಾತ್ರ

ಹಾವೇರಿ: ‘ಅಂಗವಿಕಲರು ಅಂಗವೈಕಲ್ಯ­ತೆಯನ್ನು ಮರೆತು ಎಲ್ಲರಂತೆ ನಾವು ಎಂಬ ಭಾವನೆ ಬೆಳೆಸಿ­ಕೊಂಡಾಗ ಮಾತ್ರ ಸುಂದರ ಬದುಕು ಕಟ್ಟಿ­ಕೊಳ್ಳಲು ಸಾಧ್ಯ’ ಎಂದು ಹೊಸ­ಮಠದ ಬಸವ­ಶಾಂತಲಿಂಗ ಶ್ರೀಗಳು ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾ ಅಂಗವಿಕಲರ ಸಂಘ, ಜಿಲ್ಲಾ ಅಂಗ­ವಿಕಲರ ನೌಕರರ ಸಂಘ ಮತ್ತು ಎಸ್‌ಜೆಎಂ ದೈಹಿಕ ಅಂಗವಿಕಲರ ವಸತಿ ಪ್ರೌಢ­ಶಾಲೆ ಆಶ್ರಯದಲ್ಲಿ ಶುಕ್ರವಾರ ನಗರದ ಹೊಸ­ಮಠದಲ್ಲಿ ನಡೆದ ವಿಕಲ­ಚೇತನರ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯ­ಕ್ರಮದ ಸಮಾರೋಪ ಸಮಾ­ರಂಭದಲ್ಲಿ ವಿಕಲಚೇತರಿಗೆ ಸಾಂಕೇತಿಕ­ವಾಗಿ ಟ್ರೈಸಿಕಲ್‌ ವಿತರಿಸಿ ಅವರು ಮಾತ­ನಾಡಿದರು.

ಮನುಷ್ಯನಿಗೆ ನಂಬಿಕೆ, ವಿಶ್ವಾಸ, ಆತ್ಮಸ್ಥೈರ್ಯ ಅಗತ್ಯ ಎಂಬುವುದನ್ನು ಅಂಗವಿಕಲರು ಅರಿತು­ಕೊಳ್ಳಬೇಕು. ಕೆಲವು ಅಂಗವಿಕಲರು ಎಲ್ಲ ಸರಿ­ಯಾಗಿದ್ದ ವ್ಯಕ್ತಿಗಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅಂತವರ ಸಾಧನೆಯೇ ಉಳಿ­ದವರಿಗೆ ಸ್ಫೂರ್ತಿ­ಯಾಗಬೇಕು ಎಂದರು.
ಧಾರವಾಡ ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಪ್ರವೀಣ ಕಡಿಬಾಗಿಲ ಮಾತನಾಡಿ, ನಮ್ಮ ಸಂಸ್ಥೆ­ಯಿಂದ ಅಂಗ­ವಿಕ­ಲರಿಗೆ ಮೂರು ತಿಂಗ­ಳಿ­ಗೊಮ್ಮೆ ಉಚಿತ ಕಂಪ್ಯೂಟರ್‌ ತರ­ಬೇತಿ, ವಿವಿಧ ವೃತ್ತಿ ಕೌಶಲ್ಯ ತರ­ಬೇತಿ ನೀಡುವುದರ ಜತೆಗೆ ಉದ್ಯೋಗ ಅವ­ಕಾಶ ಒದಗಿಸ­ಲಾಗು­ತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀ­ಕರಣ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಟ್ರೈಸಿಕಲ್‌ ಹಾಗೂ ಕ್ರೀಡಾಕೂಟದಲ್ಲಿ ವಿಜೇತ ಅಂಗವಿಕಲ ಕ್ರೀಡಾಪಟುಗಳಿಗೆ ಬಹು­ಮಾನ ವಿತರಿಸಲಾಯಿತು.

ಅಂಗವಿಕಲರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟಪ್ಪ ಜಲದಿ ಅಧ್ಯಕ್ಷತೆ ವಹಿಸಿದ್ದರು. ಅಲ್ಲಾ­­ಭಕ್ಷ, ಮೌನೇಶ ಬಡಿಗೇರ, ಬಾಲ­ಕೃಷ್ಣ ಆರೇರ, ಬಸವರಾಜ, ಪಾಂಡು­ರಂಗ, ಶಾಂತಪ್ಪ ಯಮ­ನೂರ, ಎಸ್‌.­ಎಸ್‌.ಹೊನ್ನೆಗೌಡ್ರ, ಎಚ್‌.­ಕೆ.­ರಾಜೂರ ವಿವಿಧ ಸಂಘಗಳ ಪದಾಧಿಕಾರಿಗಳಾದ ಶಿವಕುಮಾರ, ವೆಂಕಟೇಶ, ಬಸವರಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT