ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲರಿಗೆ ಅನುಕಂಪದ ಬದಲು ಅವಕಾಶ ನೀಡಿ’

Last Updated 12 ಡಿಸೆಂಬರ್ 2013, 8:33 IST
ಅಕ್ಷರ ಗಾತ್ರ

ಹನುಮಸಾಗರ: ಅಂಗವಿಕಲ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಿದರೆ ಇತರ ಮಕ್ಕಳಂತೆ ಅವರೂ ಸಮಾಜದ ಮುಖ್ಯವಾಹಿನಿಗೆ ಬರ­ಬಲ್ಲರು ಎಂದು ಪೊಲೀಸ್‌ಪಾಟೀಲ ಫೌಂಡೇಶನ್ ಅಧ್ಯಕ್ಷ ಮಾದೇಗೌಡ ಪೊಲೀಸ್‌ಪಾಟೀಲ ಹೇಳಿದರು.

ಸಮೀಪದ ಮೂಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಪೊಲೀಸ್‌ಪಾಟೀಲ ಫೌಂಡೇ­ಶನ್‌ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಅಂಗವಿಕಲ ಮಕ್ಕಳ ದಿನಾಚರ­ಣೆಯಲ್ಲಿ ಅಂಗವಿಕಲ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಕ್ರೀಡೆ, ವಿಜ್ಞಾನ ಹಾಗೂ ಸಂಗೀತ ಕ್ಷೇತ್ರಗಳು ಸೇರಿದಂತೆ ವಿವಿಧ ರಂಗ­ಗಳಲ್ಲಿ ಅನೇಕ ಪ್ರತಿಭಾವಂತ ಅಂಗವಿ­ಕ­ಲರು ತಮ್ಮ ಅಂಗವಿಕಲತೆ ಮೆಟ್ಟಿನಿಂತು ಸಾಧನೆ ಮಾಡಿದ್ದು ಇತರರಿಗೆ ಸ್ಫೂರ್ತಿ­ಯಾಗಿದೆ. ಆದರೆ ಆ ಎಲ್ಲ ಸ್ಫೂರ್ತಿಗೆ ಸಮಾಜದ ಪ್ರೋತ್ಸಾಹ ಅಗತ್ಯವಾಗಿರು­ತ್ತದೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಕೆ.ಎಸ್‌.ಅಥಣಿ ಮಾತನಾಡಿದರು.
ಅರ್ಹ ಅಂಗವಿಕಲ ಮಕ್ಕಳಿಗೆ ಶೈಕ್ಷ­ಣಿಕ ಸಾಮಗ್ರಿಗಳನ್ನು ವಿತರಿಸಲಾ­ಯಿತು. ಸಾಧನೆ ಮಾಡಿದ ಅಂಗವಿಕಲ ಯುವಕರಾದ ಹುಚ್ಚೀರಪ್ಪ. ಕಳಕಪ್ಪ ಕಮತರ ಇವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ವಿವಿಧ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಜೂಲಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲತೀಫಸಾಬ ಕಾರ್ಯಕ್ರಮ­ವನ್ನು ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ಜಾಥಾಕ್ಕೆ ಚಾಲನೆ ನೀಡಿದರು.

ಅಪ್ಪಣಗೌಡ ಬೋದೂರ, ಬಾಲಪ್ಪ. ಕಮತರ, ಕಳಕಪ್ಪ ಪುರದ, ಕಳಕಪ್ಪ ಕಮತರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸಯ್ಯ ಭಿಕ್ಷಾವ­ತಿಮಠ, ಶರೀಫಸಾಬ. ಜಿಗಳೂರ, ಜಗದೀಶ ಕಿರೇಸೂರ, ಕಳಕಪ್ಪ ಸೊಬ­ರದ, ಮಹೇಶ. ಬಿ.ಸಿ, ಜ್ಞಾನೇಶ ಅಂಬೋರೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT