ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರಂಗ ಶುದ್ಧಿಗೆ ದಾಸರ ಕೊಡುಗೆ ಅಪಾರ’

Last Updated 14 ಏಪ್ರಿಲ್ 2014, 7:05 IST
ಅಕ್ಷರ ಗಾತ್ರ

ಗುಲ್ಬರ್ಗ: ‘ಭಕ್ತಿ ಪ್ರಧಾನವಾದ ದಾಸ ಸಾಹಿತ್ಯವು ಅಂತರಂಗದ ಶುಚಿತ್ವದ ಜೊತೆಗೆ ಆತ್ಮ ಸಾಕ್ಷ್ಯಾತ್ಕಾರಗೊಳಿಸುವ ಮಹತ್ತರ ಆಶಯಗಳನ್ನೊಳಗೊಂಡಿದೆ’ ಎಂದು ಮುಧೋಳ ಸರ್ಕಾರಿ ಕನ್ಯಾ ಪ್ರೌಢಶಾಲೆಯ ಶಿಕ್ಷಕಿ ಪರವೀನ್‌ ಸುಲ್ತಾನಾ ಹೇಳಿದರು.

ಇಲ್ಲಿನ ಹುಮನಾಬಾದ್‌ ರಿಂಗ್‌ ರಸ್ತೆಯ ರಾಮನಗರದ ರಾಜಶೇಖರ ಮಾಂಗ್‌ ಅವರ ನಿವಾಸದಲ್ಲಿ ಉತ್ತರ ವಲಯ ಕನ್ನಡ ಸಾಹಿತ್ಯ ಪರಿಷತ್ತು ಶುಕ್ರ ವಾರ ಹಮ್ಮಿಕೊಂಡಿದ್ದ ಮನೆ ಯಂಗಳ ದಲ್ಲಿ ಮಾತುಕತೆ ಐದನೇ ಮಾಲಿಕೆ ಯಲ್ಲಿ ಪ್ರೊ.ವಸಂತ ಕುಷ್ಟಗಿ ಅವರ ‘ದಾಸ ಸಾಹಿತ್ಯದ ತವನಿಧಿ ಯಲ್ಲಿ’ ಕೃತಿ ಪರಿಚಯ ಮಾಡುತ್ತಾ ಹೇಳಿದರು.

ಅವರಾದ (ಬಿ) ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಡಾ.ಬಿ.ಆರ್‌.ತಳವಾರ ಉದ್ಘಾಟಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯ ದರ್ಶಿ ಬಿ.ಎಚ್‌.ನಿರಗುಡಿ, ಸೇಡಂ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಡಾ.ಕಲಾವತಿ ರಾಜಶೇಖರ ಡೊಂಗರಗಾಂವ, ಅಂಬಿಗರ ಚೌಡಯ್ಯ ಪೀಠದ ಅಧ್ಯಕ್ಷ ಬಸವರಾಜ ಹರವಾಳ, ಅನಿತಾ ಗುಡೂರ ಇದ್ದರು. ಕಸಾಪ ಉತ್ತರ ವಲಯ ಅಧ್ಯಕ್ಷ ನಾಮದೇವ ಕಡಕೋಳ ಅಧ್ಯಕ್ಷತೆ ವಹಿಸಿದ್ದರು.

ಗುಲ್ಬರ್ಗ ವಿವಿ ವಿದ್ಯಾರ್ಥಿ ಕಲ್ಯಾಣಾ ಧಿಕಾರಿ ಡಾ.ಕೆ. ಲಿಂಗಪ್ಪ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಸೂರ್ಯಕಾಂತ ಸುಜ್ಯಾತ್‌, ಪ್ರೊ. ಚಂದ್ರಶೇಖರ ದೊಡ್ಡಮನಿ, ಪ್ರೊ.ಕೆ. ಎಸ್‌.ಬಂಧು, ಪ್ರೊ.ಸುಭಾಷ ಶೀಲ ವಂತ, ಶರಣಪ್ಪಾ ದೇಸಾಯಿ, ಸುನೀಲ ಮಾನ್ಪಡೆ, ಸುರೇಖಾ ಬಗಲಿ, ವೈಶಾಲಿ, ಮಲ್ಲಮ್ಮ ಗೋಳಾ, ಹಿಂದಿನ್ಕೇರಿ ಕಾಶಿನಾಥ, ಪಂಡಿತ ಶಿಂಧೆ, ವೀರಭ ದ್ರಪ್ಪ ಜಮದರ ಖಾನಿ, ರವಿಕುಮಾರ ಕೋಡ್ಲಾ, ಸುರೇಶ ವರ್ಮಾ ಇದ್ದರು.

ರಾಜಶೇಖರ ಮಾಂಗ್‌ ಸ್ವಾಗತಿಸಿ ದರು. ಈರಣ್ಣ ನಾವಿ ನಿರೂಪಿಸಿದರು. ವಿಜಯಕುಮಾರ ಪೋಮಾಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT