ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಖಂಡ ಕರ್ನಾಟಕದ ಕನಸು ನನಸಾಗಲಿ’

Last Updated 13 ಡಿಸೆಂಬರ್ 2013, 5:33 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಮಡಿಕೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಖಂಡ ಕರ್ನಾಟಕದ ಕನಸು ನನಸಾಗಿಸುವ ಕಾರ್ಯವನ್ನು ಸಮ್ಮೇಳನದ ಸರ್ವಾ ಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ನಾ. ಡಿಸೋಜಾ ಅವರು ಮಾಡಬೇಕು ಎಂದು ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಮನವಿ ಮಾಡಿದ್ದಾರೆ.

ಈಗಾಗಲೇ ರಾಜ್ಯದೆಲ್ಲೆಡೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ ಳನದಲ್ಲಾದ ನಿರ್ಣಯಗಳು ಬಹುತೇಕ ಜಾರಿಗೆ ಬಂದಿಲ್ಲ. ಇದರಿಂದಾಗಿ ಮಡಿಕೇರಿ ಸಾಹಿತ್ಯ ಸಮ್ಮೇಳ ನದಲ್ಲಿ ಯಾವ ನಿರ್ಣಯಗಳು ಪಾಸು ಮಾಡುವುದು ಬೇಡ. ಕನ್ನಡಿಗರಿಗೆ ಉದ್ಯೋಗ ಸಿಗುವ ವರದಿಗಳು ದೂಳು ತಿನ್ನುತ್ತಿವೆ. ಕರ್ನಾಟಕ ಅಖಂಡ ವಾದರೂ ಹೈದರಾಬಾದ- ಕರ್ನಾಟಕ, ಮುಂಬೈ- ಕರ್ನಾಟಕ ಪದ ಬಳಕೆ ಜೋರಾಗಿಯೇ ನಡೆಯುತ್ತಿದೆ.  ಮಾಯವಾಗುತ್ತಿರುವ ಕನ್ನಡ ಅಂಕಿ ಬಳಕೆ ಮಾಡುವತ್ತ ಗಮನ ಹರಿಸ ಬೇಕಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗಾಗಿ  ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇದು ಮಾತೃಭಾಷೆ ಕಲಿಕೆ ಕಡ್ಡಾಯ ಎಂಬ ಮಾತಿಗೆ ವಿರೋಧ ವಾದಂತಾ ಗಿದೆ. ಕರ್ನಾಟಕದಲ್ಲಿ ಯಾವುದೇ ಭೀತಿ ಯಿಲ್ಲದೆ ನೆರೆ ರಾಜ್ಯದ ತಮಿಳು, ತೆಲಗು ಚಲನಚಿತ್ರಗಳು  ಪ್ರದರ್ಶನ ವಾಗುತ್ತಿವೆ.

ಆದರೆ ನೆರೆ ರಾಜ್ಯಗಳಲ್ಲಿ ಕನ್ನಡ ಚಲನಚಿತ್ರಗಳು ಪ್ರದರ್ಶನ ವಾಗುವುದಿಲ್ಲ. ಇದಕ್ಕೆ  ಸರಕಾರ ನೀತಿಯೊಂದನ್ನು ರೂಪಿಸಬೇಕಾದ ಅಗತ್ಯವಿದೆ.ಕನ್ನಡದ ಬೆಳವಣಿಗೆಗೆ ಕಂಟಕವಾಗಿರುವ ಈ ಸಮಸ್ಯೆಗಳು ತೊಲಗಿದರೆ ಮಾತ್ರ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT