ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಡಿಕೆ ನಿಷೇಧ ಬಿಜೆಪಿ ಸೃಷ್ಟಿಸಿದ ಅಪಪ್ರಚಾರ’

Last Updated 18 ಡಿಸೆಂಬರ್ 2013, 6:03 IST
ಅಕ್ಷರ ಗಾತ್ರ

ಕೊಪ್ಪ : ಅಡಿಕೆ ಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಗಳಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಯಾವು ದೇ ಅಫಿಡವಿಟ್ ಸಲ್ಲಿಸಿಲ್ಲ. ಇದು ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಸುತ್ತಿ ರುವ ವ್ಯವಸ್ಥಿತ ಅಪಪ್ರಚಾರ  ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಸ್ಪಷ್ಟ ಪಡಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ದಲ್ಲಿ ತಾವು ಸಂಸದ ಜಯಪ್ರಕಾಶ ಹೆಗ್ಡೆ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಅವರೊಂದಿಗೆ ಮುಖ್ಯ ಮಂತ್ರಿಗಳ ಬಳಿ ಚರ್ಚಿಸಿದ್ದು, ಮುಖ್ಯ ಮಂತ್ರಿಗಳು ಕೇಂದ್ರ ಆಹಾರ ಸಚಿವ ಗುಲಾಂ ನಭಿ ಆಜಾದ್ ಅವರನ್ನು ಭೇಟಿಯಾದ ಸಂದರ್ಭದಲ್ಲೂ ಅಂತ ಹ ಯಾವುದೇ ಅಫಿಡವಿಟ್ ಸಲ್ಲಿಸ ಲಾಗಿಲ್ಲ ಮತ್ತು ಅಡಿಕೆಯನ್ನು ನಿಷೇಧಿ ಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಆಹಾರ ಸಚಿವರೇ ಸ್ಪಷ್ಟಪಡಿಸಿದ್ದಾರೆಂದರು.

ಕಳೆದ ಅನೇಕ ದಿನಗಳಿಂದ ಒತ್ತುವರಿ ತೆರವು, ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಈ ಭಾಗದ ಬಿಜೆಪಿ ಶಾಸಕರು ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಯೋಜನೆಗಳು ಅವರ ಸರ್ಕಾರದ ಅವಧಿಯಲ್ಲೇ ರೂಪಿತವಾಗಿದ್ದರೂ, ವಿನಾಕಾರಣ ‘ಕಾಂಗ್ರೆಸ್ ಸರ್ಕಾರ ರೈತರ ಮರಣ ಶಾಸನ ಬರೆದಿದೆ’ ಎಂದು ಹುಯಿಲೆಬ್ಬಿಸುತ್ತಿರುವುದು ಖಂಡನೀಯ ಎಂದರು.

ಗುಟ್ಕಾ ನಿಷೇಧಗೊಂಡಾಗಲೂ ಅಡಿಕೆ ಬೆಳೆಗಾರರಲ್ಲಿ ಬೆಲೆಕುಸಿತದ ಭಯ ಮೂಡಿಸಿ ಗೊಂದಲ ಸೃಷ್ಟಿಸಲಾಗಿತ್ತು. ಆದರೆ ಈಗ ಅಡಿಕೆಯ ಬೆಲೆ ಎಷ್ಟಿದೆ ಎಂಬುದು ರೈತರಿಗೇ ಗೊತ್ತಿದೆ. ಗುಟ್ಕಾ ದಲ್ಲಿ ರಾಸಾಯನಿಕಗಳ ವಿಶ್ರಣ ದೊಂ ದಿಗೆ ಮಾರಾಟ ವಾಗುತ್ತಿದ್ದ ಅಡಿಕೆ, ಗುಟ್ಕಾ ನಿಷೇಧ ದಿಂದ ಸ್ವತಂತ್ರ ಅಸ್ತಿತ್ವ ಪಡೆದುಕೊಂಡಿದ್ದು, ಮಾರುಕಟ್ಟೆಯ ಲ್ಲಿ ದುಪ್ಪಟ್ಟು ಬೆಲೆ ಪಡೆದಿದೆ ಎಂದರು.

ಕೇಂದ್ರ ಸರ್ಕಾರ ಕೃಷಿ ಮತ್ತು ತೋಟಗಾರಿಕೆಗೆ ಉತ್ತೇಜನ ನೀಡಲು ಈಗಾಗಲೇ ₨ 700 ಕೋಟಿ ನೆರವು ನೀಡಿದೆ. ಅಡಿಕೆ ಬೆಳೆ ಪುನಃಶ್ಚೇತನ, ಸಾಲ ಮರು ಹೊಂದಾಣಿಕೆ, ಬಡ್ಡಿ ಮನ್ನಾ, ಕೊಳೆರೋಗ ಸಂತ್ರಸ್ಥರಿಗೆ ಪರಿ ಹಾರ ನೀಡುವ ಮೂಲಕ ಬೆಳೆಗಾರರ ಹಿತ ಕಾಪಾಡಿದೆ. ಹೀಗಿರುವಾಗ ಅಡಿಕೆ ಬೆಳೆ ನಿಷೇಧಿಸುವ ಯಾವ ಲಾಬಿಗೂ ಮಣಿಯುವ ಪ್ರಶ್ನೆಯೇ ಉದ್ಭವಿಸದು ಎಂದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಓಣಿತೋಟ ರತ್ನಾಕರ್, ಮುಖಂಡ ರಾದ ಹೊಲಗಾರು ಶ್ರೀಧರ್, ಅಬ್ದು ಲ್ ಖಾದರ್, ಲೇಖಾ ವಸಂತ್, ನವೀನ್ ಮಾವಿನಕಟ್ಟೆ, ವಿಜಯ ಕುಮಾರ್, ಹರೀಶ್ ಭಂಡಾರಿ, ಮಾಲತಿ, ಅಲ್ತಾಫ್, ಬರ್ಕತ್, ಕೌಳಿ ದೇವರಾಜ್, ಕೆ.ವಿ. ಚಂದ್ರಶೇಖರ್, ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT