ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಂತಮೂರ್ತಿ ಟೀಕೆಯಲ್ಲಿ ಲಾಭದ ಉದ್ದೇಶ’

Last Updated 23 ಸೆಪ್ಟೆಂಬರ್ 2013, 9:23 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಸಾಹಿತಿ ಡಾ.ಯು.ಆರ್‌.­ಅನಂತ­ಮೂರ್ತಿ ಅವರು ಕೇಂದ್ರದ ಯುಪಿಎ ಸರ್ಕಾ­ರ­ದಿಂದ ಲಾಭ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕುರಿತು ಇಲ್ಲ ಸಲ್ಲದ ಟೀಕೆಗಳಲ್ಲಿ ತೊಡಗಿ­ದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ‘ಅನಂತಮೂರ್ತಿ ಅವ­ರಿಗೆ ದೇವರು ಇನ್ನೂ ಹೆಚ್ಚಿನ ಆಯುಷ್ಯವನ್ನು ಕೊಡಬೇಕು. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗುವುದನ್ನು ಅನಂತಮೂರ್ತಿ ಕಣ್ತುಂಬಿ­ಕೊಳ್ಳುತ್ತಾರೆ’ ಎಂದು ಹೇಳಿದರು.

‘ಲೋಕಸಭಾ ಚುನಾವಣೆಗೆ ಪಕ್ಷದ ಕಾರ್ಯ­ತಂತ್ರಗಳು ಆರಂಭವಾಗಿವೆ. ಪಿತೃಪಕ್ಷ ಕಳೆದ ಕೂಡಲೇ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗುವುದು. ದೇಶದಾದ್ಯಂತ ನರೇಂದ್ರ ಮೋದಿ ಅವರ ಗುಜರಾತ್ ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಅಭಿಯಾನ ಕೈಗೊಳ್ಳಲಾ­ಗುವುದು’ ಎಂದು ಅವರು ತಿಳಿಸಿದರು. ‘ಮಾಜಿ ಸಿಎಂ ಬಿ.ಎಸ್‌.ಯಡಿಯೂಪ್ಪ ಪಕ್ಷ ಸೆರ್ಪಡೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಲು ಕಾಂಗ್ರೆಸ್‌ ಹೊರತುಪಡಿಸಿ ಯಾವುದೇ ಪಕ್ಷ ಬೆಂಬಲ ನೀಡಲು ಮುಂದೆ ಬಂದರೂ ಸ್ವಾಗತಿ­ಸುತ್ತೇವೆ’ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಈವರೆಗೂ ವರ್ಗಾವಣೆ ದಂಧೆ ನಿಲ್ಲಿಸಿಲ್ಲ. ವರ್ಗಾವಣೆ ನಿಲ್ಲದ ಹೊರತು ಆಡಳಿತ ಸುಗಮವಾಗಿ ಸಾಧ್ಯವಿಲ್ಲ ಎಂದ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಕುರಿತು ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಇದು ಸರಿ­ಯಲ್ಲ. ಸಿದ್ದರಾಮಯ್ಯ ಅವರಿಗೆ ಸಭ್ಯತೆ ಇದ್ದರೆ ಕ್ಷೇಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನ­ಮರದ, ನಿಯೋಜಿತ ಜಿಲ್ಲಾ ಘಟಕದ ಅಧ್ಯಕ್ಷ ಭೋಜ­ರಾಜ ಕರೂದಿ, ಭಾರತಿ ಜಂಬಿಗಿ, ಮಂಜುನಾಥ ಓಲೇಕಾರ ಅವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT