ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ಯರಿಂದ ಕನ್ನಡಕ್ಕೆ ಕಂಟಕ’

ಸಂಸದ ಡಿ.ಕೆ.ಸುರೇಶ್‌ ಎಚ್ಚರಿಕೆ
Last Updated 2 ಡಿಸೆಂಬರ್ 2013, 9:34 IST
ಅಕ್ಷರ ಗಾತ್ರ

ರಾಮನಗರ: ಉದ್ಯೋಗ ಅರಸಿ ರಾಜ್ಯಕ್ಕೆ ಬರುವ ವರಿಗೆ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡದಿದ್ದರೆ ಭವಿಷ್ಯ ದಲ್ಲಿ ತೀವ್ರ ಕಷ್ಟ ಅನುಭವಿಸಬೇಕಾ ಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಎಚ್ಚರಿಸಿದರು.

ತಾಲ್ಲೂಕಿನ ಬಿಡದಿಯಲ್ಲಿ ರಾಷ್ಟ್ರ ಕವಿ ಕುವೆಂಪು ಕನ್ನಡ ಯುವಕರ ಸಂಘದ ವತಿಯಿಂದ ಶನಿವಾರ ಏರ್ಪ ಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು.

ದಿನದಿನಕ್ಕೂ ಬಿಡದಿ ದೊಡ್ಡ ಕೈಗಾರಿಕಾ ಪ್ರದೇಶವಾಗಿ ರೂಪುಗೊ ಳ್ಳುತ್ತಿದೆ. ಇದ ರಿಂದಾಗಿ ದೇಶದ ಬೇರೆ ಭಾಗಗಳಿಂದ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇಂತ ಹವರಿಗೆ ಕನ್ನಡ ಬಗ್ಗೆ ಕಾಳಜಿ ಹುಟ್ಟು ವಂತೆ ಮಾಡಬೇಕು. ಇಲ್ಲದಿದ್ದರೆ ಅವರು ತಮ್ಮ ಭಾಷೆಯನ್ನು ಸ್ಥಳೀ ಯರಿಗೆ ಕಲಿಸಿ ಕನ್ನಡವನ್ನು ಮರೆಯು ವಂತೆ ಮಾಡುತ್ತಾರೆ ಎಂದರು.

ವಿದ್ಯುತ್ ಚಿತಾಗಾರ ನಿರ್ಮಾಣ: ವೇಗವಾಗಿ ಬೆಳೆಯುತ್ತಿರುವ ಬಿಡದಿ  ಪಟ್ಟಣ ಅಭಿವೃದ್ಧಿಯಲ್ಲಿ ಹಿಂದುಳಿ ದಿದೆ. ಆದ್ದರಿಂದ ಈ ಭಾಗದ ಅಭಿ ವೃದ್ಧಿಗೆ ಹಂತ ಹಂತವಾಗಿ ಯೋಜನೆ ರೂಪಿಸ ಲಾಗುವುದು. ಕ್ರೀಡಾಂಗಣ, ವಿದ್ಯುತ್ ಕೇಂದ್ರ ಚಿತಾಗಾರ ಸೇರಿದಂತೆ ಮೂಲ ಸೌಕರ್ಯ ಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಈ ಭಾಗದ ಪ್ರಮುಖ ಸಮಸ್ಯೆಯಾಗಿರುವ ಕುಡಿ ಯುವ ನೀರಿಗಾಗಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಮಹಾದ್ವಾರ ನಿರ್ಮಾಣ: ಬಾನಂದೂರಿನಲ್ಲಿ ಜನಿಸಿದ್ದ ದಿವಂಗತ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ನೆನಪಿಗಾಗಿ ಬಿಡದಿ ಪಟ್ಟಣದ ಪ್ರವೇಶ ದಲ್ಲಿ ಸ್ವಾಮೀಜಿಯವರ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಲು ತೀರ್ಮಾ ನಿಸ ಲಾಗಿದೆ ಎಂದು ಸುರೇಶ್‌ ತಿಳಿಸಿದರು.

ಕೆಪಿಸಿಸಿ ಸದಸ್ಯ ಎ.ಮಂಜುನಾಥ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತ ನಾಡಿದರು.

ಸನ್ಮಾನ: ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಮಯ್ಯ, ಅಶೋಕ್ ಗುಡಿಗಾರ್, ಶಿವಣ್ಣ, ಎಲ್. ಶಿವಪ್ರಸಾದ್, ಸುಬ್ರ ಮಣ್ಯಂ ಅವರನ್ನು ಸನ್ಮಾನಿಸಲಾ ಯಿತು. ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆಎಂಎಫ್ ನಿರ್ದೇ ಶಕ ಪಿ.ನಾಗರಾಜು, ಜಿಲ್ಲಾ ಪಂಚಾ ಯಿತಿ ಸದಸ್ಯೆ ಶಾಂತಮ್ಮ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸದಸ್ಯರಾದ ಮಹಿ ಪತಿ, ಶೀಲಮ್ಮ,  ಕೆಪಿಸಿಸಿ ಸದಸ್ಯ ಕೆ.ರಮೇಶ್, ಚಿತ್ರ ನಟಿಯರಾದ ಶುಭಾ ಪೂಂಜಾ, ರೂಪಿಣಿ, ಮುಖಂಡರಾದ ಎಸ್.ಟಿ. ಕಾಂತರಾಜ್ ಪಟೇಲ್, ಎಲ್.ಚಂದ್ರ ಶೇಖರ್, ಎಲ್. ಸತೀಶ್ಚಂದ್ರ, ರಾಜಣ್ಣ, ಯುವ ಮುಖಂಡ ಗಾಣಕಲ್ ನಟ ರಾಜ್, ದೊಡ್ಡಗಂಗವಾಡಿ ಗೋಪಾಲ್, ಕುವೆಂಪು  ಯುವಕರ ಸಂಘದ ಅಧ್ಯಕ್ಷ ತೇಜದಾರ್ ಉಪಸ್ಥಿತರಿದ್ದರು.

ಬಿಡದಿಯ ಜ್ಞಾನ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ರೂಪಕ ಮತ್ತು ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT