ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಥಶಾಸ್ತ್ರ ವಿಷಯಕ್ಕೆ ಹೆಚ್ಚಿನ ಮಹತ್ವ’

Last Updated 24 ಸೆಪ್ಟೆಂಬರ್ 2013, 6:29 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ಅರ್ಥಶಾಸ್ತ್ರದ ವಿಷಯ ಮಹತ್ವ ಪಡೆದುಕೊಂಡಿದೆ ಎಂದು ರಾಜ್ಯ ಹಣಕಾಸು ಇಲಾಖೆಯ ಉಪ ಸಲಹೆಗಾರ್ತಿ ಅನಿತ ವಿ. ನಜರೆ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಿಕ ಚಿಂತಕರ ವೇದಿಕೆ ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೆಲ ವೇಳೆ ಸಾರ್ವಜನಿಕ ಹಣಕಾಸು ದುರುಪಯೋಗವಾ ಗುತ್ತಿರುವ ಬಗ್ಗೆ 2500 ವರ್ಷಗಳ ಹಿಂದೆ ಚಾಣಕ್ಯ ಪ್ರಸ್ತಾಪಿಸಿದ್ದರು. ಈಗಲೂ ಕೆಲ ಸಮಸ್ಯೆಗಳು ಅದೇ ರೀತಿ ಇವೆ. ಆಧುನಿಕ ತಂತ್ರಜ್ಞಾನದಿಂದ ಸಮಸ್ಯೆಯನ್ನು ನಿವಾರಿಸಲು ಯತ್ನಿಸಲಾಗುತ್ತಿದೆ ಎಂದರು.

ಮೈಸೂರಿನ ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನೇ.ತಿ. ಸೋಮಶೇಖರ್‌, ‘ಅರ್ಥ ಚಿಲುಮೆ’ ಪತ್ರಿಕೆ ಹಾಗೂ ಕಾಲೇಜು ಪ್ರಾಚಾರ್ಯ ಪ್ರೊ.ಎಂ.ಕೆ. ಉಮಾನಾಥ್‌, ‘ಅರ್ಥ ಸ್ಫೂರ್ತಿಗೋಡೆ’ ಪತ್ರಿಕೆ ಬಿಡುಗಡೆ ಮಾಡಿದರು. ಸಹಪ್ರಾಧ್ಯಾಪಕರಾದ ಎಂ.ಎನ್‌. ಲೋಕೇಶ್‌, ರವಿ ಇದ್ದರು. ಟಿ.ಎಸ್‌. ಜ್ಯೋತಿ ಸ್ವಾಗತಿಸಿದರೆ, ಎನ್‌. ನಾಗವೀಣಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT