ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ಥಿರತೆ ಎದುರಿಸಲು ಸಿದ್ಧ’

ರೂಪಾಯಿ ನೈಜ ಮೌಲ್ಯ ₨60
Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವೆದೆಹಲಿ (ಪಿಟಿಐ): ‘ಅಮೆರಿಕದ ಫೆಡ­ರಲ್‌ ರಿಸರ್ವ್ ಆರ್ಥಿಕ ಉತ್ತೇಜನ ಕೊಡು­ಗೆ ಕಡಿತ ಮಾಡಿದರೆ, ದೇಶದ ಹಣಕಾಸು ಮಾರು­ಕಟ್ಟೆ ಮೇಲಾಗುವ ಪರಿಣಾಮ­ಗಳನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ’ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿ­ದ್ದಾರೆ.

‘ಒಂದು ವೇಳೆ ಫೆಡರಲ್‌ ರಿಸರ್ವ್ (ಅಮೆರಿಕದ ಕೇಂದ್ರ ಬ್ಯಾಂಕ್‌) ಈ ಕ್ರಮಕ್ಕೆ ಮುಂದಾದರೆ ಅದನ್ನು ಎದು­ರಿಸಲು ಸನ್ನದ್ಧರಾಗಿದ್ದೇವೆ. ಇದರಿಂದ ಡಾಲರ್‌ ವಿರುದ್ಧ ರೂಪಾ­ಯಿ ವಿನಿ ಮಯ ಮೌಲ್ಯ ಮತ್ತೊಮ್ಮೆ ಪಾತಾಳಕ್ಕೆ ಕುಸಿಯಲಿದೆ ಎಂಬ ಭಯಬೇಡ’ ಎಂದು ಹಣಕಾಸು ವ್ಯವಹಾ­ರಗಳ ಕಾರ್ಯ­ದರ್ಶಿ ಅರವಿಂದ್ ಮಯರಾಂ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ವಿದೇಶಿ ವಿನಿಮಯ
‘ಸದ್ಯ ಭಾರತೀಯ ರಿಸರ್ವ್‌ ಬ್ಯಾಂಕ್‌ 27,000 ಕೋಟಿ ಡಾಲರ್‌­ಗಳಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ. ಇತ್ತೀಚೆಗೆ ಜಪಾನ್‌ ಜತೆಗೆ ಉಭಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ಕರೆನ್ಸಿ ಮೂಲಕವೇ ವಹಿವಾಟು ನಡೆಸಲುಒಪ್ಪಂದ ಮಾಡಿಕೊಳ್ಳಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದಿಢೀರ್‌ ಅಸ್ಥಿರತೆ ಕಂಡು­ಬಂದರೆ ಅಂತಹ ತುರ್ತು ಸಂದರ್ಭ ಎದುರಿಸಲು ‘ಬ್ರಿಕ್‌’ ದೇಶ­ಗಳು 10,000 ಕೋಟಿ ಡಾಲರ್‌ ಮೌಲ್ಯದ ‘ಆಕಸ್ಮಿಕ ನಿಧಿ’ ಬಳಕೆಗೆ ಸಹಿ ಹಾಕಿವೆ. ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು­ಕೊಂಡಿರು­ವುದ­ರಿಂದ ಫೆಡರಲ್‌ ರಿಸರ್ವ್‌ ಒಂದು ವೇಳೆ ಉತ್ತೇ­ಜನ ಕೊಡುಗೆ­ಗಳನ್ನು ಕಡಿತಗೊ­ಳಿಸಿ­ದರೂ, ಅದರಿಂದ ರೂಪಾಯಿ ಮೌಲ್ಯ­ವೇನೂ ಪಾತಾಳಕ್ಕೆ ಕುಸಿಯದು ಎಂದು ಸ್ಪಷ್ಟಪಡಿಸಿದರು.

ನೈಜ ಮೌಲ್ಯ ₨58ರಿಂದ ₨60
ದೇಶದ ಖರೀದಿ ಸಾಮರ್ಥ್ಯ ಮತ್ತು ವಿವಿಧ ಪಾಲುದಾರ ದೇಶಗಳ ಕರೆನ್ಸಿ ಮೌಲ್ಯದ ಜತೆಗೆ ಹೋಲಿಸಿ ರೂಪಾ­ಯಿಯ ನೈಜ ಮೌಲ್ಯ ನಿರ್ಧರಿಸಲಾ­-ಗುತ್ತದೆ. ಸದ್ಯ ರೂಪಾಯಿಯ ನೈಜ ವಿನಿಮಯ ದರ(ಆರ್ಇಇಆರ್) ₨58ರಿಂದ ₨60­ರಷ್ಟಿದೆ ಎಂದು ಮಯರಾಂ ಹೇಳಿದರು.  ಚಿನ್ನ ಆಮದು ನಿರ್ಬಂಧ, ಭಾರ­ತೀಯ ಮೂಲದ ಕಂಪೆನಿಗಳ ಸಾಗ­ರೋ ತ್ತರ ಹೂಡಿಕೆ ಮೇಲೆ ಮಿತಿ ಹೇರಿಕೆ ಸೇರಿ ದಂತೆ ರೂಪಾಯಿ ಅಪಮೌಲ್ಯ ತಪ್ಪಿ ಸಲು ‘ಆರ್‌ಬಿಐ’ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂ­ಡಿದೆ ಎಂದು ಅವರು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT