ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್‌’ಗೆ ಕಾನೂನು ಬಲ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ
Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಆಧಾರ್‌’ ಕಾರ್ಡ್‌ ನೀಡುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ಕಾನೂನಿನ ಮಾನ್ಯತೆ ಒದಗಿಸುವ ಮಸೂದೆಯನ್ನು ಮುಂಬ ರುವ ಸಂಸತ್ತಿನ ಚಳಿಗಾಲದ ಅಧಿವೇಶನ ದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

‘ಸಂಸತ್ತಿನ ಚಳಿಗಾಲದ ಅಧಿವೇಶನ ದಲ್ಲಿ ರಾಷ್ಟ್ರೀಯ ಗುರುತು ಪ್ರಾಧಿಕಾರ  ಮಸೂದೆ 2010 ಸಂಬಂಧ ಚರ್ಚೆ ನಡೆಸಿ ಒಪ್ಪಿಗೆ ಪಡೆಯಲಾಗುವುದು’ ಎಂದು ಯೋಜನಾ ಸಚಿವ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ.

12 ಅಂಕಿಗಳನ್ನು ಒಳಗೊಂಡ ‘ಆಧಾರ್‌’ ಕಾರ್ಡ್‌ ನೀಡುತ್ತಿರುವ ಯುಐಡಿಎಐ ಕೇಂದ್ರದ ತೀರ್ಮಾನದ ಪ್ರಕಾರ 2009ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಯುಐಡಿಎಐಗೆ ಕಾನೂನಿನ ಮಾನ್ಯತೆ ಒದಗಿಸುವ ಸಂಬಂಧ ಮಸೂದೆ ಮಂಡಿಸಲು 2010ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿತ್ತು. ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಇದನ್ನು ಮಂಡಿಸಲಾಯಿತು. ಬಳಿಕ ಬಿಜೆಪಿ ಮುಖಂಡ ಯಶವಂತ್‌ ಸಿನ್ಹಾ ಮುಖ್ಯಸ್ಥರಾಗಿರುವ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಿಕೊಡಲಾಯಿತು.

‘ಸ್ಥಾಯಿ ಸಮಿತಿ ಕೆಲ ತಿದ್ದುಪಡಿ ಗಳೊಂದಿಗೆ ಮಸೂದೆಯನ್ನು ಯೋಜ ನಾ ಆಯೋಗಕ್ಕೆ ಕಳುಹಿಸಿಕೊಟ್ಟಿದೆ. ಈ ಕುರಿತು ಶೀಘ್ರ ದಲ್ಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಚಳಿ ಗಾಲದ ಅಧಿವೇಶನದಲ್ಲಿ ಕರಡು ಮಂಡಿಸಲಾಗು ವುದು’ ಎಂದು ಶುಕ್ಲಾ ತಿಳಿಸಿದ್ದಾರೆ.

‘ಆಧಾರ್‌’ ಕಾರ್ಡ್‌ ಕೇವಲ ಭಾರತದ ಪ್ರಜೆಗಳಿಗೆ ಮಾತ್ರ ನೀಡಬೇಕು ಹಾಗೂ ಆಧಾರ್‌ ಕಾರ್ಡ್‌ ಇಲ್ಲ ಎಂಬ ನೆಪ ಹೇಳಿ ಫಲಾನುಭವಿಗಳಿಗೆ ಮತ್ತು ನಾಗರಿಕರಿಗೆ ಯಾವುದೇ ರೀತಿಯ ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಸೋಮವಾರ ಮಧ್ಯಂತರ ತೀರ್ಪು ನೀಡಿತ್ತು.

‘ದೇಶದ 18 ರಾಜ್ಯಗಳ 60 ಕೋಟಿ ಜನ ‘ಆಧಾರ್‌’ ಕಾರ್ಡ್‌ಗೆ ನೋಂದ ಣಿ ಮಾಡಿಸಬೇಕು ಎಂದು ಯುಐಡಿಎಐ ಕಡ್ಡಾಯಗೊಳಿಸಿತ್ತು. ಇನ್ನುಳಿದ 61 ಕೋಟಿ ಮಂದಿಯ ಮಾಹಿತಿಯನ್ನು ರಾಷ್ಟ್ರೀಯ ಜನಸಂಖ್ಯೆ ನೋಂದಣಿ  ಕಾರ್ಯಕ್ರಮದ  (ಎನ್‌ಪಿಆರ್‌) ಅಡಿ ಸಂಗ್ರಹಿಸಲಾಗುತ್ತದೆ.

  ಎನ್‌ಪಿಆರ್‌ ಮತ್ತು ಯುಐಡಿಎಐ ಸಂಗ್ರಹಿಸಿದ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ‘ಆಧಾರ್‌’ ಸಂಖ್ಯೆ ಒಳಗೊಂಡ ಬಹುಉದ್ದೇಶದ ರಾಷ್ಟ್ರೀಯ ಗುರುತು ಪತ್ರವನ್ನು ದೇಶದ ನಾಗರಿಕರಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT