ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ’

Last Updated 16 ಸೆಪ್ಟೆಂಬರ್ 2013, 9:11 IST
ಅಕ್ಷರ ಗಾತ್ರ

ಅಜ್ಜಂಪುರ: ರೋಟರಿ ಮತ್ತು ಇನ್ನರ್‌ ವ್ಹೀಲ್‌ ಸಂಸ್ಥೆಗಳು ವಿಶೇಷವಾಗಿ ಮಹಿಳೆಯರಲ್ಲಿ ಆರೋಗ್ಯ, ಶಿಕ್ಷಣ ನೀಡುವ ಮೂಲಕ ಆತ್ಮವಿಶ್ವಾಸ, ಸ್ವಾಭಿಮಾನ, ಸದೃಢತೆ ಮೂಡಿಸಲು ಪ್ರಯತ್ನಿಸುತ್ತಿದೆ. ಹೀಗೆ ಮನೆಯ ಪಾಲನೆ ನೋಡಿಕೊಳ್ಳುವ ಮಹಿಳೆ­ಯೊಬ್ಬ­ಳನ್ನು ಆರೋಗ್ಯ­ವಂತಳಾಗಿ ರೂಪಿ­ಸುವ ಮೂಲಕ ಇಡೀ ಕುಟುಂಬ, ಸಮಾಜ, ದೇಶದ ಆರೋಗ್ಯ ಉತ್ತಮಗೊಳಿಸಲು ಶ್ರಮಿಸುತ್ತಿದೆ ಎಂದು ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣಮ್ಮ ತಿಳಿಸಿದರು. 

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಆವರಣದಲ್ಲಿ ಭಾನುವಾರ ನಡೆದ ಉಚಿತ ಕಣ್ಣಿನ, ಸ್ತ್ರೀ ರೋಗದ ತಪಾಸಣೆ, ರಕ್ತಗುಂಪು ತಪಾಸಣೆ ಮತ್ತು ರಕ್ತದಾನ ಶಿಬಿರದ ಕಾರ್ಯ­ಕ್ರಮದಲ್ಲಿ ಅವರು ಮಾತ­ನಾಡಿದರು.

ಡಾ.ಸುಭಾಶ್‌ ಚಂದ್ರ, ಗ್ರಾಮೀಣ­ರಲ್ಲಿ ಜಂತು ಮತ್ತು ಕೊಕ್ಕೆಹುಳುವಿಂದ ಕರುಳಲ್ಲಿ ಕಂಡು ಬರುವ ರಕ್ತಹೀ­ನತೆಯ ಅನಿಮೀಯ, ಡೆಂಗೆಯಿಂದ ಉಂಟಾಗುವ ಅಧಿಕ ರಕ್ತಸ್ರಾವ ತಡೆಯಲು ಅವಶ್ಯವಿರುವ ರಕ್ತತಟ್ಟೆ ಪೂರೈಸಲು, ಬೆಂಕಿ ಅನಾಹುತಕ್ಕೀಡಾಗಿ ಸುಟ್ಟ ಗಾಯದಿಂದ ನರಳುವರಿಗೆ ರಕ್ತದ ಪ್ಲಾಸ್ಮಾ  ಅವಶ್ಯವಿರುತ್ತದೆ.

ಹೀಗೆ ರಕ್ತದಲ್ಲಿರುವ ಅಗತ್ಯ ಅಂಶವನ್ನು ಬೇಪರ್ಡಿಸಿ ನೀಡುವ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡು­ತ್ತಿದೆ ಎಂದರು ರೋಟರಿ ಸಂಸ್ಥೆ ಅಧ್ಯಕ್ಷ ತಿಪ್ಪೇಶ್, ರಕ್ತ ಪೂರೈಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಸ್ಥಾಪನೆಗೊಂಡಿರುವ ರಕ್ತಬ್ಯಾಂಕ್ ಗಳು  ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಇಂತಹ ರಕ್ತ ಬ್ಯಾಂಕ್‌ ಗಳೂ ಇಂದು ರಕ್ತದ ಕೊರತೆ ಎದುರಿಸುತ್ತಿದ್ದು.

ಆರೋಗ್ಯವಂತರು ಮೂಡ ನಂಬಿಕೆ ಅಂಧಶ್ರದ್ಧೆ ಬಿಟ್ಟು ರಕ್ತ ದಾನ­ಮಾಡಲು ಮುಂದಾಗಬೇಕು ಎಂದು ಕರೆನೀಡಿದರು. ಉದ್ಘಾಟಿಸಿದ ಡಿವೈಎಸ್ಪಿ ವ್ಐಎಸ್ಪಿ ಸದಾನಂದನಾಯಕ್‌ ಮಾತನಾಡಿ, ಇತರ ಆಸ್ಪತ್ರೆಗಳ ನೆರವು ರೋಟರಿ ಸಂಸ್ಥೆ ಪಡೆದು, ಮಾನವನ ಮೂಲ­ಭೂತ ಅವಶ್ಯಕತೆಯಲ್ಲಿ ಮುಖ್ಯ­ವಾಗಿ­ರುವ ಆರೋಗ್ಯ  ಸೇವೆಯನ್ನು ಒದಗಿ­ಸುವ ನಿಟ್ಟಿನಲ್ಲಿ ಕಾರ್ಯಾ ನಿವಹಿ­ಸುತ್ತಿ­ರುವುದು   ಶ್ಲಾಘನೀಯ. ಸಾರ್ವ­ಜನಿ­ಕರು ಇದರ ಸದುಪಯೋಗ ಪಡೆಯಬೇಕು ಎಂದರು. 

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ತಿಪ್ಪೇರುದ್ರಯ್ಯ, ತಾ.ಪಂ ಸದಸ್ಸ್ಯೆ ಶಕುಂತಲಾ, ರತ್ನಮ್ಮ, ಗ್ರಾ,ಪಂ.ಉಪಾಧ್ಯಕ್ಷ ಮೋಹನ್‌ ದಾಸ್‌, ಡಾ.ನವೀದ್, ಶಶಿಧರ್‌, ಮುಖಂಡ ರವಿ ಶಾನುಭಾಗ್‌, ಕಾಲೇಜು ಉಪನ್ಯಾಸಕ ನಯಾಜ್‌ ಅಹಮದ್‌, ಎನ್‌ ಎಸ್‌ ಎಸ್‌ ವಿದ್ಯಾಥಿರ್ಗಳು ಪಾಲ್ಗೊಂಡಿದ್ದರು. ರೋಟರಿ ಸಂಸ್ಥೆ, ರೋಟರಿ ಮಿಡ್‌ ನಗರ ಬ್ಯಾಂಕ್‌, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ತರೀಕೆರೆಯ ರಾಜ್‌ ನರ್ಸಿಂಗ್ ಹೋಂ, ಡಾಕ್ಟರ್‌ಗಳು ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT