ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಪಿಎಂಸಿ ಮೂಲಕ ಬೆಳೆ ಮಾರಾಟ ಮಾಡಿ’

Last Updated 20 ಸೆಪ್ಟೆಂಬರ್ 2013, 8:56 IST
ಅಕ್ಷರ ಗಾತ್ರ

ಹೊಸನಗರ: ಎಪಿಎಂಸಿ ಮೂಲಕ ಮಾತ್ರ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುವಂತೆ ಎಪಿಎಂಸಿ ನೂತನ ಅಧ್ಯಕ್ಷ ಗುಬ್ಬಿಗಾ ಅನಂತರಾವ್‌ ಮನವಿ ಮಾಡಿದರು.

ಗುರುವಾರ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಅಧಿಕಾರ ಹಸ್ತಾಂತರ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ  ಹಣಕಾಸು ಪೋಲಾಗವುದನ್ನು ತಡೆಗಟ್ಟುವುದು ತಮ್ಮ ಮೊದಲ ಆದ್ಯತೆ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ್‌ ಮಾತನಾಡಿ, ಸಮಿತಿಗೆ ನಾಮನಿರ್ದೇಶನಕ್ಕೆ ಸಹಕರಿಸಿದ ವಿಧಾಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ, ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಅಭಿನಂದಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಚಂದ್ರಮೌಳಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಟೇಲ್‌ ಗರುಡಪ್ಪ ಗೌಡ, ಕಾರ್ಯದರ್ಶಿ ಏರಗಿ ಉಮೇಶ್‌, ಪ್ರಭಾಕರ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಯರಾಮ್‌, ಎಪಿಎಂಸಿ ಉಪಾಧ್ಯಕ್ಷ ನಾರಾಯಣರಾವ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಕುನ್ನೂರು ಮಂಜಪ್ಪ, ಪೂರ್ಣಿಮಾ, ಮಾಜಿ ಸದಸ್ಯ ಅಬ್ಬಿ ಮಲ್ಲೇಶಪ್ಪ ಹಾಜರಿದ್ದರು.

ಶಿವಮೂರ್ತಿ ಸ್ವಾಗತಿಸಿದರು. ಶಿವಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.
ನಾಮನಿರ್ದೇಶಿತ ಎಪಿಎಂಸಿ ಸಮಿತಿ: ಗುಬ್ಬಿಗಾ ಅನಂತರಾವ್‌ (ಅಧ್ಯಕ್ಷ), ಡಿ.ಕೆ.ನಾರಾಯಣರಾವ್‌ (ಉಪಾಧ್ಯಕ್ಷ), ಕಲ್ಯಾಣಪ್ಪ ಗೌಡ, ಮಹಾಬಲರಾವ್‌, ಕೊಳಗಿ ಭೋಜರಾಜ ಶೆಟ್ಟಿ, ಜಯಶೀಲಪ್ಪ ಗೌಡ, ಗೋಪಾಲಕೃಷ್ಣ, ಚನ್ನಮ್ಮ, ಸುಳಗೋಡು ರತ್ನಾಕರ ಗೌಡ, ವೆಂಕಟೇಶ್‌, ರುದ್ರೇಶ್‌, ಡಿ.ಇ. ಮಧಸೂದನ್‌, ಸೀನಾ, ನಗರ ರಾಮಚಂದ್ರ (ಸದಸ್ಯರು) ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ  ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT