ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಪ್ರಿಲ್‌ಗೆ ನೀರಿನ ಸಮಸ್ಯೆ ಅಂತ್ಯ’

ಶೀಘ್ರವೇ ನಗರಸಭೆಯಾಗಿ ಮುಳಬಾಗಲು
Last Updated 16 ಡಿಸೆಂಬರ್ 2013, 6:41 IST
ಅಕ್ಷರ ಗಾತ್ರ

ಮುಳಬಾಗಲು: ಮುಂದಿನ ಏಪ್ರಿಲ್ ವೇಳೆಗೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊನೆಗೊಳ್ಳಲಿದೆ ಎಂದು ಶಾಸಕ ಜಿ.ಮಂಜು­ನಾಥ್ ಹೇಳಿದರು.

ಪಟ್ಟಣದ ನೂಗಲಬಂಡೆಯ 12ನೇ ವಾರ್ಡ್‌ನಲ್ಲಿ ₨ 27 ಕೋಟಿ ವೆಚ್ಚದ ಓವರ್‌ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಅಶೋಕ್‌­ಕುಮಾರ್ ಮಾತನಾಡಿ, ಹಲವು ದೂರು, ಜನರ ಬೇಡಿಕೆಗಳ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ­ಗೊಳಿಸ­ಲಾಗುತ್ತಿದೆ ಎಂದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಕೆಇಬಿ ವೃತ್ತದವರೆಗಿನ ಫುಟ್‌­ಪಾತ್‌ನಲ್ಲಿ ಪ್ಲೇಟ್‌ಗಳನ್ನು ಹಾಗೂ ಗ್ರಿಲ್ಸ್‌ಗಳನ್ನು ಅಳವಡಿಸ­ಲಾಗುವುದು. ಎಂ.ಎನ್.ಹಳ್ಳಿ ಕೆ.ಬಯ್ಯ­ಪಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗು­ವುದು. ಶೀಘ್ರದಲ್ಲಿಯೇ ಮುಳಬಾ­ಗಲು ಪುರಸಭೆ ನಗರಸಭೆಯಾಗಿ ಪರಿ­ವರ್ತನೆಯಾಗಲಿದ್ದು, ಹೆಚ್ಚಿನ ಮೂಲ­ಸೌಕರ್ಯಗಳು ಸಿಗಲಿವೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಆವಣಿ ಬ್ಲಾಕ್ ಅಧ್ಯಕ್ಷ ಜಿ.ರಾಮ­ಲಿಂಗಾರೆಡ್ಡಿ, ಟೌನ್ ಬ್ಲಾಕ್ ಅಧ್ಯಕ್ಷ  ಷಹಬಾಜ್ ಖಾನ್, ಕೇಂದ್ರ ಜವಳಿ ಮಂಡಳಿ ಸದಸ್ಯ ಆರ್.ಎಸ್.­ಕೃಷ್ಣಯ್ಯ­ಶೆಟ್ಟಿ, ಪುರಸಭೆ ಸದಸ್ಯರಾದ ಅಯೂಬ್ ಪಾಷಾ, ಗೋಪಿ, ಜಗ­ಮೋಹನ್ ರೆಡ್ಡಿ, ಗಿರಿಜಾ ವಾಸು, ಪುರಸಭೆ ಮಾಜಿ ಅಧ್ಯಕ್ಷ ಯಾಮಣ್ಣ, ಬಷೀರ್ ಅಹಮದ್, ಮಲ್ಲಿಕಾರ್ಜುನ­ರೆಡ್ಡಿ, ಎಂ.ಪಿ.­ವಾಜೀದ್, ಕಲೀಲ್, ಮುಷೀರ್ ಪಾಷಾ, ಶ್ರೀನಿವಾಸ್, ಜಮ್ಮನ­ಹಳ್ಳಿ ಕೃಷ್ಣ, ರಾಮಾಂಜಿ, ಕಿಶೋರ್ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT