ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತಡ ಮುಕ್ತ ಜೀವನಕ್ಕೆ ಯೋಗ’

Last Updated 25 ಸೆಪ್ಟೆಂಬರ್ 2013, 8:27 IST
ಅಕ್ಷರ ಗಾತ್ರ

ಗದಗ: ಜೀವನದಲ್ಲಿನ ಒತ್ತಡದ ಜಂಜಾಟ ನಿವಾರಿಸಿಕೊಳ್ಳಲು ಯೋಗ ಉತ್ತಮ ಸಾಧನವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಗಿರೀಜಮ್ಮ ತಾಯಿ ಪಾಲತೂರಮಠ ಹೇಳಿದರು.

ಸ್ಥಳೀಯ ಬಸವಯೋಗ ಕೇಂದ್ರ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಜರು ಗಿದ ವಿಶೇಷ ಯೋಗ ಶಿಬಿರ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾ ಡಿದ ಅವರು,  ಮನುಷ್ಯ ಒತ್ತಡದ ಜಂಜಾಟಗಳಿಂದ ನರಳುತ್ತಿದ್ದಾನೆ. ಇದ ರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ರೋಗಗಳಿಗೆ ತುತ್ತಾಗಿ ನರಳುತ್ತಿದ್ದಾನೆ. ಪರಿಣಾಮವಾಗಿ ಮಾನವನ ಆಯುಸು್ಸ 50 ರಿಂದ 55 ವರ್ಷಕ್ಕೆ ಮಾತ್ರ ಸೀಮಿ ತವಾಗಿದೆ. ಈ ಒತ್ತಡದ ಜೀವನದ ಮಧೆ್ಯ ರೋಗ ಮುಕ್ತ ಜೀವನ ನಡೆಸಲು ಯೋಗ ಪ್ರಯೋಜನಕಾರಿ ಎಂದು ತಿಳಿಸಿದರು.

ಗಿರಿಜಾ ನಾಲವತ್ವಾಡ ಮಠ ಮಾತ ನಾಡಿ, ಯೋಗ ವಿಜ್ಞಾನ ಪ್ರಾಚೀನ ಭಾರತದ ಒಂದು ಕಲೆಯಾಗಿದೆ. ಈ ಕಲೆಯನ್ನು ರೂಢಿಸಿಕೊಂಡಿದ್ದ ಭಾರತದ ಋಷಿ ಮುನಿಗಳು 200 ವರ್ಷಕ್ಕಿಂತ ಹೆಚ್ಚಿಗೆ ಆಯುಸು್ಸ  ಹೊಂದಿದ್ದರು. ಪಾಶ್ಚತ್ಯ ಸಂಸ್ಕೃತಿಯ ಅನುಕರಣೆ ಯಿಂದಾಗಿ ಭಾರತದಲ್ಲಿ ಯೋಗ ಪರಂಪರೆ ಕಡಿಮೆಯಾಗುತ್ತಿದೆ. ಆದರೆ ಯೋಗದ ಮಹತ್ವವನ್ನು ಅರಿತಿರುವ ಜರ್ಮನರು ತಮ್ಮ ಪಠ್ಯಕ್ರಮದಲ್ಲಿ ಯೋಗವನ್ನು ಕಡ್ಡಾಯ ವಿಷಯವನ್ನಾ ಗಿಸಿದ್ದಾರೆ. ಯೋಗದ ಉಗಮಸ್ಥಾನ ವಾದ ಭಾರತದಲ್ಲಿಯೇ ಯೋಗಕ್ಕೆ ಇಂತಹ ದುಸ್ಥಿತಿ ಬಂದಿರುವುದು ವಿಪರ್ಯಾಸ ಎಂದು   ವಿಷಾದಿಸಿದರು.

ಯೋಗ ತಜ್ಞೆ   ಸುಮಂಗಲಾ ಹದ್ಲಿ ಮಾತನಾಡಿ, ಯೋಗವನ್ನು ಕಡ್ಡಾಯ ಪಠ್ಯ ವಿಷಯವನ್ನಾಗಿಸಬೇಕು. ಅದ ರೊಂದಿಗೆ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಯೋಗ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡ ಬೇಕೆಂದು ಆಗ್ರಹಿಸಿದರು.

ಶ್ವೇತಾ ಬೆಲ್ಲದ ಮಾತನಾಡಿ, ಜೀವನ ದಲ್ಲಿ ಗುರುವಿಗೆ ವಿಶೇಷ ಸ್ಥಾನಮಾ ನವಿದೆ. ಪ್ರತಿಯೊಬ್ಬರೂ ಜೀವನದಲ್ಲಿ  ಗುರುವನ್ನು ನಿಂದಿಸುವುದಾಗಲಿ ಅಥವಾ ಹಗುರವಾಗಿ ಮಾತನಾಡುವು ದಾಗಲಿ  ಮಾಡುವುದು ತರವಲ್ಲ ಎಂದರು. ಪುಷ್ಪಾ ಹಿರೇಮಠ, ಯಲ್ಲಮ್ಮ ತಳವಾರ, ಕಲಾವತಿ ಅಯ್ಯನ ಗೌಡರ, ಮಂಜುಳಾ ಹಾಸಲಕರ, ಶಾಂತಾ ಬಾಯಿ ಕೋಣನವರ ಹಾಜರಿದ್ದರು. ವಿಜಯಾ ಚನ್ನಶೆಟ್ಟಿ ಸ್ವಾಗತಿಸಿದರು. ಶಾಂತಾ ಮುಂದಿನಮನಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT