ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸುವೆ’

ಮೇರಿ ಕೋಮ್‌ ಜೀವನ ಚರಿತ್ರೆ ಪುಸ್ತಕ ಬಿಡುಗಡೆ
Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: 2016ರ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಚಿನ್ನ ಜಯಿಸಬೇಕೆಂಬ ಬಯಕೆ ಇದೆ. ಇದನ್ನು ಖಂಡಿತ ವಾಗಿಯೂ ಈಡೇರಿಸುತ್ತೇನೆ ಎಂಬ ವಿಶ್ವಾಸವೂ ಇದೆ ಎಂದು ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಬಾಕ್ಸಿಂಗ್ ತಾರೆ ಎಮ್‌.ಸಿ ಮೇರಿ ಕೋಮ್ ತಿಳಿಸಿದರು.

ಬುಧವಾರ ನಗರದಲ್ಲಿ ನಡೆದ ತಮ್ಮ ಜೀವನ ಚರಿತ್ರೆ  ಪುಸ್ತಕ ‘ಅನ್‌ಬ್ರೆಕೆಬಲ್’ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘2016ರ ರಿಯೊ ಒಲಿಂಪಿಕ್ಸ್‌ಗಾಗಿ ಮುಂದಿನ ವರ್ಷದ ಆರಂಭದಿಂದಲೇ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸಲಿದ್ದೇನೆ. ನಿಮ್ಮೆಲ್ಲರ ಬೆಂಬಲ ಇದ್ದರೆ ಖಂಡಿತವಾಗಿಯೂ ಚಿನ್ನ ಜಯಿಸುತ್ತೇನೆ. ಜೊತೆಗೆ ಮುಂದಿನ ಮೂರು ವರ್ಷಗಳ ಕಾಲ  ವಿವಿಧ ಟೂರ್ನಿಗಳಲ್ಲಿ ಭಾಗವಹಿಸುತ್ತೇನೆ ಇದರಿಂದ ಒಲಿಂಪಿಕ್ಸ್‌ ನಲ್ಲಿ ವಿಶ್ವಾಸ ದಿಂದ ಪಾಲ್ಗೊಳ್ಳಲು  ನೆರವಾಗುತ್ತದೆ’ ಎಂದು ಅವರು ತಿಳಿಸಿದರು.

‘ಬಾಕ್ಸಿಂಗ್‌  ಆರಂಭಿಸಿದ ದಿನ ದಿಂದಲೇ  ಒಲಿಂಪಿಕ್ಸ್‌ನಲ್ಲಿ ಪದಕ ಪಡೆ ಯುವ ಕನಸು ಹೊಂದಿದ್ದೆ. ಆ ಕನಸನ್ನು ನನಸು ಮಾಡುವವರೆಗೆ ನಾನು ಎದುರಿ ಸಿದ ಕಷ್ಟ ಮತ್ತು ಸವಾಲುಗಳ ಕುರಿತ ಮಾಹಿತಿಯನ್ನು ಈ ಪುಸ್ತಕ ಒಳಗೊಂ ಡಿದೆ’ ಎಂದು ಕೋಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT