ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಣ್ಣನ್ನು ಮಣ್ಣು ಮಾಡಲು ಬಿಡಬೇಡಿ’

Last Updated 23 ಸೆಪ್ಟೆಂಬರ್ 2013, 10:05 IST
ಅಕ್ಷರ ಗಾತ್ರ

ಕನಕಪುರ: ‘ಕಣ್ಣನ್ನು ಮಣ್ಣು ಮಾಡಲು ಬಿಡಬೇಡಿ,  ಅವನ್ನು ಇನ್ನೊಬ್ಬರಿಗೆ ದಾನ ಮಾಡಿದರೆ ಅವರ ಬಾಳು ಬೆಳ ಕಾಗುತ್ತದೆ’ ಎಂದು ಪುರ ಪೋಲಿಸ್‌ ಠಾಣಾ ಆರಕ್ಷಕ ಸಬ್‌ ಇನ್‌ಸ್ಪೆಕ್ಟರ್‌ ಅಶೋಕ್‌ಕುಮಾರ್‌  ಹೇಳಿದರು.

ಪಟ್ಟಣದ ಬಾಣಂತಮಾರಮ್ಮ ಸರ್ಕಾರಿ ಶಾಲೆ ಆವರಣದಲ್ಲಿ ಡಾ.ರಾಜ್‌ ಅಭಿಮಾನಿ ಬಳಗ ಹಾಗೂ ವಾಸನ್‌ ಐ.ಕೇರ್‌ ಆಸ್ಪತ್ರೆಯ ಸಂಯುಕ್ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗವು ಉತ್ತಮ ಕೆಲಸವನ್ನು ಮಾಡುತ್ತಿದೆ. ಬಳಗದ 3ನೇ ವರ್ಷಾಚರಣೆಯಲ್ಲಿ ಇಂತಹ ಒಂದು ಕಣ್ಣಿನ ತಪಾಸಣೆಯ ಪವಿತ್ರ ಕೆಲಸ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ, ಇನ್ನು ಮುಂದೆಯು ಇದೇ ರೀತಿ ಉತ್ತಮ ಕೆಲಸಗಳನ್ನು ಸಮಾಜಕ್ಕೆ ನೀಡಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯ, ಹಿರಿಯ ವಕೀಲ ರಾಮಚಂದ್ರ ಅವರು ಮಾತನಾಡಿ ಮನುಷ್ಯನಿಗೆ ಆರೋಗ್ಯ ಭಾಗ್ಯ ಎಷ್ಟು ಮುಖ್ಯವೋ, ಕಣ್ಣು ಸಹ ಅಷ್ಟೇ ಮುಖ್ಯವಾದದ್ದು, ಕಣ್ಣನ್ನು ಜೋಪಾನ ವಾಗಿ ಕಾಪಾಡಬೇಕು’ ಎಂದರು.

ಮುಖ್ಯ ಅತಿಥಿಗಳಾಗಿ ವಕೀಲ ದೇವದಾಸು, ಸ್ಟುಡಿಯೋಚಂದ್ರು, ಮುಖ್ಯಶಿಕ್ಷಕ ಕುಮಾರ್‌, ವಿಶ್ವಕರ್ಮ ಮಹಾಮಂಡಳಿ ತಾಲ್ಲೂಕು ಅಧ್ಯಕ್ಷ ಚಂದ್ರಾಚಾರ್‌ ಪಾಲ್ಗೊಂಡಿದ್ದರು.

ಬಳಗದ ಅಧ್ಯಕ್ಷ ಭಾಸ್ಕರ್‌, ಉಪಾಧ್ಯಕ್ಷ ಪರಮೇಶ್‌, ಪದಾಧಿಕಾರಿ ಗಳಾದ ವೆಂಕಟೇಶ್‌, ಮನಗಣ ಚಾರ್‌, ಕುಮಾರ್‌, ನೀಲಕಂಠ, ವೀರಭದ್ರ, ರಸೂಲ್‌ಬೇಗ್‌, ಕೆ.ಎಸ್‌. ನಾಗರಾಜು, ಮಾದಾ ನಾಯಕ್‌, ಐ.ಕೇರ್‌ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT