ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ಬಗ್ಗೆ ಅವಹೇಳನಕಾರಿ ಮಾತು ಸಲ್ಲದು’

Last Updated 5 ಡಿಸೆಂಬರ್ 2013, 9:08 IST
ಅಕ್ಷರ ಗಾತ್ರ

ವಿಜಯಪುರ: ಬೆಳಗಾವಿ ಅಧಿ ವೇಶದದಲ್ಲಿ ಶಾಸಕರೊಬ್ಬರು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಆಡಿರುವ ಅವ ಹೇಳನಕಾರಿ ಮಾತು ಖಂಡನಾರ್ಹ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ತಿಳಿಸಿದರು.

ಪಟ್ಟಣದ ಗಂಗಾತಾಯಿ ದೇವಾ ಲಯದ ಬಳಿ ತಾಲ್ಲೂಕು ಕಸಾಪ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಮಾಸಾಚರಣೆ ಯ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿ ಮಾತನಾಡಿದರು.

ಬೆಂ.ಗ್ರಾ.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಬಚ್ಚೇಗೌಡ ಸಮಾರಂಭ ಉದ್ಘಾ ಟಿಸಿ ಮಾತನಾಡಿ, ಕನ್ನಡದ ಉಳಿವಿ ಗಾಗಿ ಹೋರಾಟ ಅನಿವಾರ್ಯ ಎಂದರು. ಭೀಷ್ಮಸೇನೆಯ ರಾಜ್ಯ ಘಟಕ ದ ಅಧ್ಯಕ್ಷ ಮಾ.ರಮೇಶ್‌ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಅಧಿಕ ಪ್ರಸಂಗ ತೋರಿದ ಪುಂಡ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಬೇಕಿದೆ ಎಂದರು.

ಬೆಂ.ಗ್ರಾ.ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ.ನಾರಾಯಣ ಸ್ವಾಮಿ, ಕರ್ನಾಟಕ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಪುರಸಭಾ ಸದಸ್ಯ ಎಂ.ಸತೀಶ್‌ಕುಮಾರ್‌, ತಾಲ್ಲೂಕು ಕಸಾಪ ಅಧ್ಯಕ್ಷ ಆರ್‌.ರಾಜಗೋಪಾಲ್‌, ಚಿ.ಮಾ. ಸುಧಾಕರ್‌ ಮಾತನಾಡಿದರು. ಬೆಂ. ಗ್ರಾ.ಜಿಲ್ಲಾ ಕಸಾಪ ಉಪಾಧ್ಯಕ್ಷ ರುದ್ರೇಶ್‌ಮೂರ್ತಿ ಸಮಾರೋಪ ಭಾಷಣ ಮಾಡಿದರು.

ತಾಲ್ಲೂಕು ಕಸಾಪ ವತಿಯಿಂದ ಹಾರೋಹಳ್ಳಿಯ ರಂಗಭೂಮಿ ಕಲಾ ವಿದ ಎಂ.ನಾರಾಯಣಸ್ವಾಮಿ, ಆವತಿ ಯ ಕಲಾವಿದ ಎಂ.ನಾಗರಾಜ್‌, ಶಿಕ್ಷಣ ಇಲಾಖೆಯ ಅಧಿಕಾರಿs ಮಂಜುಳಾ, ಶಿಕ್ಷಕ ವೆಂಕಟೇಶಪ್ಪ ಅವರನ್ನು ಸನ್ಮಾನಿ ಸಲಾಯಿತು. ಕಳೆದ ಸಾಲಿನ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯ ದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ತಾಲ್ಲೂಕು ಕಸಾಪ ಗೌರವಾಧ್ಯಕ್ಷ ಎ.ಸಿ.ಗುರುಸ್ವಾಮಿ, ಗ್ರಾ.ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ನಾಗೇಶ್‌, ಬಿಜೆಪಿ ಮುಖಂಡ ಹುರಳ ಗುರ್ಕಿ ಶ್ರೀನಿವಾಸ್‌, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ನಾರಾಯಣ ಸ್ವಾಮಿ, ಹೋಬಳಿ ಅಧ್ಯಕ್ಷ ಕೆ.ವಿ.ಭೈರೇ ಗೌಡ, ಬಿಜೆಪಿ ಟೌನ್‌ ಅಧ್ಯಕ್ಷ ಕನಕ ರಾಜು, ಸಮಾಜ ಸೇವಕ ಪಿ.ಸಂಪತ್‌, ಕಸಾಪ ಟೌನ್‌ ಘಟಕದ ಅಧ್ಯಕ್ಷ ಜೆ.ಆರ್‌.ಮುನಿವೀರಣ್ಣ, ಮಹಿಳಾ ಘಟ ಕದ ಅಧ್ಯಕ್ಷೆ ಪ್ರೇಮಾ ಹೂಗಾರ್‌  ಉಪಸ್ಥಿತರಿದ್ದರು.ತಾಲ್ಲೂಕು ಕಸಾಪ ಸಾಂಸ್ಕೃತಿಕ ತಂಡದ ಎಂ.ವಿ.ನಾಯ್ಡು, ಡಿ.ಎಂ.ರಾಮ ಕೃಷ್ಣಪ್ಪ, ಎಂ.ನಾರಾ ಯಣಸ್ವಾಮಿ, ಕೃಷ್ಣಪ್ಪ, ಹರೀಶ್‌ ಮತ್ತು ಸಂಗಡಿಗರು ನಾಡಗೀತೆ ಮತ್ತು ಕನ್ನಡದ ಗೀತೆಗಳನ್ನು ಹಾಡಿದರು. ಕೆ.ಎಚ್‌. ಚಂದ್ರಶೇಖರ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT