ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ರಕ್ಷಣೆ ಎಲ್ಲರ ಕರ್ತವ್ಯ’

Last Updated 24 ಡಿಸೆಂಬರ್ 2013, 7:01 IST
ಅಕ್ಷರ ಗಾತ್ರ

ಮಳವಳ್ಳಿ: ಕನ್ನಡ ರಕ್ಷಣೆ ಹಾಗೂ ಏಳಿಗೆಗಾಗಿ ಕನ್ನಡ ಸೇನೆ ಕರ್ನಾಟಕ ವರ್ಷದ 365 ದಿನಗಳಲ್ಲೂ ಶ್ರಮಿಸುತ್ತಿದೆ ಎಂದು ಕನ್ನಡ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.  ಕುಮಾರ್ ತಿಳಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ  ಶಾಲೆ ಆವರಣದಲ್ಲಿ ಈಚೆಗೆ ಕನ್ನಡ ಸೇನೆ ಕರ್ನಾಟಕದ ತಾಲ್ಲೂಕು ಘಟಕದ ವತಿಯಿಂದ 58ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಮಾಗನೂರು ಎಂ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಖ್ಯಾತ ಚಲನಚಿತ್ರ ನಟ ಧ್ರುವ ಸರ್ಜಾ, ವಿಶ್ವ, ಕಿರುತೆರೆಯ ಉಡೀಸ್‌ ರವಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಅಖಿಲ ಕರ್ನಾಟಕ ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ರವೀಂದ್ರಸಿಂಗ್,ಚಲನಚಿತ್ರ ನಿರ್ಮಾಪಕ ಭರತೇಶ್ ನಾಗರಾಜು, ಅಪ್ಪರ್ ವುಲ್ಲಾ, ಕಲಾವಿದರಾದ ಮಹೇಶ್,ಉಮೇಶ್,ಮುಖಂಡರಾದ ಕೋರೆಗಾಲ ನಾಗೇಂದ್ರ,           ಎಚ್.ಅರ್. ಅಶೋಕ್ ಕುಮಾರ್, ಪುಟ್ಟಸ್ವಾಮಿ, ಕನ್ನಡ ಸೇನೆಯ ಜಿಲ್ಲಾ ಪದಾಧಿಕಾರಿಗಳಾದ ಹನುಮೇಶ್, ಕೆಂಪೆಗೌಡ, ರುದ್ರಯ್ಯ, ಕನ್ನಡ ಗಿರೀಶ್,ತಾಲ್ಲೂಕು ಘಟಕದ ಅಧ್ಯಕ್ಷ ಕೆಂಬೂತಗೆರೆ ಮೋಹನ್, ಕಾರ್ಯಾಧ್ಯಕ್ಷ ಕಗ್ಗಲಿಪುರ ರಾಮಣ್ಣ, ಬದ್ರಿ, ಸೇರಿದಂತೆ ನೂರಾರು ಮುಖಂಡರು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT