ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕ ಕೇಸರಿ’ ಜಗನ್ನಾಥರಾವ್ ಜೋಶಿ

Last Updated 4 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾರತೀಯ ಜನಸಂಘ ಸ್ಥಾಪನೆಯಾದಾಗಿನಿಂದ, ಬಿಜೆಪಿ  ರಾಷ್ಟ್ರೀಯ  ಮಟ್ಟದಲ್ಲಿ ಬೆಳೆಯುವವರೆಗೆ ಶ್ರಮಿ­­ಸಿದ ಸಂಸದ ಜಗನ್ನಾಥರಾವ್ ಜೋಶಿ (1920–1991). 

ಅಪಾರ ಹಾಸ್ಯ ಪ್ರಜ್ಞೆ, ಅಧ್ಯಯನ, ಹೋರಾಟದ ಮನೋಭಾವ, ಸಂಘಟನಾ ಶಕ್ತಿ ಮೇಳೈಸಿದ್ದ  ಜೋಶಿ  ಇಂದಿನ ಗದಗ ಜಿಲ್ಲೆಯ ನರಗುಂದ­ದಲ್ಲಿ ಜನಿಸಿದರು. ಪದವಿ ನಂತರ ಸಮಾಜ ಸೇವೆಗೆ ತಮ್ಮನ್ನು ಮೀಸಲಿರಿಸಿ­ಕೊಂಡು ಆರೆಸ್ಸೆಸ್‌ ಸೇರಿದರು. 1951­ರಲ್ಲಿ ಜನ­ಸಂಘದ ಕರ್ನಾಟಕದ ಸಂಘಟನಾ ಕಾರ್ಯ­ದರ್ಶಿ­ಯಾಗಿ ಮುಂದೆ ಭಾರ­ತೀಯ ಜನಸಂಘ ಆರಂಭ­ವಾದ ಮೇಲೆ ಅದರಲ್ಲಿ ವಿವಿಧ ಜವಾಬ್ದಾರಿ­ಗಳನ್ನು ನಿರ್ವಹಿಸಿ ಜನಸಂಘದ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷ­ರಾಗಿದ್ದರು. ಕರ್ನಾಟಕದಲ್ಲಿ ಜನ­ಸಂಘ ಮತ್ತು ಮುಂದೆ ಬಿಜೆಪಿ ಬೆಳೆಸು­ವುದರಲ್ಲಿ ­ಜೋಶಿ ಪಾತ್ರವಹಿಸಿದರು. 1981­ರಲ್ಲಿ ಬಿಜೆಪಿ ಉಪಾಧ್ಯಕ್ಷ­ರಾಗಿದ್ದರು.

ಕೊನೆ ತನಕ ಬ್ರಹ್ಮಚಾರಿಯಾಗಿ ಉಳಿದ ಇವರು ಹಿಂದುತ್ವದ ಪ್ರಬಲ ಪ್ರತಿಪಾದಕ­ರಾಗಿದ್ದರು. ಕರ್ನಾಟಕ­ದವರೇ ಆದ ಇವರು  ಮೊದಲ  ಮೂರು ಸಲ ಲೋಕ ಸಭೆಗೆ ಜನಸಂಘದ ಟಿಕೆಟ್‌­ನಿಂದ 1952, 1957, 1962ರಲ್ಲಿ ಕ್ರಮವಾಗಿ ಧಾರ­ವಾಡ ಉತ್ತರ, ಪುಣೆ ಮತ್ತು ಮರಳಿ ಧಾರವಾಡ ಉತ್ತರದಿಂದ ಸ್ಪರ್ಧಿಸಿ ಸೋತರು. ಮಧ್ಯ­ಪ್ರದೇಶದ ಭೋಪಾಲ್‌ ಮತ್ತು ಷಹಜಾಪುರ್‌­ದಿಂದ 4 ಮತ್ತು 5 ನೇ ಲೋಕಸಭೆಗೆ ಆಯ್ಕೆಯಾದ ಇವರು 1967 ಮತ್ತು 1971ರಲ್ಲಿ ಗೆಲುವಿನ ರುಚಿ ಕಂಡರು. 1978–1984ರವೆರೆಗೆ ದೆಹಲಿಯಿಂದ ರಾಜ್ಯ ಸಭೆಗೆ ಪ್ರವೇಶ.

ಗೋವಾ ವಿಮೋಚನೆಗೆ ಹೋರಾಟ ನಡೆಸಿದ ಜಗನ್ನಾಥರಾವ್ ಅವರು 1955ರ ಜೂನ್‌ 25­ರಂದು ಸತ್ಯಾಗ್ರಹಿಗಳ ತಂಡದೊಡನೆ ಗೋವಾ ಪ್ರವೇಶಿಸಿ ಬಂಧನಕ್ಕೆ ಒಳಗಾಗಿ, ಪೋರ್ಚುಗೀಸರಿಂದ ಚಿತ್ರಹಿಂಸೆ ಅನುಭವಿಸಿದರು. ಕರ್ನಾಟಕದವರೇ ಆದರೂ ಯಾವಾಗಲೂ ರಾಜ್ಯದ ಹೊರಗಿನಿಂದಲೇ ಗೆದ್ದು ಸಂಸತ್ ಪ್ರವೇಶಿಸಿದ್ದು ಇವರ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT