ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ’

Last Updated 13 ಡಿಸೆಂಬರ್ 2013, 5:31 IST
ಅಕ್ಷರ ಗಾತ್ರ

ತಾಳಿಕೋಟೆ: ಮಕ್ಕಳಲ್ಲಿರುವ ಕಲಾ ಪ್ರತಿಭೆಗಳ ಅನಾ ವರಣಕ್ಕೆ ಪ್ರತಿಭಾ ಕಾರಂಜಿಗಳಂತಹ ಕಾರ್ಯಕ್ರಮ ಗಳು ಸೂಕ್ತವಾಗಿವೆ ಎಂದು  ಕರ್ನಾಟಕ ಬ್ಯಾಂಕ್‌ ವ್ಯವಸ್ಥಾಪಕ ಈರಣ್ಣ ನಾಗರಾಳ ಹೇಳಿದರು. ಶೆಳ್ಳಗಿ ಪ್ರಾಥಮಿಕ ಶಾಲೆಯಲ್ಲಿ ಕೊಡಗಾನೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮಗುವು ವಿಶಿಷ್ಟವಾಗಿದ್ದು ಅವುಗಳಲ್ಲಿನ ಪ್ರತಿಭೆಗಳನ್ನು ಗುರುತಿಸುವ, ಅಗತ್ಯ ಪ್ರೋತ್ಸಾಹ ಒದಗಿಸುವ ಕಾರ್ಯ ಶಿಕ್ಷಕರು ಮತ್ತು ಪಾಲಕರಿಂದಾ ಗಬೇಕು.  ಸರ್ಕಾರಿ ನೌಕರಿಯೊಂದೇ ಗುರಿಯಾಗದೆ ವಿವಿಧ ಕ್ಷೇತ್ರಗಳಲ್ಲಿ ಬೆಳಗುವ ಅವಕಾಶ ದೊರಕಿಸಿ ಕೊಡಬೇಕು ಎಂದರು.

ಮುಖ್ಯ ಅತಿಥಿ ಎ.ಪಿ.ಎಂ.ಸಿ. ಸದಸ್ಯ ಕೆ.ಕೆ.ನಾಡಗೌಡ ಮಾತನಾಡಿ, ಮಕ್ಕಳು ಈ ದೇಶದ ಭಾವಿ ನಾಗರಿಕರಾಗಿದ್ದು, ಅವರನ್ನು ಸಮಾಜ ಸೇವೆಗೆ ಮತ್ತು ರಾಷ್ಟ್ರ ಸೇವೆಗೆ ಅಣಿಗೊಳಿಸುವಂತಹ ಶಿಕ್ಷಣ ದೊರೆಯಬೇಕು ಎಂದು ಹೇಳಿದರು. ಕೊಡಗಾನೂರ ಕ್ಲಸ್ಟರ್‌ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು  ಭಾಗ ವಹಿಸಿದ್ದರು. ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ನೀಲಮ್ಮ ಹಚಡದ ಉದ್ಘಾಟಿಸಿದರು.

  ಎಸ್‌ಡಿಎಂಸಿ ಅಧ್ಯಕ್ಷ ಬಸನಗೌಡ ಚೌದ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ದತ್ತಣ್ಣ ದೇಸಾಯಿ, ಪೀರಾಪುರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ  ಆರ್.ಬಿ. ದಮ್ಮೂರಮಠ, ಸಿಆರ್‌ಪಿ ಪಿ.ಎ.ಮುಲ್ಲಾ, ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಹೊಳಿ, ಉರ್ದು ಸಿಆರ್‌ಪಿ ಎ.ಜೆ. ಆರೀಫ್‌ ಕೆಂಭಾವಿ, ಮುಖ್ಯ ಶಿಕ್ಷಕರಾದ ಎಂ.ಎಂ.ಹರಿಜನ, ಎಂ.ಎಸ್‌. ಹುಲ್ಲೂರ, ಐ.ಟಿ.ಥಬ್ಬಣ್ಣವರ, ಜಿ.ಕೆ.ಮಣೂರ, ಈರಣ್ಣ ಬೆಣ್ಣೂರ, ಎಂ.ಜೆ.ಢಕಣಿ, ಎಂ.ವಿ.ಕೋರ ವಾರ,  ಟಿ. ಎಸ್. ಲಮಾಣಿ, ರಫೀಕ್ ಅವಟಿ, ಟಿಜಿಟಿ ಶಿಕ್ಷಕಿ ಶಕುಂತಲಾ ಬಿರಾದಾರ,  ಮಹಾಲಕ್ಷ್ಮೀ ತಾಳ ಪಲ್ಲೆ ಇದ್ದರು. ಕೆ.ಕೆ.ಅಸ್ಕಿ ಸ್ವಾಗತಿಸಿದರು. ಎಮ್.ಎಫ್. ಅವಟಿ ನಿರೂಪಿಸಿದರು. ಎ.ಎಚ್.ನದಾಫ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT