ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೀಳರಿಮೆ ತೊರೆದು ಸಾಧನೆ ಮಾಡಿ’

ಅಂಗವಿಕಲರ ಕ್ರೀಡಾಕೂಟದಲ್ಲಿ ಶಾಸಕ ಲಮಾಣಿ ಸಲಹೆ
Last Updated 20 ಡಿಸೆಂಬರ್ 2013, 5:56 IST
ಅಕ್ಷರ ಗಾತ್ರ

ಹಾವೇರಿ: ಅಂಗವಿಕಲರು ತಮ್ಮಲ್ಲಿರುವ ಕೀಳರಿಮೆ ತೊರೆದು ಉನ್ನತ ಮಟ್ಟದ ಸಾಧನೆ ಮಾಡಲು ಮುಂದೆ ಬರಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲಾ ಅಂಗವಿಕಲರ ಸಂಘ, ಹಾವೇರಿ ಜಿಲ್ಲಾ ಅಂಗವಿಕಲರ ವಿಶೇಷ ಶಾಲಾ ನೌಕರರ ಸಂಘ ಹಾಗೂ ಎಸ್.ಜೆ.ಎಂ. ದೈಹಿಕ ಅಂಗವಿಕಲರ ವಸತಿಯುತ ಪ್ರೌಢಶಾಲೆ ಆಶ್ರಯದಲ್ಲಿ ಗುರುವಾರ ನಗರದ ಹೊಸಮಠದಲ್ಲಿ ನಡೆದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಬಹಳಷ್ಟು ಅಂಗವಿಕಲರು ಕ್ರೀಡೆ, ಸಂಗೀತ, ನೃತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಆದರೂ, ಕೆಲ ಅಂಗವಿಕಲರು ತಮ್ಮಲ್ಲಿರುವ  ನ್ಯೂನತೆ ಕೀಳರಿಮೆ ಬೆಳೆಸಿಕೊಂಡು ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಅಂತವರು ಸಹ ತಾವು ಕೂಡಾ ಇತರರಿಗೆ ಏನೂ ಕಡಿಮೆ ಇಲ್ಲವೆನ್ನುವಂತೆ ಸಾಧಕರಾಗಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿಯೇ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಮಾಸಾಶನ, ಉಚಿತ ಬಸ್‌ಪಾಸ್ ಹಾಗೂ ದ್ವಿಚಕ್ರವಾಹನ ವಿತರಣೆ, ಸಾಲ ಸೌಲಭ್ಯದಂತಹ ಯೋಜನೆ ಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ಮಾಡಿದರು.

ಅಂಗವಿಕಲರ ಸಮಸ್ಯೆಗೆ ಸ್ಪಂದಿಸಲು ಸರ್ಕಾರವು ಅಂಗವಿಕಲ ವ್ಯಕ್ತಿಯನ್ನು ಆಯುಕ್ತರನ್ನಾಗಿ ಮಾಡಿದೆ. ಸೌಲಭ್ಯ ನೀಡಲು ಯಾವುದೇ ಅಧಿಕಾರಿಗಳು ತೊಂದರೆ ನೀಡಿದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಸ್.ಎಸ್.ಅಡಿಗ ಮಾತನಾಡಿ, ವೈಕಲ್ಯತೆ ಶಾಪವಲ್ಲ ಅದನ್ನು ಮೆಟ್ಟಿನಿಲ್ಲಬೇಕು. ಸರ್ಕಾರ ಅಂಗವಿಕಲರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಕ್ರೀಡೆ ಪ್ರತಿಯೊಬ್ಬರ ಮನುಷ್ಯನ ಸ್ವಾಸ್ಥಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
೧೯೮೧ರಿಂದ ಡಿಸೆಂಬರ್ ೩೧ರಂದು ಅಂಗವಿಕಲರ ದಿನಾಚರಣೆ ಆಚರಿಸಲಾಗುತ್ತಿತ್ತು. ಆದರೆ ೧೯೯೧ ರಿಂದ ಡಿಸೆಂಬರ್‌ನಲ್ಲಿ   ಅಂಗವಿಕಲರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಮಾತನಾಡಿ, ಸಮಾಜದಲ್ಲಿ ಅಂಗವಿಕಲರನ್ನು ಗೌರವದಿಂದ ಕಾಣುವಂತಾಗಬೇಕು ಹಾಗೂ ಅಂಗವಿಕಲರು ಜೀವನದಲ್ಲಿ ಹತಾಶರಾಗದೇ, ಜೀವನವನ್ನು ಒಂದು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ  ಪುಟ್ಟಪ್ಪ ಜಲದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ  ಅಂಗವಿಕಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ  ಅಲ್ಲಾಭಕ್ಷ  ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT