ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಜ್ರಿವಾಲ್‌ರಿಂದ ಕಲಿಯುವುದಿದೆ’

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆಯಲ್ಲಿ ಕುಳಿತು ರಾಜಕಾರಣಿಗಳನ್ನು ಟೀಕಿಸು­ವವರು ತಾವೇ ರಾಜಕೀಯ ಪಕ್ಷ ಸ್ಥಾಪಿಸಿ, ಚುನಾವಣೆ­ಯಲ್ಲಿ ಗೆದ್ದು ತಮ್ಮ ಇಚ್ಛೆಯಂತೆ ಬದಲಾವಣೆ ತರುವುದನ್ನು  ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಂದ ಕಲಿಯಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಹೇಳಿದರು.

ಸೋಮವಾರ ಪತ್ರಕರ್ತರ ಜೊತೆ ಮಾತನಾಡಿ, ‘ಕಾನೂ­ನು­ಗಳನ್ನು ಟೀಕೆ ಮಾಡುವವರು ರಾಜಕೀಯ ಪಕ್ಷ ಸ್ಥಾಪನೆ ಮತ್ತು ಚುನಾವಣೆಗೆ ನಿಂತು ಗೆಲ್ಲುವ ಕಷ್ಟವನ್ನೂ ಅರಿಯ­ಬೇಕಾ­ಗುತ್ತದೆ’ ಎಂದರು.

‘ಹಿಂದೆ ಬೀದಿ ಹೋರಾಟದ ಮೂಲಕ ಕಾನೂನಿನಲ್ಲಿ ಬದಲಾವಣೆ ತರಲು ಮುಂದಾ­ಗಿದ್ದವರಿಗೆ ಕೊನೆಗೂ ಅರಿವಾ­ಗಿದೆ. ಶಾಸನಸಭೆಯ ಮೂಲ­ಕವೇ ಕಾನೂನು ರಚಿಸಬೇಕು ಎಂಬುದು ಅವರಿಗೆ ಗೊತ್ತಾ­ಗಿದೆ. ಅದಕ್ಕಾಗಿ ರಾಜಕೀಯ ಪಕ್ಷ ಸ್ಥಾಪಿಸಿ, ಮುಂದುವರಿ­ಯುವ ಅವರ ನಿರ್ಧಾರ ಸ್ವಾಗತಿಸುತ್ತೇನೆ’ ಎಂದು ಹೇಳಿದರು.

‘ಸಂಪುಟ ಸೇರುವ ಬಯಕೆ ಭಿನ್ನಮತವಲ್ಲ’:  ಕಾಂಗ್ರೆಸ್‌ ನಲ್ಲಿ ಸಚಿವರಾಗುವ ಅರ್ಹತೆಯುಳ್ಳ ಹಿರಿಯ ಶಾಸಕರು ಸಾಕಷ್ಟು ಮಂದಿ ಇದ್ದಾರೆ. ಅವರು  ಸಂಪುಟ ಸೇರಲು ಬಯಸಿ­ದರೆ ತಪ್ಪಲ್ಲ. ಅದನ್ನು ಭಿನ್ನಮತ ಎನ್ನಲಾಗದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‌‘ಕೆಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತೆ ಬಿಜೆಪಿಗೆ ಹೋದರೆ ಕಾಂಗ್ರೆಸ್‌ಗೆ ಇನ್ನೂ ಲಾಭ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT