ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಕ್ಕೊ ಲಾಭದಾಯಕ ಬೆಳೆ’

Last Updated 19 ಡಿಸೆಂಬರ್ 2013, 10:18 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ:  ಪ್ರಪಂಚದ ಒಟ್ಟು 24 ದೇಶಗಳಲ್ಲಿ ಕೊಕ್ಕೋ ಬೆಳೆಯನ್ನು ಬೆಳೆಯಲಾಗುತ್ತಿದೆ. ಜಾಗತಿಕ ಮಾರು­ಕಟ್ಟೆಯಲ್ಲಿ ಕೊಕ್ಕೊಗೆ ಬೇಡಿಕೆ ಇದ್ದರೂ ನಿಗದಿತ ಪ್ರಮಾಣದಲ್ಲಿ ಅದರ ಉತ್ಪಾದನೆಯಾಗುತ್ತಿಲ್ಲ. ಕೊಕ್ಕೊ ಇಂದು ಅದಿಕ ಲಾಭದಾಯಕವಾದ ಬೆಳೆಯಾಗಿದೆ ಎಂದು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ಇದರ ವಿಟ್ಲ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಕೆ.ಎಸ್.ಆನಂದ ನುಡಿದರು.

ಸಿಪಿಸಿಆರ್‌ಐ ಯ ಕಿದು ಕೃಷಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ  ನಡೆದ ಎರಡು ದಿನದ ಕೃಷಿ ಮೇಳದಲ್ಲಿ ಬುಧವಾರ ನಡೆದ ಕೊಕ್ಕೋ ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನಗಳ ಕುರಿತ ವಿಚಾರಸಂಕಿರಣದಲ್ಲಿ ಅವರು ಪ್ರಧಾನಭಾಷಣ ಮಾಡಿದರು.

ಅಬಾಲವೃದ್ಧರೂ ಇಷ್ಟಪಡುವ ಚಾಕಲೇಟ್ ತಯಾರಿಕೆಗೆ ಕೊಕ್ಕೊ ಅತ್ಯಗತ್ಯ. ಇಂದು ಜಾಗತಿಕ ಮಾರು­ಕಟ್ಟೆ­ಯಲ್ಲಿ ಇದಕ್ಕೆ ಬೇಡಿಕೆ ಅ ಕವಾ­ಗಿದ್ದರೂ ಪೂರೈಕೆ ಕಡಿಮೆಯಾಗಿದೆ. ಹಾಗಾಗಿ ಆರ್ಥಿಕ ದೃಷ್ಟಿಯಿಂದಲೂ ಕೊಕ್ಕೋ ಲಾಭದಾಯಕ ಬೆಳೆಯಾ­ಗಿದೆ ಎಂದು ಕ್ಯಾಂಪ್ಕೊ ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಎಚ್.ಎಂ.­ಕೃಷ್ಣ­ಕುಮಾರ್ ವಿಚಾರ­ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಅವರು ಕೃಷಿ ಮತ್ತು ಋಷಿ ಪರಂಪರೆಯ ನಮ್ಮ ದೇಶದಲ್ಲಿ ಕೃಷಿಕರು ಎಂದಿಗೂ ಲಾಭಕ್ಕಾಗಿ ಬೆಳೆ ಬೆಳೆಸಿಲ್ಲ. ಆಧುನಿಕ ಜೀವನ ಪದ್ಧತಿಯಲ್ಲಾದ ಮಹತ್ತರ ಬದಲಾವಣೆಯಿಂದ ನಲುಗುತ್ತಿರುವ ನಮ್ಮ ಕೃಷಿ ಪರಂಪರೆಯನ್ನು ಉಳಿಸಬೇಕಾದುದು ಎಲ್ಲರ ಕರ್ತವ್ಯ ಎಂದರು.

ಸಿಪಿಸಿಆರ್‌ಐ ಕಾಸರಗೋಡು ಕೇಂದ್ರದ ಸಮಾಜವಿಜ್ಞಾನ ವಿಭಾಗ ಮುಖ್ಯಸ್ಥ ಡಾ. ಕೆ.ಮುರಳೀಧರನ್, ತಾ.ಪಂ. ಸದಸ್ಯೆ ಪುಲಸ್ಯ ರೈ, ಪುತ್ತೂರು ಎ.ಪಿ.ಎಂ.ಸಿ. ಸದಸ್ಯ ಸೀತಾರಾಮ ಗೌಡ, ಬಿಳಿನೆಲೆ ಸಹಕಾರಿ ಸಂಘದ ಅಧ್ಯಕ್ಷ್ಷ ಬಾಲಕೃಷ್ಣ ಗೌಡ ಅತಿಥಿಗಳಾಗಿ ಶುಭಹಾರೈಸಿದರು.

ಪುರಂದರ ನಿರೂಪಿಸಿದರು. ಕೃಷಿ ವಿಜ್ಞಾನಿ ಡಾ.ಡಿ.ಜಗನ್ನಾಥನ್ ವಂದಿಸಿದರು. ಕೊಕ್ಕೊ ಬೆಳೆ ಕುರಿತು ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ನಡೆಯಿತು.

ಕೃಷಿ ವಿಜ್ಞಾನಿ ಡಾ.ನಾಗರಾಜ ಎನ್. ಆರ್.ಸ್ವಾಗತಿಸಿ, ಸಿಪಿಸಿಆರ್‌ಐ ವಿಟ್ಲ ಕೇಂದ್ರದ ಮುಖ್ಯಸ್ಥ ಡಾ.ಕೆ.ಎಸ್.ಆನಂದ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT