ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೀಡೆಗೂ ಸಮಾನ ಪ್ರಾಧಾನ್ಯ ನೀಡಿ’

Last Updated 10 ಡಿಸೆಂಬರ್ 2013, 10:07 IST
ಅಕ್ಷರ ಗಾತ್ರ

ವಿಜಯಪುರ: ಶಿಕ್ಷಣದೊಂದಿಗೆ ಕ್ರೀಡೆ ಗೂ ಪ್ರಾಧಾನ್ಯತೆ ನೀಡಿದಾಗ ಮಕ್ಕಳಲ್ಲಿ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ಹಿರಿಯ ಗಾಂಧಿವಾದಿ ಎನ್.ಎಸ್.ಸುಬ್ಬರಾವ್ ತಿಳಿಸಿದ್ದಾಗಿ ಸ್ಪಂದನ ಯುವಜನ ಸೇವಾ ಸಂಘದ ಕಾರ್ಯದರ್ಶಿ ವಿ.ಪ್ರಶಾಂತ್‌ ತಿಳಿಸಿದರು.

ಪಟ್ಟಣದ ಸ್ಪಂದನ ಯುವಜನ ಸೇವಾ ಸಂಘದ ವತಿಯಿಂದ ಮಹಾ ರಾಷ್ಟ್ರದ ವಾರ್ದ ಜಿಲ್ಲಾ ಕ್ರೀಡಾಂಗಣ ದಲ್ಲಿ ಏರ್ಪಡಿಸಿದ್ದ ೧೪ ನೇ ಅಂತರ ರಾಷ್ಟ್ರೀಯ ಮಕ್ಕಳ ಶಿಬಿರವನ್ನು ಉದ್ಘಾ ಟಿಸಿ ಅವರು ಮಾತನಾಡಿದ್ದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಾರ್ದಾ ಸಂಸದ ದಾದಾಜೀ ಮೇಗೆ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಅವಶ್ಯಕವಾದ ಮಾನ ವೀಯ ಮೌಲ್ಯಗಳನ್ನು ಬೆಳೆಸಲು ಇಂ ತಹ ಶಿಬಿರಗಳು ಸಹಕಾರಿಯಾ ಗು ತ್ತವೆ ಎಂದು ತಿಳಿಸಿದ್ದು, ಜೀವ ಜಂತು ವಿಜ್ಞಾನಿ ಡಾ.ಆಸೀಸ್ ಗುರುಸ್ವಾಮಿ, ಮಹಾರಾಷ್ಟ್ರ ರಾಜ್ಯದ ಪಾಲಕ ಮಂತ್ರಿ, ಎನ್.ರಾಜೇಂದ್ರ ಜೀ ಮೂಕ್, ವಿಭಾಷ್ ಸಂಚಾರ್ ವಿಕಾಸ್, ಮಹಾ ರಾಷ್ಟ್ರದ ಸುರೇಶ್ ಭೂಷಣ್ ದೇಶ್‌ ಮುಕ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿ ದ್ದುದಾಗಿ ತಿಳಿಸಿದರು.

ಶಿಬಿರದಲ್ಲಿ ದೇಶದ ೧೩ ರಾಜ್ಯ ಗಳಿಂದ ೪೧೦ ಮಕ್ಕಳು ಹಾಗೂ ವಾರ್ದಾ ಜಿಲ್ಲೆಯಿಂದ ೫೦೦ ಮಕ್ಕಳು ಭಾಗವಹಿಸಿದ್ದರು.  

ಪ್ರಗತಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ರೋಟರಿ, ಮಾಯಾ ಆಂಗ್ಲ ಶಾಲೆ, ಎವರ್‌ಗ್ರೀನ್, ಗ್ಲೋಬಲ್ ರೆಡಿಸೆನ್ಸಿಯಲ್, ನಂದಿನಿ ವಿದ್ಯಾನಿಕೇತನ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಬಿರದಲ್ಲಿ ಧ್ವಜಾರೋಹಣ, ದೇಶ ಭಕ್ತಿ ಗೀತೆಗಳ ಗಾಯನ, ಚಿತ್ರಕಲೆ. ಶ್ರಮದಾನ ಪ್ರಥಮ ಚಿಕಿತ್ಸೆ, ಮದ ರಂಗಿ, ನೀರಿನ ಸಂರಕ್ಷಣೆ, ಶಾಂತಿ ರಾಲಿ, ಭಾಷಾ ವಿನಿಮಯ  ಕಾರ್ಯಕ್ರಮ ನಡೆದವು. ಬಾಬು ಕುಟ್ಟಿ, ಗಾಂಧಿ, ವಿನೋಭಾ ಭಾವೆ ಆಶ್ರಮ, ವಸ್ತು ಸಂಗ್ರಹಾಲಯ, ಲಕ್ಷೀ ದೇವಾಲಯ, ಬೇರ್ ಅಭಯಾ ರಣ್ಯಗಳಿಗೆ ಪ್ರವಾಸ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT