ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾದಿ ಭಂಡಾರದ ಧ್ವಜ ಬಳಕೆ ಕಡ್ಡಾಯ’

Last Updated 12 ಸೆಪ್ಟೆಂಬರ್ 2013, 8:21 IST
ಅಕ್ಷರ ಗಾತ್ರ

ಹುಮನಾಬಾದ್‌: ಹೈ–ಕ ವಿಮೋಚನಾ ದಿನಾಚರಣೆಯ ದಿನದಂದು ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಖಾದಿ ಭಂಡಾರದಲ್ಲಿ ಖರೀದಿಸಲಾದ ರಾಷ್ಟ್ರ ಧ್ವಜಗಳನ್ನೇ ಹಾರಿಸಬೇಕು ಎಂದು ಬಿ.ಇ.ಒ ಬಾಬುಮಿಯ್ಯ ತಿಳಿಸಿದರು.

ಸ್ಥಳೀಯ ಪ್ರಾಢಶಾಲೆ ಮುಖ್ಯಗುರು ಮತ್ತು ದೈಹಿಕ ಶಿಕ್ಷಕರಿಗಾಗಿ ಬುಧವಾರ ಕರೆದಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಮಿನಿವಿಧಾನಸೌಧದಲ್ಲಿ ನಡೆಯುವ ರಾಷ್ಟ್ರ ಧ್ವಜಾರೋಹಣ ಮತ್ತು ಬಹಿರಂಗ ಸಭೆ ಸಂದರ್ಭದಲ್ಲಿ ಮಕ್ಕಳು ಸದ್ದು ಮಾಡದಂತೆ ಆಯಾ ಶಾಲೆಯ 25ಮಕ್ಕಳಿಗೆ ಒಬ್ಬರಂತೆ ಶಿಷಕರಿಗೆ ಜವಾಬ್ದಾರಿ ವಹಿಸಿಕೊಡುವಂತೆ ಮುಖ್ಯಗುರುಗಳಿಗೆ ಸೂಚಿಸಿದರು.

ದೈಹಿಕ ಶಿಕ್ಷಣಾಧಿಕಾರಿ ರಾಮಚಂದ್ರ ಡಿ.ಕುಶೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಪ್ಪ ದಂಡೆ, ಸಿ.,ಆರ್.ಪಿ ಅರುಣಾದೇವಿ, ಕನ್ಯಾ ಪ್ರೌಢಶಾಲೆ ಮುಖ್ಯಗುರು ಡಿ.ಬಿ ಜಾಧವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT