ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಣೇಶೋತ್ಸವ ಪರಂಪರೆಯ ಪ್ರತೀಕ’

Last Updated 20 ಸೆಪ್ಟೆಂಬರ್ 2013, 7:07 IST
ಅಕ್ಷರ ಗಾತ್ರ

ಸವದತ್ತಿ: ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಗಣೇಶೋತ್ಸವ ಸಮಾರಂಭವನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಶಾಂತಿಯುತವಾಗಿ ಸಂಭ್ರಮ­ದಿಂದ ಆಚರಿಸುವುದು ನಮ್ಮೆಲ್ಲರ ಆದ್ಯ ಕತರ್ವ್ಯ­ವಾಗಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ಬುಧುವಾರ ತಾಲೂ್ಲಕು ಆಡಳಿತ ಆಯೋಜಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ಬಹುಮಾನ ವಿತರಣಾ ಸಮಾರಂ ಭದಲಿ್ಲ ಮಾತನಾಡಿದ ಅವರು, ಎಲ್ಲ ಕಾರ್ಯಗಳಿಗೆ ಮುನ್ನ ಗಣೇಶನನ್ನು ಪ್ರಥಮ­ವಾಗಿ  ಆರಾಧಿಸುವ ನಾವು ಆತನ ಆಚರಣೆ ವಿಧಿವ­ತ್ತಾಗಿ ಆಚರಿಸುವ ಮೂಲಕ, ಭಾವಗಳ ಸಾಮರಸ್ಯ ಸಾರಬೇಕಾಗಿದೆ ಎಂದರು.

ವಕೀಲ ಬಿ.ವಿ. ಮಲಗೌಡರ ಮಾತನಾಡಿ ಸತತ ಬರಗಾಲದಿಂದ ತತ್ತರಿಸುತ್ತಿರುವ ಸವದತ್ತಿ­ಯಲ್ಲಿ ಅದೂ್ದರಿ ಗಣೆಶೋತ್ಸವ ನಡೆದಿದೆ. ಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿಯ ನಾಡಾಗಲಿ ಎಂದರು.

ಮೂಲಿಮಠದ ಮಲಿ್ಲಕಾರ್ಜುನ ಸಾ್ವಮೀಜಿ ಮಾತನಾಡುತ್ತ, ಆಚರಣೆಗಳನ್ನು ಅನುಕರಣೆ­ಯಾಗದೆ. ಅದರ ಕುರಿತು ಅರಿತುಕೊಂಡು ಆಚರಿಸಿದಾಗ ಅರ್ಥ ಬರುವುದು.

ನಾಡಿನಲಿ್ಲ ಮಣ್ಣಿನ ಆರಾಧನೆಯೊಂದಿಗೆ, ಎಲ್ಲ ವರ್ಗದ ಆರಾಧಕನಾದ ಗಣಪತಿ
ಉತ್ಸವದ ಸಡಗರ ಅತ್ಯಂತ ಶ್ರೀಮಂತವಾಗಿದೆ ಎಂದರು. ಪುರಸಭೆ ಉಪಾಧ್ಯಕ್ಷ ಸುಭಾಸ ರಜಪೂತ, ಎಂ.ಟಿ ಶಿಗಿ್ಲ, ಮನೋಹರ ಶೆಟ್ಟರ್, ಶಿವಾನಂದ ಹೂಗಾರ, ಪಿ.ಎಸ್‌ ಐ ನಿಂಗನಗೌಡ
ಪಾಟೀಲ, ರಾಜು ಬದಾಮಿ ಮುಂತಾದವರು ಹಾಜರಿ­ದ್ದರು.

ಶಿವಾ ಗೆಳಯರ ಬಳಗ ಪ್ರಥಮ: ಗಣಪತಿ ಮೂರ್ತಿ ಪ್ರತಿಷಾ್ಠಪಿಸಿ ನಿತ್ಯ ಆರಾಧನೆ­ಯೊಂದಿಗೆ ಆಚರಸಿದ ಗಣೇಶ ಉತ್ಸವದ ಕೊನೆಯ ದಿನವಾದ ಬುಧವಾರ ಇಡೀ ನಗರದಲಿ್ಲ ಸಡಗರದ ಸಂಭ್ರಮದ ವಾತಾವರಣ ಇತು್ತ. ಉತ್ಸವದ ಅಂಗವಾಗಿ ತಾಲೂ್ಲಕು ಆಡಳಿತದಿಂದ ಕೊಡಮಾಡುವ ಬಹುಮಾನ­ವನ್ನು ವಿತರಿಸಲಾಯಿತು.

ಪ್ರಥಮ ಬಹುಮಾನ ಗುರ್ಲಹೊಸೂರಿನ ಶಿವಾ ಗೆಳೆಯರ ಬಳಗ, ಗಜಾನನ ಯುವಕ ಮಂಡಳ  (ದಿ್ವತೀಯ)ಕೆ್ಕ  ಬಹುಮಾನ ವಿತರಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT