ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟದ ಕಾಮಗಾರಿಗೆ ಆದ್ಯತೆ’

Last Updated 24 ಸೆಪ್ಟೆಂಬರ್ 2013, 5:51 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಗುತ್ತಿಗೆದಾರರು ಗುಣ­ಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರದ ಅಭಿವೃದ್ಧಿಗೆ ಸರ್ವ ಸದಸ್ಯರು ಸದಸ್ಯರು ಪಕ್ಷ ಬೇಧ ಮರೆತು ನಗರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.

ಇಲ್ಲಿನ ಅಶೋಕ ವೃತ್ತದಲ್ಲಿ ಸೋಮ­ವಾರ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಸಣ್ಣ, ಅತೀ ಸಣ್ಣ ಮತ್ತು ದೊಡ್ಡ ನಗರಗಳನ್ನು ಅಭಿವೃದ್ಧಿ ಪಡಿ­ಸುವ ಯೋಜನೆ ಅಡಿಯಲ್ಲಿ ನಗರಕ್ಕೆ ಬಿಡುಗಡೆಯಾದ ರೂ. 15 ಕೋಟಿ ಅನು­ದಾನದಲ್ಲಿ ನಗರಸಭೆಯ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇ­ರಿಸಿ ಅವರು ಮಾತನಾಡಿದರು.

‘ರೂ.12 ಕೋಟಿ ಕಾಂಕ್ರಿಟ್ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮತ್ತು ರೂ. 3 ಕೋಟಿ ಅನುದಾನ ಒಳಚರಂಡಿ ಕಾಮ­ಗಾರಿಗೆ ಬಿಡುಗಡೆಯಾಗಿದೆ. ನೂತನ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಗರಕ್ಕೆ ರೂ. 35 ಕೋಟಿ ಅನುದಾನ ಮಂಜೂರಾಗಿದೆ’ ಎಂದರು.

‘ನಗರದ ದೊಡ್ಡಕರೆಗೆ ರೂ. 20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ನಗ­ರದ ವಿವಿಧ ವಾರ್ಡ್ ಗಳಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಶೀಘ್ರವೇ ಕೈಗೆ­ತ್ತಿ­ಕೊಳ್ಳಲಾಗುವುದು’ ಎಂದು ತಿಳಿಸಿ­ದರು.

‘ಕೊಳಚೆ ಪ್ರದೇಶದ ಜನರು ನೆಮ್ಮದಿಯಿಂದ ಬದುಕಬೇಕು. ಚುನಾ­ವಣೆ ಸಮಯದಲ್ಲಿ ನೀಡಿದ್ದ ಭರವಸೆಗಳ ಈಡೇರಿಕೆಗೆ ಪ್ರಾಮಾಣಿ­ಕವಾಗಿ ಶ್ರಮಿ­ಸುತ್ತೇನೆ’ ಎಂದು ಶಾಸಕ ಕೋಳಿವಾಡ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಪಾರ್ವತೇಮ್ಮ ಹಲ್ಡೀಲ್ಡರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಿವಪ್ಪ ಮಣೇಗಾರ, ಸದ­ಸ್ಯರಾದ ಪುಟ್ಟಪ್ಪ ಮರಿಯಮ್ಮ­ನವರ, ರಾಘವೇಂದ್ರ ಚಿನ್ನಿಕಟ್ಟಿ, ಬಸವ­ರಾಜ ಹುಚಗೊಂಡರ, ವೀರಣ್ಣ ಮಾಕ-­ನೂರು, ಶಶಿಧರ ಬಸೆನಾಯಕ ಮತ್ತು ಪ್ರಕಾಶ ಜೈನ, ಕೆ.ಡಿ.ಸಾವುಕಾರ ಉಪಸ್ಥಿ­ತರಿದ್ದರು. ನಗ­ರ­ಸಭೆ ಎಂಜಿನಿ­ಯರ್‌ ಬಿ.ಎಸ್‌.­ಪಾಟೀಲ ಪ್ರಾಸ್ತಾ­ವಿಕವಾಗಿ ಮಾತನಾ­ಡಿದರು. ಜಿ.ಜಿ.­ಕಾಟಿ ರಮ ನಿರೂಪಿಸಿ­ದರು. ನಂದೆಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT