ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಂಥಗಳಿಂದ ಜ್ಞಾನದ ಹರವು ಹೆಚ್ಚಳ’

Last Updated 24 ಸೆಪ್ಟೆಂಬರ್ 2013, 20:06 IST
ಅಕ್ಷರ ಗಾತ್ರ

ನೆಲಮಂಗಲ: ಜ್ಞಾನದ ಹರವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು. ಅದಕ್ಕೆ ಗ್ರಂಥಗಳು ಸಹಕಾರಿಯಾಗಿವೆ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ರೂಪೆಶ್ ಕುಮಾರ್ ಅಭಿಪ್ರಾಯಪಟ್ಟರು.

ಸಿದ್ಧಗಂಗಾ ಪದವಿ ಕಾಲೇಜು  ಪ್ರಸಕ್ತ ಸಂದಭರ್ದಲ್ಲಿ ‘ಗ್ರಂಥಾಲಯ ಬದಲಾವಣೆ ಆಯಾಮಗಳು’ ಕುರಿತು ಏಪರ್ಡಿಸಿದ್ದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಂಥಪಾಲಕರು ಓದುಗರ ನಾಡಿಮಿಡಿತಗಳನ್ನು ಹಿಡಿದು ಅಧ್ಯಯನಕ್ಕೆ ಸಹಕಾರಿಯಾಗಿ ಮಾಹಿತಿ ನೀಡುತ್ತಾರೆ. ಅಂತರ್ಜಾಲ, ಮಾಹಿತಿ ತಂತ್ರಜ್ಞಾನಗಳು ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾರವು ಎಂದು ತಿಳಿಸಿದರು.

ಪ್ರಾಚಾರ್ಯ ಪ್ರೊ.ಸಿ.ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕ ಆಯಾಮಗಳನ್ನು ಪರಿಚಯಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು. ಮುಖ್ಯ ಗ್ರಂಥಪಾಲಕ ಎಂ.ಸಿ.ಪಾಟೀಲ್, ಆಧುನಿಕ ಸವಾಲುಗಳಿಗೆ ಸಜ್ಜಾಗುವ ಅಗತ್ಯ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಯೋಜನಾಧಿಕಾರಿ ಗಂಗರಾಜು ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರಕಾಶ್ ವಂದಿಸಿದರು. ಪ್ರೊ.ಪ್ರಸನ್ನಕುಮಾರ್, ಬಾಲಗಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT