ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ’

Last Updated 14 ಡಿಸೆಂಬರ್ 2013, 4:28 IST
ಅಕ್ಷರ ಗಾತ್ರ

ಶಿಗ್ಗಾವಿ: ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವದು ಅವಶ್ಯವಾಗಿದ್ದು, ಅದರಿಂದ ಮಕ್ಕಳ ಕಲಿಕೆಗೆ ಪ್ರೇರಕವಾಗಿದೆ ಎಂದು  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ ಹೇಳಿದರು.

ಪಟ್ಟಣದ ನಳಂದಾ ಪ್ರೌಢ ಶಾಲೆ ಆವರಣದಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಅವಕಾಶ ಕಲ್ಪಿಸುವ ಹೊಣೆ ಶಿಕ್ಷಕರ ಹಾಗೂ ಪಾಲಕರ ಮೇಲಿದೆ. ಅದರಿಂದ ಮಕ್ಕಳ ಕಲಿಕೆಯಲ್ಲಿ ಹೊಸತನ ಬರಲು ಸಾಧ್ಯವಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ತುಂಬಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಅವಶ್ಯವಾಗಿದ್ದು, ಅದರಿಂದ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ಅಲ್ಲದೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಜ್ಞಾನ ವಿಕಾಸದ ಮಾರ್ಗವಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಟಿ.ಇನಾಮತಿ, ಸಿ.ಎಸ್‌.ಪಾಟೀಲ, ಶಶಿಧರ ಹೊನ್ನಣ್ಣನವರ ಮಾತನಾಡಿದರು.

ಜಿಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಾ ಆಡಿನ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಿಂಗಪ್ಪ ಹರಜನ,  ಸದಸ್ಯರಾದ ತಿಪ್ಪಣ್ಣ ಸಾತಣ್ಣವರ, ಪರಿದಾಬಾನು ಶೇಖಸನದಿ, ಶಾಂತಮ್ಮಾ ಬೊಮ್ಮನಹಳ್ಳಿ, ನಳಂದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಪಿ.ಆರ್‌.ಪಾಟೀಲ, ನಳಂದಾ ಶಿಕ್ಷಣ ಸಂಸ್ಥೆ ಸದಸ್ಯರಾದ ಎಫ್‌.ಸಿ. ಪಾಟೀಲ,ಪ್ರಕಾಶ ಹಿರೇಮಠ,  ಕ್ಷೇತ್ರಶಿಕ್ಷಣಾಧಿಕಾರಿ ಎಸ್‌.ಎಲ್‌.ಭಜಂತ್ರಿ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ, ಅಕ್ಷರ ದಾಸೋಹ ಅಧಿಕಾರಿ ರವಿ ಶೆಟ್ಟೆಪ್ಪನವರ, ಎಂ.ಎಚ್‌.ಹೊಂಗಲ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್‌.ಪಟ್ಟಣಶೆಟ್ಟಿ, ರವಿ ದುಂದೂರ, ಸಿ.ಎನ್‌.ಕಲಕೋಟಿ ಮತ್ತಿತರರು ಉಪಸ್ಥಿತರಿದ್ದರು.

ಹರ್ಷಾರಾಣಿ ಸಂಗಡಿಗರು ಪ್ರಾರ್ಥಿಸಿದರು. ಎಂ.ಬಿ.ಹಳೇಮನಿ ಸ್ವಾಗತಿಸಿದರು. ಎಸ್‌.ಆರ್‌.ತುಪ್ಪದ ನಿರೂಪಿಸಿದರು. ಎಚ್‌.ಐ.ಹಬಸಿ ವಂದಿಸಿದರು. ನಂತರ ನಡೆದ ತಾಲ್ಲೂಕಿನ ವಿವಿಧ ಶಾಲೆಗಳಿಂದ ಬಂದಿರುವ ಮಕ್ಕಳ ಸಾಂಸ್ಕೃತಿ ಕಾರ್ಯಕ್ರಮಗಳು ಜನಮನ ರಂಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT