ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಮೂ ಕನ್ನಡಿಗರ ಜಂಗಮ ವಿಶ್ವಕೋಶ’

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಶೋಧಕ ಚಿದಾನಂದ ಮೂರ್ತಿ ಅವರು ಕನ್ನಡ ಮತ್ತು ಕನ್ನಡಿ­ಗರ ಕುರಿತು ಇರುವ ಜಂಗಮ ವಿಶ್ವಕೋಶ­ವಾಗಿದ್ದಾರೆ’ ಎಂದು ಬೆಂಗಳೂರು ವಿಶ್ವ­ವಿದ್ಯಾಲಯದ ಅಂಬೇಡ್ಕರ್‌ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಹೇಳಿದರು.

ಕನ್ನಡ ಗೆಳೆಯರ ಬಳಗವು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶುಕ್ರವಾರ ಆಯೋಜಿ­ಸಿದ್ದ ಡಾ.ಎಂ.ಚಿದಾನಂದ ಮೂರ್ತಿ ಅವರ ‘ಕರ್ನಾಟಕದ    ಅಂದಿನ ಶ್ರೇಷ್ಠರ ಇಂದಿನ ವಂಶಸ್ಥರು’ ಕೃತಿ ಲೋಕಾ­ರ್ಪಣೆ ಸಮಾರಂಭದಲ್ಲಿ ಭಾಗ­ವಹಿಸಿ ಅವರು   ಮಾತನಾಡಿದರು.
‘ಇದೊಂದು ಕುತೂಹಲಕಾರಿ ಕೃತಿ­ಯಾಗಿದೆ. ಈ ಕೃತಿಯ ಓದಿನಿಂದ ಹಿಂದಿನ ಕವಿ, ಅರಸರು ಹೃದಯಕ್ಕೆ ಹತ್ತಿರ­ವಾಗು­ತ್ತಾರೆ ಎಂಬ ಮಾತು ಉತ್ರೇಕ್ಷೆ­ಯಾಗುವು­ದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಚಿದಾನಂದ ಮೂರ್ತಿ ಅವರು ಮೈಸೂ­ರಿ­ನಿಂದ ನೇಪಾಳದವರೆಗೆ ಪಯ­ಣಿಸಿ ಎಲ್ಲ ಮಾಹಿತಿಯನ್ನು ಒದಗಿಸಿ­ದ್ದಾರೆ. ಕೃತಿ 10ನೇ ಶತಮಾನದ ಇತಿ­ಹಾಸಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದರು.

ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ರಾ.ನಂ.ಚಂದ್ರಶೇಖರ ಮಾತನಾಡಿ. ‘­ ತಿರುವಳ್ಳುವರ್‌, ತೆಲುಗು ಅವರಿಗೆ ವೇಮನ, ಮರಾಠರಿಗೆ ಶಿವಾಜಿ ಸಾಂಸ್ಕೃ­ತಿಕ ನಾಯಕರಾಗಿದ್ದಾರೆ. ಆದರೆ, ಕನ್ನ­ಡಕ್ಕೆ ಇದುವರೆಗೂ ಅಂತಹ ಸಾಂಸ್ಕೃತಿಕ ನಾಯಕರೇ ಇಲ್ಲದಂತಾಗಿದೆ’ ಎಂದು ವಿಷಾದಿಸಿದರು. ‘ಕನ್ನಡಕ್ಕೆ ಬಸವಣ್ಣ ಸಾಂಸ್ಕೃತಿಕ ನಾಯ­ಕ­ನಾಗಲು ಸೂಕ್ತರಾಗಿ­ದ್ದಾರೆ. ಆದರೆ, ಅವ­ರನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದರು.

ಸಂಶೋಧಕ ಚಿದಾನಂದ ಮೂರ್ತಿ ಮಾತನಾಡಿ, ‘ಪಂಪ ರನ್ನರಂತಹ ಮಹಾನ್‌ ಕವಿಗಳಿಂದ ಕನ್ನಡವು ಇಂದು ಶಾಸ್ತ್ರೀಯ ಭಾಷೆಯಾಗಿದೆ. ಕನ್ನಡ ಭಾಷೆ­ಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ವರ್ಡ್ಸ್‌ವರ್ತ್‌ ಮನೆಗೆ ಹೋದಾಗ ನನಗೆ ಈ ಸಂಶೋಧನೆ ಕೈಗೊಳ್ಳಲು ಪ್ರೇರಣೆ ದೊರೆಯಿತು. ಮುಂದೆ ಶ್ರೀಲಂಕಾದಲ್ಲಿ ಕ್ಷೇತ್ರ ಕಾರ್ಯವನ್ನು ಕೈಗೊಂಡು ಸಂಶೋಧನಾ ಕೃತಿಯನ್ನು ಹೊರತರುವ ಆಶಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT