ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುನಾವಣೆ:ಜಿಲ್ಲೆಯಾದ್ಯಂತ 932 ಮತಗಟ್ಟೆ’

Last Updated 8 ಏಪ್ರಿಲ್ 2014, 9:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಉಡುಪಿ– ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ  ಕ್ಷೇತ್ರದಲ್ಲಿ 6,74,982ಮತದಾರರಿದ್ದು, 932 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೀತಿ ಸಂಹಿತೆ ಜಾರಿ ತಂಡಗಳು 106 ಪ್ರಕರಣಗಳನ್ನು ದಾಖಲಿಸಿದ್ದು, 65 ಜನರನ್ನು ಬಂಧಿಸಿ ಮದ್ಯ ಸೇರಿದದಂತೆ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತ ನಾಡಿ, ಹಾಸನ ಲೋಕಸಭಾ ಕ್ಷೇತ್ರದ ಕಡೂರು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ  4,35,735 ಪುರುಷರು, 4,26,570 ಮಹಿಳೆಯರು ಸೇರಿದಂತೆ ಒಟ್ಟು 8,62,348 ಮತದಾರ ರಿದ್ದು,1168 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಎಸ್ಪಿಯವರೊಂದಿಗೆ  ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಯನ್ನು ಗುರುತಿಸಿದ್ದು, ಕೇಂದ್ರ ಚುನಾವಣಾ ವೀಕ್ಷಕರುಗಳೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುನ್ಮಾನ ಮತಯಂತ್ರ ಗಳನ್ನು ಮೊದಲನೆಯ ಹಾಗೂ ಎರಡನೆಯ ಹಂತದಲ್ಲಿ ಪರಿಶೀಲನೆ ನಡೆಸಿ ವಿಧಾನಸಭಾ ಕ್ಷೇತ್ರವಾರಿ ಹಂಚಿಕೆ ಮಾಡಿ ಸಿದ್ಧಪಡಿಸಿ ಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ 1114 ಮತಗಟ್ಟೆ ಅಧ್ಯಕ್ಷಾಗಾಧಿಕಾರಿ (ಪಿ.ಆರ್.ಓ.), 1114 ಸಹಾಯಕ ಅಧ್ಯ ಕ್ಷಾಧಿಕಾರಿ, 2278 ಮತಗಟ್ಟೆ  ಅಧಿಕಾರಿಗಳು ಸೇರಿದಂತೆ ಒಟ್ಟು 4506 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಗೊಳಿಸಲಾಗಿದೆ. ಕಡೂರು ವಿಧಾನಸಭಾ ಕ್ಷೇತ್ರ 1147 ಅಧಿಕಾರಿಗಳು ಸೇರಿದರೆ ಒಟ್ಟು 5653 ಮತ ಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡ ಲಾಗಿದೆ. ಇವರುಗಳಿಗೆ ಮೊದನೆಯ ಹಂತದ ತರಬೇತಿ ನೀಡಿದ್ದು, 2ನೆಯ ಹಂತದ ತರಬೇತಿ ಇದೇ 10ರಂದು ಆಯಾ ವಿಧಾನಸಭಾ ಕ್ಷೇತ್ರ ದಲ್ಲಿಯೇ ನೀಡಲಾಗುವುದು ಎಂದರು.

ನೀತಿಸಂಹಿತೆ ಜಾರಿಗಾಗಿ 40 ಸಂಚಾರಿ ತಂಡ, 21 ಎಸ್.ಎಸ್.ಟಿ., 8 ವಿ.ಎಸ್.ಟಿ, 7ವಿವಿಟಿ, 5ಚುನಾವಣಾ ವೆಚ್ಚ ಉಸ್ತುವಾರಿ, 5ಅಕೌಂ ಟಿಂಗ್ ತಂಡ, 6ದೂರು ಪರಿಶೀಲನಾ ತಂಡ,81ಸೆಕ್ಟರಲ್ ಮತ್ತು ಮ್ಯಾಜಿಸ್ಟ್ರೇಟ್ ತಂಡ 1ಎಂಸಿ.ಮತ್ತು ಎಂಸಿ ತಂಡಗಳನ್ನು ರಚಿಸಿದ್ದು, ವಿಧಾನಸಭಾ ಕ್ಷೇತ್ರವಾರು ನೇಮಕಮಾಡಿರುವ ಸಂಚಾರಿ ತಂಡಗಳ ಮೇಲ್ವಿಚಾರಣೆಗಾಗಿ ಜಿಲ್ಲಾಮಟ್ಟದಲ್ಲಿ ನೋಡಲ್ ಅಧಿಕಾರಿ ಗಳನ್ನೊ ಳಗೊಂಡ  ತಂಡ ರಚಿಸಲಾಗಿದೆ ಎಂದು ಜಿಲ್ಲೆ ಯಲ್ಲಿ ಚುನಾವಣಾ ಸಿದ್ಧತೆ ಮಾಹಿತಿ ನೀಡಿದರು.

ವಿಧಾನಸಭಾ ಕ್ಷೇತ್ರವಾರು  ಚೆಕ್ ಪೋಸ್ಟ್ ಗಳಿಗೆ ನೇಮಕಾತಿ ಮಾಡಿರುವ  ಸ್ಥಿರ ಕಣ್ಗಾವಲು  ತಂಡಗಳ ಮೇಲ್ವಿಚಾರಣೆಗಾಗಿ ಚಿಕ್ಕಮಗಳೂರು, ಮೂಡಿಗೆರೆ, ಕಡೂರು,ತರೀಕೆರೆ ಮತ್ತು ಶೃಂಗೇರಿ ಕ್ಷೇತ್ರಕ್ಕೆ ತಲಾ 1 ನೋಡೆಲ್ ಅಧಿಕಾರಿಗಳತಂಡ ರಚಿಸಲಾಗಿದೆ. ಈ ತಪಾಸಣಾ ಗೇಟುಗಳಲ್ಲಿ ಕಾರ್ಯನಿರ್ವಹಿಸಲು ಕೆಎಸ್ಆರ್ ಟಿಸಿಯಿಂದ  ಓರ್ವ ಸದಸ್ಯರನ್ನು ನೇಮಕಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣಾವೆಚ್ಚ ಮೇಲ್ವಿಚಾರಣೆಗೆ ತಂಡ ರಚಿಸಿದ್ದು, ಈ ಸಮಿತಿ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್‌ ತೆರೆಯ ಲಾಗಿದೆ.  ಕ್ರೋಡೀಕರಿಸಿದ ಮಾಹಿತಿ ಯನ್ನು ಪ್ರತಿದಿನ ಚುನಾವಣಾಧಿಕಾರಿ ಹಾಗೂ ಚುನಾ ವಣಾ ಆಯೋಗಕ್ಕೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ನೀತಿ ಸಂಹಿತೆ ಉಲ್ಲಂಘನೆ: ಮಾದರಿ ನೀತಿ ಸಂಹಿತೆ (ಅಬ್ಕಾರಿ) ತಂಡ ಜಿಲ್ಲೆಯ 332 ಸ್ಥಳಗಳ ಮೇಲೆ ದಾಳಿ ನಡೆಸಿ 89 ಪ್ರಕರಣ ದಾಖಲಿಸಿಕೊಂಡಿದೆ. 63 ಜನರನ್ನು ಬಂಧಿಸಿದ್ದು, 178 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅದರ ಬೆಲೆ ₨4,44,192,  ಎಂಸಿಸಿ ತಂಡ 4ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದೆ. ಎಸ್ಎಸ್ಟಿ ತಂಡ 1ಪ್ರಕರಣ ದಾಖಲಿ ಸಿಕೊಂಡು ಒಬ್ಬನನ್ನು ಬಂಧಿಸಿ, ವಶಪಡಿಸಿ ಕೊಂಡಿರುವ ವಸ್ತುಗಳ ಬೆಲೆ 6ಲಕ್ಷ ರೂಪಾಯಿಗಳು, ಎಂಸಿ ಮತ್ತು ಎಂಸಿ ತಂಡ3 ಪ್ರಕರಣ ದಾಖಲಿಸಿ ಕೊಂಡಿದೆ ಎಂದರು.
ಜಿಲ್ಲೆಯಲ್ಲಿ 5653 ಚುನಾವಣಾ ಸಿಬ್ಬಂದಿ, 510ಮೈಕ್ರೋ ವೀಕ್ಷಕರು, 2390 ಪೊಲೀಸ್ ಸಿಬ್ಬಂದಿ 649 ವಾಹನ ಚಾಲಕ, ಸಹಾಯ ಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿ ಸಲಾಗಿದೆ ಎಂದು ತಿಳಿಸಿದರು.

ಫೆಬ್ರುವರಿ 1ರಿಂದ ಮಾರ್ಚ್ 26ವರೆಗೆ  ಒಟ್ಟು 23,454 ಮತದಾರರು ಮತಪಟ್ಟಿಗೆ ಸೇರ್ಪಡೆ ಗೊಂಡಿದ್ದಾರೆ. ಚುನಾವಣಾ ಕಾರ್ಯಕ್ಕೆ  ನಿಯೋಜಿಸಿರುವ ಸರ್ಕಾರಿ ನೌಕರರ ಪೈಕಿ ಶೇ.70ರಷ್ಟು  ನೌಕರರು ಈಗಾಗಲೇ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದರು

ಮತದಾನದ ಹಕ್ಕು ಚಲಾಯಿಸುವ ಸಂಬಂಧ ಮತದಾರರನ್ನು ಪ್ರೇರೇಪಿಸಲು ಚುನಾವಣಾ ಆಯೋಗ ಮತದಾರರ ಜಾಗೃತಿ ಆಂದೋಲನ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ  ಸ್ವೀಪ್ ಸಮಿತಿ ರಚಿಸಲಾಗಿದೆ. ಇದು ಜನಸಂದಣಿ ಪ್ರದೇಶದಲ್ಲಿ, ಕಾಲೇಜ್ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ, ರಾಜ್ಯ ರಸ್ತೆಸಾರಿಗೆ ಬಸ್‌ಗಳ ಮೇಲೆ ಮತದಾನ ಜಾಗೃತಿಗೆ ಹೋರ್ಡಿಂಗ್ಸ್ ಹಾಕಲಾಗಿದೆ. ಕಾಲೇಜುಗಳಲ್ಲಿ ಸಿ.ಡಿ.ಗಳು, ಪವರ್ ಪಾಯಿಂಟ್ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮತದಾನ ಬಹಿಷ್ಕರಿಸಿದ್ದ ಬಲಿಗೆ ಗ್ರಾಮಕ್ಕೆ ತೆರಳಿ ಜನರೊಂದಿಗೆ ಚರ್ಚಿಸಿದ್ದು, ಅವರು ಮತದಾನ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಮತದಾನ ಬಹಿಷ್ಕರಿಸಿರುವ ಚೇರನಹಳ್ಳಿ ಮತ್ತು ಸಾಲುಗುಂಬ್ರಿ ಗ್ರಾಮಗಳಿಗೆ ಸ್ವೀಪ್ ತಂಡದವರು ತೆರಳಿ ಮತದಾನಕ್ಕೆ ಮನವೊಲಿಸಲಿದ್ದಾರೆ. ಮತದಾನ ಇದೇ 17ರಂದು ಬೆಳಿಗ್ಗೆ 7ರಿಂದ ಸಂಜೆ 6ಗಂಟೆವರೆಗೆ ನಡೆಯಲಿದೆ ಎಂದರು.

ಉಡುಪಿ ಚಿಕ್ಕಮಗಳೂರು ಕ್ಷೇತ್ರ: 13,86,515 ಮತದಾರರು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 6,78,710 ಪುರುಷರು,7,07,742 ಮಹಿಳೆಯರು ಸೇರಿದಂತೆ ಒಟ್ಟು 13,86,515 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ತಿಳಿಸಿದರು.

ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 338561 ಮಂದಿ ಪುರುಷರು, 3,72,945 ಮಹಿಳೆಯರು ಸೇರಿದಂತೆ ಒಟ್ಟು 7,11,533 ಮತದಾರರಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 89,832ಪುರುಷರು, 98,691ಮಹಿಳೆಯರು ಸೇರಿ ಒಟ್ಟು 1,88,529 ಮತದಾರರು ಇದ್ದರೆ, ಉಡುಪಿಯಲ್ಲಿ 92441ಪುರುಷರು, 98327 ಮಹಿಳೆಯರು ಸೇರಿದಂತೆ ಒಟ್ಟು 190785 ಮತದಾರರು, ಕಾಪು ಕ್ಷೇತ್ರ  77,228 ಪುರುಷರು, 87,338 ಮಹಿಳೆಯರು ಸೇರಿ 1,64,569 ಮತದಾರರನ್ನು ಹೊಂದಿದೆ. ಕಾರ್ಕಳದಲ್ಲಿ 79060 ಪುರುಷರು, 88589ಮಹಿಳೆಯರು ಸೇರಿ ಒಟ್ಟು 167650 ಮತದಾರರು ಇದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 3,40,149 ಪುರುಷರು33,47,97ಮಹಿಳೆಯರು ಸೇರಿದಂತೆ ಒಟ್ಟು 674982ಮತದಾರರು ಇದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರ 76,572 ಪುರುಷರು, 77,393 ಮಹಿಳೆಯರು ಸೇರಿದಂತೆ ಒಟ್ಟು 1,53,969 ಮತದಾರರನ್ನು ಹೊಂದಿದೆ. ಮೂಡಿಗೆರೆ 78094ಪುರುಷರು, 78833 ಮಹಿಳೆಯರ ಸೇರಿ ಒಟ್ಟು  156935 ಮತದಾರರು, ಚಿಕ್ಕಮಗಳೂರಿನಲ್ಲಿ 99670ಪುರುಷರು, 97867ಮಹಿಳೆಯರ ಸೇರಿದಂತೆ ಒಟ್ಟು 197554 ಮತದಾರರು ಇದ್ದರೆ, ತರೀಕೆರೆ ವಿಧಾಣಸಭಾಕ್ಷೇತ್ರ 85813ಪುರುಷರು, 80704 ಮಹಿಳೆಯರು ಸೇರಿ ಒಟ್ಟು166524 ಮತದಾರರನ್ನು ಹೊಂದಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದು,  ಈ ಕ್ಷೇತ್ರ  95586ಪುರುಷರು, 91773 ಮಹಿಳೆಯರು ಸೇರಿದಂತೆ ಒಟ್ಟು 187366 ಮತದಾರರನ್ನು ಹೊಂದಿದೆ. ಕಡೂರು  ಕ್ಷೇತ್ರ ಸೇರಿದರೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದದಲ್ಲಿ  435735ಪುರುಷರು, 426770 ಮಹಿಳೆಯರು ಸೇರಿದಂತೆ ಒಟ್ಟು 862348 ಮತದಾರರು ಇದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT