ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಪ್ರೀತಿ, ವಿಶ್ವಾಸ ಹೃದಯ ತುಂಬಿದೆ’

Last Updated 19 ಡಿಸೆಂಬರ್ 2013, 9:53 IST
ಅಕ್ಷರ ಗಾತ್ರ

ಕೆ.ಗೊಲ್ಲರಹಟ್ಟಿ(ಕಡೂರು): ‘ನನ್ನ 60 ವರ್ಷಗಳ ರಾಜಕೀಯ ಏಳು–ಬೀಳಿನ ಹಾದಿಯಲ್ಲಿ ಜನತೆ ತೋರಿದ ಅಭಿಮಾನ, ಪ್ರೀತಿ, ವಿಶ್ವಾಸ ಹೃದಯ ತುಂಬಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸಂತಸ ವ್ಯಕ್ತ ಪಡಿಸಿದರು.

ಕಡೂರು ತಾಲ್ಲೂಕು ಕೆ.ಗೊಲ್ಲರಹಟ್ಟಿ ಯಲ್ಲಿ ಮಂಗಳವಾರ ಜರುಗಿದ ಜುಂಜ ಪ್ಪ ಜಾತ್ರಾ ಮಹೋತ್ಸವ ಮತ್ತು ಕಾಡು ಗೊಲ್ಲ(ಯಾದವ)ರ ಸಮಾ ವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಇನ್ನೊಬ್ಬರಿಗೆ ರಾಜಕೀಯ ಅಭಿವೃದ್ಧಿಯ ಮೆಟ್ಟಿಲಾದೆನೇ ಹೊರತು ಯಾರಿಗೂ ದ್ರೋಹ ಮಾಡಿಲ್ಲ. ನನಗೆ ಅಧಿಕಾರ ದೊರೆತ ಸಂದರ್ಭದಲ್ಲಿ ಎಲ್ಲ ವರ್ಗ ಮತ್ತು ಸಮುದಾಯಗಳಲ್ಲಿ ಅದನ್ನು ಹಂಚಿಕೊಂಡಿದ್ದೇನೆ ಮತ್ತು ಜನಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸಿಯೂ ಇದ್ದೇನೆ. ನಾನು ಪ್ರತಿನಿಧಿಸುವ ಕ್ಷೇತ್ರದ ಭಾಗ ಕಡೂರಿಗೆ ಶಾಶ್ವತ ನೀರಾವರಿ ಒದಗಿಸದ ಖೇದವಿದೆ, ಈಗಿನ ಶಾಸಕ ದತ್ತ ಅವರು ಎಲ್ಲ ವಿಷಯಗಳಲ್ಲಿ ಸಮರ್ಥರಿದ್ದು ಈ ಕುರಿತು ನನ್ನ ಪರವಾಗಿ ಹೋರಾಟ ಮಾಡಲಿ, ಕ್ಷೇತ್ರದ ಜನ ನೀವು ಅವ ರನ್ನು ಬೆಂಬಲಿಸಿ ಬೆಳೆಸಿರಿ’ ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಯಾದವ ಸಮುದಾಯದ ಮುಖಂಡ ಎ.ಕೃಷ್ಣಪ್ಪ ಮಾತನಾಡಿ  ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಣ್ಣು–ಕಿವಿ ಇಲ್ಲದ ಜನಪರವಲ್ಲದ ಸರ್ಕಾರವಾಗಿದ್ದು ಇದು ಹೆಚ್ಚು ಬಾಳಿಕೆ ಬರಲಾರದು. ವಚನವೇ ಬೇರೆ ಮಾಡುವುದೇ ಬೇರೆ ಆಗಿರುವ ಈ ಸರ್ಕಾರ ರೈತರನ್ನು ಎಲ್ಲ ವಿಷಯಗಳಲ್ಲಿ ಕಾಡುತ್ತಿದೆ. ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ರಾಜ್ಯದಲ್ಲಿ  ಎಂದರು.

ಶಾಸಕ ವೈ.ಎಸ್‌.ವಿ.ದತ್ತ ಮಾತನಾಡಿ, ಈ ಭಾಗದಲ್ಲಿ ಕರಡಿ ಹಾವಳಿ ವಿಪರೀತವಾಗಿದ್ದು ಸಮಸ್ಯೆ ಬಗೆಹರಿದು ಜನ ನಿರ್ಭೀತಿಯಿಂದ ಓಡಾಡುವಂತಾ ಗಬೇಕು ಮತ್ತು ತಾಲ್ಲೂಕಿನ 22 ಗೊಲ್ಲರಹಟ್ಟಿಗಳ ಪೈಕಿ 17 ಗೊಲ್ಲರ ಹಟ್ಟಿಗಳಲ್ಲಿ ತಲಾ 5ಲಕ್ಷ ರೂ ವೆಚ್ಚದಲ್ಲಿ ‘ಸೂತಕ ಗೃಹ’(ಮಹಿಳೆಯರ ಹೊರಗಿನ ದಿನಗಳಲ್ಲಿ ವಾಸ ಮಾಡಲು) ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದರು.

ಇತ್ತೀಚೆಗೆ ಕರಡಿ ದಾಳಿಯಿಂದ ಮೃತ ಪಟ್ಟ ಕಲ್ಕೆರೆಯ ತಿಮ್ಮಕ್ಕನ ಕುಟುಂಬಕ್ಕೆ ಸರ್ಕಾರ ನೀಡುವ ಪರಿಹಾರ ಧನದ ಚೆಕ್‌ ಅನ್ನು ದೇವೇಗೌಡರು ವಿತರಿಸಿ ದರು. ಹಿಂದುಳಿದ ವರ್ಗಗಳ ಆಯೋ ಗದ ಮಾಜಿ ಸದಸ್ಯ ಬಿ.ಗುರುಸ್ವಾಮಿ, ಜಿಲ್ಲಾಪಂಚಾಯಿತಿ ಸದಸ್ಯೆ ಪದ್ಮಾ ಚಂದ್ರಪ್ಪ, ಗ್ರಾ.ಪಂ ಅಧ್ಯಕ್ಷೆ ಸರೋ ಜಮ್ಮ, ತಿಪ್ಪೇಸ್ವಾಮಿ, ಎ. ಆನಂದ್‌ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT